ಅರೋಗ್ಯ

ಹೊಟ್ಟೆ ಉಬ್ಬರ ಜಾಸ್ತಿ ಆಗಿ ಗ್ಯಾಸ್ ಆಚೆ ಬರ್ದೇ ಕಷ್ಟ ಪಡ್ತಿದ್ರೆ ಹೀಗ್ ಮಾಡಿ ಸರಿ ಮಾಡ್ಕೊಳ್ಳಿ

ಹೊಟ್ಟೆ ಉಬ್ಬರ

ಹೊಟ್ಟೆ ಉಬ್ಬುವುದು ಸಣ್ಣ ಕರುಳಿನಲ್ಲಿ ಅನಿಲ ಹೆಚ್ಚಾಗುವ ಕಾರಣ ಹೊಟ್ಟೆ ಪೂರ್ಣವಾಗಿ ಬಿಗಿಯಾಗುತ್ತದೆ ಅನೇಕ ಬಾರಿ ಹೊಟ್ಟೆ ಉಬ್ಬುವುದು, ಸೆಳೆತ, ನೋವು, ಅತಿಸಾರ, ಉಸಿರಾಟದ ತೊಂದರೆ ಮತ್ತು ಕೆಳ ಬೆನ್ನುನೋವಿನಂತಹ ಇತರ ರೋಗಲಕ್ಷಣಗಳೊಂದಿಗೆ ಇರುತ್ತದೆ.

 

ಜೇನು ಮತ್ತು ದಾಲ್ಚಿನ್ನಿ

ಜೇನು ಮತ್ತು ದಾಲ್ಚಿನ್ನಿ ಮಿಶ್ರಣ ಹಲವು ಸಮಸ್ಯೆಗಳಿಗೆ ಅದ್ಭುತ ಸಂಜೀವಿನಿ ಅನ್ನೋದು ಎಷ್ಟೋ ಜನರಿಗೆ ಗೊತ್ತಿಲ್ಲ  ಶತಮಾನಗಳಿಂದ ಯುನಾನಿ ಮತ್ತು ಆಯುರ್ವೇದದ ತಜ್ಞರು ಈ ಔಷಧೀಯನ್ನ           ಬಳಸ್ತಾ ಇದ್ದಾರೆ.

 

ಹಳದಿ ಸಾಸಿವೆ

 

 

ಹಳದಿ ಸಾಸಿವೆಯನ್ನು ಒಂದು ಚಮಚ ತೆಗೆದುಕೊಂಡು ಅದನ್ನು ಒಂದು ಲೋಟ ಬಿಸಿ ನೀರಿನಲ್ಲಿ ಚೆನ್ನಾಗಿ ಕಾಯಿಸಿ ಕುಡಿದರೆ ಐದರಿಂದ ಹತ್ತು ನಿಮಿಷದೊಳಗೆ ಗ್ಯಾಸ್ಟ್ರಿಕ್ ನಿವಾರಣೆಯಾಗುತ್ತದೆ .

 

ಅಡುಗೆ ಸೋಡಾ

ಒಂದು ಲೋಟ ನೀರಿಗೆ ಒಂದು ಚಮಚ ಅಡುಗೆ ಸೋಡಾ ಹಾಗೂ ಅರ್ಧ ಹೋಳು ನಿಂಬೆ ರಸವನ್ನು ಚೆನ್ನಾಗಿ ಹಿಂಡಿ ಕುಡಿದರೆ ಗ್ಯಾಸ್ ಟ್ರಬಲ್ ಸಮಸ್ಯೆಯಿಂದ ನಿವಾರಣೆ ಹೊಂದಬಹುದು .

 

ಕೊತ್ತಂಬರಿ (ದನಿಯಾ)ಬೀಜ ಮತ್ತು ಒಣಶುಂಠಿ

ಕೊತ್ತಂಬರಿ (ದನಿಯಾ)ಬೀಜ ಮತ್ತು ಒಣಶುಂಠಿಯನ್ನು ಚೆನ್ನಾಗಿ ಜಜ್ಜಿಕೊಂಡು ಕುದಿಯುವ ನೀರಿಗೆ ಹಾಕಿ ಸ್ವಲ್ಪ ಹೊತ್ತಿನ ನಂತರ ಇದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಶೋಧಿಸಿ ಕುಡಿದರೆ ಗ್ಯಾಸ್ಟ್ರಿಕ್ ಸಮಸ್ಯೆ ಮಾಯವಾಗುತ್ತದೆ.

 

ಜೀರಿಗೆ

 

 

ಎರಡು ಲೋಟ ನೀರನ್ನು ಚೆನ್ನಾಗಿ ಕಾಯಿಸಿ ಅದಕ್ಕೆ ಎರಡು ಚಮಚ ಜೀರಿಗೆಯನ್ನು ಹಾಕಿ ಕುದಿಸಿ, ಒಂದು ಲೋಟದಷ್ಟಾಗುವವರೆಗೂ ಕುದಿದ ಮೇಲೆ ತಣ್ಣಗೆ ಆರಿಸಿ ಕುಡಿಯಬೇಕು.

 

ಕುಂಬಳಕಾಯಿ

ಕುಂಬಳಕಾಯಿಯಲ್ಲಿ ವಿಟಮಿನ್ ಎ, ಪೊಟ್ಯಾಸಿಯಮ್ ಮತ್ತು ಫೈಬರ್ ಹೆಚ್ಚಿನ ಮಟ್ಟದಲ್ಲಿದ್ದು ಹೊಟ್ಟೆ ಉಬ್ಬುವುದು ತಡೆಯಲು ಅತ್ಯುತ್ತಮ ಮಾರ್ಗವಾಗಿದೆ ಇದರಲ್ಲಿನ ಫೈಬರ್
ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top