ಮನೋರಂಜನೆ

ರಾಕಿಂಗ್ ಸ್ಟಾರ್ ಯಶ್’ಗೆ ಇಲ್ಲಿ ಶತ್ರುಗಳೇ ಜಾಸ್ತಿ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಮೇಲೆ ವಿಪರೀತ ಕುತೂಹಲ ಹುಟ್ಟುಕೊಂಡಿರೋದು ಈಗ ಹಳೆ ಸುದ್ದಿ, ಚಿತ್ರದ ಬಗ್ಗೆ ಯಶ್ ಅಭಿಮಾನಿಗಳು ಸೇರಿದಂತೆ ಸಿನಿರಸಿಕರೆಲ್ಲರಲ್ಲೂ ತಲೆಕೆಡಿಸಿಕೊಂಡು ಕೂತಿದ್ದಾರೆ. ಅದ್ಧೂರಿ ಮೇಕಿಂಗ್, ಪೋಸ್ಟರ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವಂತಹ ಸ್ಟಿಲ್ಲುಗಳ ಮೂಲಕವೇ ಭಾರಿ ಸಂಚಲನ ಸೃಷ್ಟಿಸಿರುವ ಈ ಚಿತ್ರ ಎಬ್ಬಿಸಿರೋ ಅಲೆ ಕಂಡು ಬಹುತೇಕರು ಅಚ್ಚರಿಗೊಂಡಿದ್ದಾರೆ. ಚಿತ್ರದ ಮೇಲಿನ ನಿರೀಕ್ಷೆ ಯಶ್ ಕೆಜಿಎಫ್‌ಗಾಗೇ ಬಿಟ್ಟಿರೋ ಉದ್ದ ಗಡ್ಡದ ಕೂದಲಂತೆಯೇ ದಿನೇ ದಿನೆ ಬೆಳೆದುಕೊಳ್ಳಲಾರಂಭಿಸಿದೆ!

 

 

ಇದೀಗ ಇಂತ ಕೆಜಿಎಫ್ ಚಿತ್ರತಂಡದಿಂದ ಬ್ರೇಕಿಂಗ್ ಸುದ್ದಿಯೊಂದು ಹೊರಬಿದ್ದಿದ್ದು ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಜೊತೆ ಸೆಣೆಸಾಡಲು ವಿಲನ್’ಗಳ ದಂಡೇ ಇದೆಯಂತೆ. ಸಾಮಾನ್ಯವಾಗಿ ಸ್ಟಾರ್ ನಟ ಸಿನಿಮಾಗಳಲ್ಲಿ ಗರಿಷ್ಟ ಅಂದರೆ ಮೂರು ಇಲ್ಲ ನಾಲ್ಕು ಜನ ವಿಲನ್’ಗಳಿತ್ತಾರೆ. ಆದರೆ ಕೆಜಿಎಫ್ ಚಿತ್ರದಲ್ಲಿ ಯಶ್ ವಿರುದ್ಧ ಕಾದಾಡಲು ಹತ್ತಾರು ಸಂಖ್ಯೆಯಲ್ಲಿ ವಿಲನ್’ಗಳು ಇದ್ದಾರಂತೆ. ವಿಶೇಷ ಅಂದರೆ ಆ ವಿಲನ್ ಗಳಲ್ಲಿ ಒಂದಿಬ್ಬರನ್ನು ಹೊರತುಪಡಿಸಿದರೆ ಮಿಕ್ಕೆಲ್ಲವರು ಹೊಸಬರಾಗಿದ್ದಾರೆ. ಇದೇ ಮೊದಲಬಾರಿಗೆ ಕ್ಯಾಮರಾ ಎದುರಿಸುತ್ತಿದ್ದಾರೆ.

ಚಿತ್ರದಲ್ಲಿ 80ರ ದಶಕದ ಚಿತ್ರದ ಹೀರೋ ಆಗಿ ಯಶ್ ಕಾಣಿಸಿಕೊಳ್ಳುತ್ತಿದ್ದಾರೆ. ಉದ್ದವಾದ ಗಡ್ಡಬಿಟ್ಟು ಮಾಸ್ ಲುಕ್ಕಿನಲ್ಲಿ ಕಾಣಿಸಿಕೊಳ್ಳುತ್ತಿರುವ ಯಶ್ ಅವರ ಎದುರು ಹೊಡೆದಾಡಲು ಬಹುತೇಕ ಖಳನಟರನ್ನು ಹೊಸಬರನ್ನು ಹುಡುಕಲಾಗಿದೆಯಂತೆ. ನೀಳ ಕೂದಲು, ದೈತ್ಯ ದೇಹ, ವಿಕಾರ ಮುಖ, ಹೆಣ್ಣೆಗೆಂಪು ಬಣ್ಣದ ನೂರಾರು ವಿಲನ್​ಗಳು ಚಿತ್ರದ ಉದ್ದಕ್ಕೂ ಇರಲಿದ್ದಾರೆ. ಹಾಗಾಗಿ ಕೆಜಿಎಫ್ ಚಿತ್ರದಲ್ಲಿ ನಾಯಕ ಯಶ್’ಗೆ ಶತ್ರುಗಳೇ ಹೆಚ್ಚು ಎನ್ನಬಹುದು.

 

 

ಅಂದಹಾಗೆ ಹೊಂಬಾಳೆ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದೂ ಕೂಡಾ ಈ ಚಿತ್ರದ ಆಕರ್ಷಣೆಗಳಲ್ಲೊಂದು. ಇನ್ನುಳಿದಂತೆ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡುತ್ತಿದ್ದು ಭುವನ್ ಗೌಡ ಅವರ ಕ್ಯಾಮರಾ ಕೈಚಳಕ ಚಿತ್ರಕ್ಕಿರಲಿದೆ. ಶ್ರೀನಿಧಿ ಶೆಟ್ಟಿ ಯಶ್’ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top