ಮನೋರಂಜನೆ

ಸಂಕಷ್ಟಕರ ಗಣಪತಿಗೆ ಸಿಕ್ತು ಪವರ್‌ಫುಲ್ ಸಾಥ್.

ಅಪರೂಪದ ‘ಏಲಿಯನ್‌ ಹ್ಯಾಂಡ್‌ ಸಿಂಡ್ರೋಮ್‌’ ಕಾಯಿಲೆಯಿಂದ ಬಳಲುತ್ತಿರುವ ಯುವಕನ ಕತೆಯನ್ನು ಹೊಂದಿರುವ ‘ಸಂಕಷ್ಟಕರ ಗಣಪತಿ’ ಎಂಬ ಸಿನಿಮಾ ಪ್ರೇಕ್ಷಕವಲಯದಲ್ಲಿ ಒಂದು ರೀತಿಯ ಕುತೂಹಲವನ್ನು ಹುಟ್ಟುಹಾಕಿದೆ. ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿ ಕೈಮೇಲೆ ಹಿಡಿತ ಇಲ್ಲದೇ ಸೃಷ್ಟಿಸುವ ರಾದ್ಧಾಂತ, ಅವಾಂತರವನ್ನು ಹಾಸ್ಯರೂಪದಲ್ಲಿ ಈ ಚಿತ್ರದಲ್ಲಿ ತೋರಿಸಿಲಾಗುತ್ತಿದೆ.

 

 

ಈಗಾಗಲೇ ಬಿಡುಗಡೆಗೊಂಡಿರುವ ಟ್ರೈಲರ್ ಮೂಲಕವೇ ಕೂತೂಹಲ ಕೆರಳಿಸಿರುವ ಈ ಚಿತ್ರದ ಹಾಡುಗಳು ಇಂದು ಸಾಕ್ಷತ್ ಪುನೀತ್ ರಾಜಕುಮಾರ್ ಅವರ ಕೈಯಿಂದಲೇ ಲೋಕಾರ್ಪಣೆಗೊಳ್ಳುತ್ತಿವೆ. ಚಿತ್ರದ ಆಡಿಯೋ ರೈಟ್ಸ್ ಅನ್ನು ತಮ್ಮ ಆಡಿಯೋ ಕಂಪನಿ ಪಿಆರ್’ಕೆ ಆಡಿಯೋ ಸಂಸ್ಥೆಯ ಮೂಲಕ ಖರೀದಿಸಿದ್ದ ಪುನೀತ್ ಹೊಸಬರ ತಂಡಕ್ಕೆ ಬೆಂಬಲವಾಗಿ ಇಂದು ಆಡಿಯೋ ರಿಲೀಸ್ ಮಾಡುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕರಾದ ಗುರುಕಿರಣ್, ರಘು ದೀಕ್ಷಿತ್ ಕೂಡ ಉಪಸ್ಥಿತರಿರಲಿದ್ದಾರೆ.

‘ಪನ್ಮಾಂಡ್ರಿ ಕ್ರಾಸ್‌’ ಎಂಬ ಕಿರುಚಿತ್ರವನ್ನು ನಿರ್ದೇಶಿಸಿದ್ದ ಅರ್ಜುನ್ ಕುಮಾರ್ ಸಂಕಷ್ಟಕಾರ ಗಣಪತಿ ಮೂಲಕ ಬೆಳ್ಳಿತೆರೆಗೆ ನಿರ್ದೇಶಕನಾಗಿ ಎಂಟ್ರಿಕೊಡುತ್ತಿದ್ದಾರೆ. ಚಿತ್ರದಲ್ಲಿ ಲಿಖಿತ್‌ ಶೆಟ್ಟಿ ಹಾಗೂ ಶೃತಿ ನಾಯಕನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಚ್ಯುತ್‌ ಕುಮಾರ್‌ , ಮಂಜುನಾಥ್‌, ಭೂಷಣ್‌ ಸೇರಿದಂತೆ ನುರಿತ ಕಲಾವಿದರನ್ನು ಒಳಗೊಂಡಿದೆ. ಡೈನಾಮೈಟ್‌ ಫಿಲ್ಮ್ಸ್ ಎಂಬ ಬ್ಯಾನರ್‌ಅಡಿಯಲ್ಲಿ ಮೂಡಿಬರುತ್ತಿರುವ ಈ ಸಿನಿಮಾಗೆ ರಾಜೇಶ್‌ ಬಾಬು, ಫೈಜಾನ್‌ ಖಾನ್‌, ಲಿಖಿತ್‌ ಶೆಟ್ಟಿ ನಿರ್ಮಾಪಕರಾಗಿದ್ದಾರೆ. ರಿತ್ವಿಕ್‌ ಮುರುಳಿಧರ್‌ರವರ ಸಂಗೀತ ಸಂಯೋಜನೆಯಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top