ಅರೋಗ್ಯ

ಕುತ್ತಿಗೆಹತ್ರ ಬೊಜ್ಜು ಬೀಳ್ಕೊಂಡು ಜೋಡಿಗಲ್ಲದ ರೀತಿ ನಿಮಗೂ ಆಗಿದ್ಯಾ,ಹಾಗಿದ್ರೆ ಚಿಂತೆಬಿಟ್ಟು ಈ 5 ಸಲಹೆಗಳನ್ನ ಟ್ರೈ ಮಾಡಿ

ದವಡೆ ಕೆಳಗೆ ಇರುವ ಗಲ್ಲ(ಚಿನ್) ಸಹ ಮುಖದ ಅಂದದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಕೆಳಗೆ ಇನ್ನೊಂದು ಗಲ್ಲ ಇರುತ್ತದೆ.ಅಂದರೆ ಮಾಂಸವು ಬೆಳೆದುಕೊಂಡಿರುತ್ತದೆ ಅದು ಹೆಚ್ಚಾದಂತೆ ದೊಡ್ಡದಾಗುತ್ತ ಹೋಗುತ್ತದೆ.ಇದು ನೋಡಲು ಅಷ್ಟು ಚೆನ್ನಾಗಿ ಕಾಣುವುದಿಲ್ಲ. ಕೆಲವರು ಶಸ್ತ್ರಚಿಕಿತ್ಸೆಮಾಡಿಸಿ ಅದನ್ನು ತೆಗಿಸುತ್ತಾರೆ. ಆದರೆ ಕೊಟ್ಟಿರುವ ಸಲಹೆಗಳನ್ನು ಪಾಲಿಸಿದರೆ ಸಾಕು ನೋವಿಲ್ಲದೆ ಡಬಲ್ ಚಿನ್ ದೂರ ಮಾಡಿಕೊಳ್ಳಬಹುದು.

1.ಶುಗರ್ ಫ್ರೀ ಚ್ಯೂಯಿಂಗ್ ಗಮ್:

 

ಚ್ಯೂಯಿಂಗ್ ಗಮ್ ಜಗಿಯುವುದರಿಂದ ಬಾಯಿ, ದವಡೆಗೆ ಉತ್ತಮ ವ್ಯಾಯಾಮವಾಗುತ್ತದೆ. ಪ್ರತಿದಿನ ಕನಿಷ್ಟ 5 ಶುಗರ್ ಫ್ರೀ ಚೂಯಿಂಗ್ ಗಮ್ ಗಳನ್ನೂ ಜಗಿಯುತ್ತಿದ್ದರೆ ಕ್ರಮೇಣವಾಗಿ ಡಬಲ್ ಚಿನ್ ಸಮಸ್ಯೆ ದೂರವಾಗುತ್ತದೆ.

 

2.ಗೋಧಿ ತೈಲ :
ಗೋಧಿ ತೈಲ ತೆಗೆದುಕೊಂಡು ಸ್ವಲ್ಪ ಆ ಎಣ್ಣೆಯನ್ನು ಕತ್ತು,ಗಲ್ಲದ ಭಾಗಗಳಿಗೆ ಪ್ರತಿದಿನ ಒಮ್ಮೆ 15 ರಿಂದ 20 ನಿಮಿಷಗಳ ಕಾಲ ಮಸಾಜ್ ಮಾಡುವುದರಿಂದ ಡಬಲ್ ಚಿನ್ ಮಾಯವಾಗುತ್ತದೆ.

 

3.ಮೊಟ್ಟೆಯ ಬಿಳಿಬಾಗ:
ಮೊಟ್ಟೆಯ ಬಿಳಿಬಾಗವನ್ನು ಒಂದು ಚಮಚ ಹಾಲು, ಜೇನುತುಪ್ಪ ಮತ್ತು ನಿಂಬೆ ರಸಗಳೊಟ್ಟಿಗೆ ಸೇರಿಸಿ ಮಿಕ್ಸ್ ಮಾಡಿ.ನಂತರ ಅದನ್ನು ಡಬಲ್ ಚಿನ್ ಭಾಗಕ್ಕೆ ಹಚ್ಚಿ ಅರ್ಧಗಂಟೆಯ ನಂತರ ತಣ್ಣೀರಿನಿಂದ ತೊಳೆದುಕೊಳ್ಳಿ.

 

4.ಗ್ಲಿಜರಿನ್:
ಒಂದು ಚಮಚ ಗ್ಲಿಜರಿನ್, ಅರ್ಧಚಮಚ ಪುಡಿ ಅಯೋಡಿನ್ ಉಪ್ಪು,ಒಂದೆರಡು ಹನಿ ಪೆಪ್ಪರ್ ಮಿಂಟ್ ಎಣ್ಣೆ ತೆಗೆದುಕೊಂಡು ಚೆನ್ನಾಗಿ ಬೆರೆಸಿ ಪೇಸ್ಟ್ ತರಹ ಮಾಡಿಕೊಳ್ಳಬೇಕು.ಹತ್ತಿಯ ಉಂಡೆಯ ಸಹಾಯದಿಂದ ಡಬಲ್ ಚಿನ್ ಭಾಗಕ್ಕೆ ಹಚ್ಚಿದರೆ ಡಬಲ್ ಚಿನ್ ನಿವಾರಣೆಯಾಗುತ್ತದೆ.ಹೀಗೆ ವಾರಕ್ಕೆ 3 ರಿಂದ 5 ಸಲ ಮಾಡಬಹುದು.

 

5.ಗ್ರೀನ್ ಟೀ: 

 

 

ಗ್ರೀನ್ ಟೀ ಡಬಲ್ ಚಿನ್ ಸಮಸ್ಯೆಯನ್ನೂ ದೂರ ಮಾಡುತ್ತದೆ. ನಿತ್ಯ ಒಂದು ಕಪ್ ಗ್ರೀ ಟೀ ಕುಡಿಯುತ್ತಿದ್ದರೆ ಕೆಲವು ದಿನಗಳಲ್ಲೇ ಡಬಲ್ ಚಿನ್ ಸಮಸ್ಯೆ ನಿವಾರಣೆಯಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top