ಸಮಾಚಾರ

ಶ್ರೀದೇವಿ ಮಗಳ ಮೊದಲ ಚಿತ್ರದ ಟ್ರೈಲರ್ ರಿಲೀಸ್

ಖ್ಯಾತ ನಟಿ ದಿವಂಗತ ಶ್ರೀದೇವಿ ಅವರ ಮಗಳಾದ ಜಾಹ್ನವಿ ಕಪೂರ್ ಬಾಲಿವುಡ್ ಅಂಗಳಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಜಾಹ್ನವಿ ಕಪೂರ್ ನಟನೆಯ ಪ್ರಥಮ ಸಿನಿಮಾ ‘ಧಡಕ್’ ನ ಟ್ರೇಲರ್ ಬಿಡುಗಡೆಗೊಂಡಿದೆ. 2016ರಲ್ಲಿ ಮರಾಠಿ ಭಾಷೆಯಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿದ್ದ ‘ಸೈರಾಟ್’ ಚಿತ್ರದ ಕಥೆಯನ್ನಾಧರಿಸಿರುವ ‘ಧಡಕ್’ ಸಿನೆಮಾದಲ್ಲಿ ಜಾಹ್ನವಿ ನಾಯಕಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

 

 

ಆದರೆ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಜಾಹ್ನವಿ ಕಪೂರ್ ಸಹೋದರ ಅರ್ಜುನ್ ಕಪೂರ್ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಸಾಮಾಜಿಕ ಜಾಲತಾಣದದಲ್ಲಿ ತನ್ನ ಸಹೋದರಿ ಕುರಿತು ಈ ರೀತಿ ಪೋಸ್ಟ್ ಮಾಡಿದ್ದಾರೆ, “ಈ ದಿನ ಅಭಿಮಾನಿಗಳ ಹೃದಯದಲ್ಲಿ ನೀನು ಎಂದಿಗೂ ಉಳಿದುಬಿಡ್ತೀಯ ಜಾಹ್ನವಿ. ಯಾಕೆಂದರೆ ಈ ದಿನ ನೀನು ಅಭಿನಯಿಸಿದ ಮೊದಲ ಸಿನಿಮಾ ಧಡಕ್ ಟ್ರೇಲರ್ ರಿಲೀಸ್ ಆಗುತ್ತಿದೆ. ನಾನು ಮುಂಬೈನಲ್ಲಿ ಇಲ್ಲದ ಕಾರಣ ಈ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯ ಆಗುತ್ತಿಲ್ಲ, ನನ್ನನ್ನು ಕ್ಷಮಿಸು. ಆದರೆ ನಾನು ನಿನ್ನ ಪಕ್ಕದಲ್ಲೇ ಇರುತ್ತೇನೆ” ಎಂದು ಬರೆದಿದ್ದಾರೆ. ಧಡಕ್ ಸಿನಿಮಾ ತಂಡಕ್ಕೆ, ಚಿತ್ರ ನಿರ್ದೇಶಕರಿಗೆ, ನಿರ್ಮಾಪಕ ಕರಣ್ ಜೋಹಾರ್ ಅವರಿಗೆ ಅರ್ಜುನ್ ಕಪೂರ್ ಶುಭ ಕೋರಿದ್ದಾರೆ ಎಂದು ತಿಳಿದು ಬಂದಿದೆ

ಸಾಮಾಜಿಕ ಜಾಲತಾಣಗಳಲ್ಲಿ ‘ಧಡಕ್’ ಚಿತ್ರದ ಟ್ರೈಲರ್ ಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ, ಆಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಟ್ರೈಲರ್ ವೀಕ್ಷಣೆ ಮಾಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top