ಸಮಾಚಾರ

ಬೂ…ಮತ್ತು ಹಿ… ಹೇಳಿಕೆಯಿಂದ ಮತ್ತೊಂದು ವಿವಾದದಲ್ಲಿ ಸಿಲುಕಿದ ಪ್ರಿಯಾಂಕಾ ಚೋಪ್ರಾ

ಕ್ವಾಂಟಿಕೋ ವಿವಾದ ಬೆನ್ನಲ್ಲೇ ಈಗ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾರ ಈ ಹಿಂದಿನ ‘ಭಾರತೀಯ ಚಿತ್ರಗಳಲ್ಲಿ ಎಲ್ಲವೂ ಬೂ.. ಮತ್ತು ಹಿ.. ಮೇಲೆ ನಿಂತಿದೆ’ ಎಂಬ ಹೇಳಿಕೆ ಇದೀಗ ಟ್ರೋಲ್ ಆಗುತ್ತಿದೆ ಎಂದು ತಿಳಿದು ಬಂದಿದೆ.

ಈಗ ಹಾಲಿವುಡ್ ಚಿತ್ರದಲ್ಲಿ ಮಿಂಚುತ್ತಿರುವ ಪ್ರಿಯಾಂಕಾ ಚೋಪ್ರಾ ರವರು 2016ರ ಎಮಿ ಅವಾರ್ಡ್ ಸಮಾರಂಭದಲ್ಲಿ ಸುದ್ದಿಗಾರರು ಜತೆ ಮಾತನಾಡುತ್ತ ಭಾರತೀಯ ಚಿತ್ರಗಳಲ್ಲಿ ಡ್ಯಾನ್ಸ್ ಗಳಲ್ಲಿ ಎಲ್ಲವೂ ಸೊಂಟ ಹಾಗು ಎದೆ ಮೇಲೆ ನಿಂತಿದೆ ಎಂದು ಹೇಳಿದ್ದರು. ಇದೀಗ ಈ ಹೇಳಿಕೆಯನ್ನು ಇಟ್ಟುಕೊಂಡು ಟ್ವೀಟರಿಗರು ಟ್ರೋಲ್ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

 

 

ಕ್ವಾಂಟಿಕೋ ವಿವಾದದ ಕುರಿತು ‘ನನಗೆ ತುಂಬಾ ಬೇಸರವಾಗಿದೆ. ಕ್ವಾಂಟಿಕೋ ಎಪಿಸೋಡಿನಲ್ಲಿ ಆ ರೀತಿ ತೋರಿಸಿರುವುದು ಭಾರತೀಯರ ಮನಸ್ಸಿಗೆ ಘಾಸಿಯಾಗಿರುವುದಕ್ಕೆ ನಾನು ಕ್ಷಮೆಯನ್ನು ಕೇಳುತ್ತೇನೆ. ನೋವು ಮಾಡುವ ಉದ್ದೇಶ ನನಗೆ ಇರಲಿಲ್ಲ. ನಾನು ಪ್ರಾಮಾಣಿಕವಾಗಿ ಕ್ಷಮೆ ಕೇಳುತ್ತಿದ್ದೇನೆ. ನಾನು ಭಾರತೀಯಳು ಎಂದು ಹೇಳಲು ಹೆಮ್ಮೆ ಪಡುತ್ತೇನೆ. ಆ ಭಾವನೆ ಎಂದಿಗೂ ಬದಲಾಗಲ್ಲ’ ಎಂದು ಪ್ರಿಯಾಂಕಾ ಚೋಪ್ರಾ ಟ್ವೀಟ್‌ ಮಾಡಿದ್ದರು.

 

ಈ ವಿವಾದಿತ ಎಪಿಸೋಡ್ ಪ್ರಸಾರವಾದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟೀಕೆ ಕೇಳಿಬಂದಿತ್ತು. ‘ಪ್ರಿಯಾಂಕಾ ಚೋಪ್ರಾ ಇಂಡಸ್ಟ್ರಿಗೆ ಹೊಸಬರಲ್ಲ. ಭಾರತೀಯಳಾಗಿ ಪ್ರಿಯಾಂಕಾ ಇದರಲ್ಲಿ ಒಪ್ಪಿದ್ದಾದರೂ ಹೇಗೆ? ಎಂದು ಪ್ರಶ್ನೆ ಕೇಳಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top