ಅರೋಗ್ಯ

ಮಾರ್ಕೆಟ್ಟಲ್ಲಿ ಸಿಗೋ ಬಿಳಿ ಹಾಗೂ ಜಾಸ್ತಿ ಕಾಸು ಕೊಟ್ಟು ತರುವ ಗೋಧಿ ಬಣ್ಣದ ಮೊಟ್ಟೆಗಳಲ್ಲಿ ಯಾವುದು ತಿಂದರೆ ಒಳ್ಳೇದು: ಪ್ರತಿಯೊಬ್ಬರೂ ತಿಳ್ಕೊಳ್ಳೆಬೇಕು

ಸಾಮಾನ್ಯವಾಗಿ ಮೊಟ್ಟೆಗಳು ಎರಡು ಬಣ್ಣಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುತ್ತಿದ್ದು , ಹೆಚ್ಚು ಕೆಲಸ ಮಾಡುವವರು , ವ್ಯಾಯಾಮ ಹಾಗು ಜಿಮ್ ಗಳಿಗೆ ಹೋಗುವವರು ಬಿಳಿ ಮೊಟ್ಟೆಗಿಂತ ಗೋಧಿ ಬಣ್ಣದ ಮೊಟ್ಟೆಗಳು ಉತ್ತಮ ಎಂದು ಹೇಳಿ ಅವುಗಳನ್ನು ಮಾರುಕಟ್ಟೆಯಿಂದ ಕೊಂಡು ತರುತ್ತಾರೆ , ಹಾಗೆಯೇ ಗೋಧಿ ಬಣ್ಣದ ಮೊಟ್ಟೆಗಳು ಹೆಚ್ಚು ದುಡ್ಡುಕೊಟ್ಟು ತರಬೇಕಾಗುತ್ತದೆ ಅಸಲಿಗೆ ಇವುಗಳಲ್ಲಿ ಯಾವುದು ಸತ್ಯ ?

 

 

ಬನ್ನಿ ಈ ಬಗ್ಗೆ ಸಂಶೋಧನೆಗಳು ಏನು ಹೇಳುತ್ತವೆ ತಿಳಿಯೋಣ

 

ಅಸಲಿಗೆ ಬಿಳಿ ಹಾಗು ಗೋಧಿ ಬಣ್ಣದ ಮೊಟ್ಟೆಗಳು ಸಮಾನವಾದ ಪೋಷಕಾಂಶಗಳನ್ನು ಹೊಂದಿರುತ್ತವೆ , ಕೋಳಿಯ ವರ್ಣ ದ್ರವ್ಯ ಅಥವಾ pigmentation ಆಧಾರದ ಮೇಲೆ ಬಣ್ಣ ಬೇರೆಯಾಗಿರುತ್ತದೆ ಅಷ್ಟೇ ಮೊಟ್ಟೆಯಲ್ಲಿ ಸ್ಯಾಚುರೇಟೆಡ್ ಕೊಬ್ಬಿನ ಅಂಶ ಕಡಿಮೆಯಿದ್ದು ಟ್ರಾನ್ಸ್ ಫ್ಯಾಟ್ ಕಡಿಮೆ ಇರುತ್ತದೆ ಎಂದು ಆಹಾರ ತಜ್ಞರು ಹೇಳುತ್ತಾರೆ .

 

 

ಮೊಟ್ಟೆ ಆರೋಗ್ಯದ ಕಣಜ ಅದರ ಬಗ್ಗೆ ಮತ್ತಷ್ಟು ಮಾಹಿತಿಗಳು ತಿಳಿಯೋಣ ಬನ್ನಿ

 

ಪ್ರೊಟೀನ್ ಕಣಜ ಮೊಟ್ಟೆ

 

ಹೈದರಾಬಾದಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ ಇತ್ತೀಚೆಗೆ, ‘ಪ್ರತಿ ಮನುಷ್ಯನೂ ವರ್ಷಕ್ಕೆ ಕನಿಷ್ಠ ೧೮೦ ಮೊಟ್ಟೆಗಳನ್ನು ಸೇವಿಸಬೇಕು’ ಎಂದಿದೆ. ಆದರೆ ನಮ್ಮ ದೇಶದಲ್ಲಿ ಕೇವಲ ೫೪ ಮೊಟ್ಟೆಗಳನ್ನು ಮಾತ್ರ ಸೇವಿಸಲಾಗುತ್ತಿದೆ. ನಮ್ಮ ಅಪೌಷ್ಟಿಕತೆಯನ್ನು ಹೋಗಲಾಡಿಸುವ ಎಲ್ಲ ಶಕ್ತಿ ಮೊಟ್ಟೆಗಿದ್ದರೂ ನಾವು ಅದರ ಮಹತ್ವ ಅರಿತಿಲ್ಲ. ಪ್ರತಿ ೧೦೦ ಗ್ರಾಂ.ನ ಮೊಟ್ಟೆಯಲ್ಲಿ ೧೨.೧೪ ಗ್ರಾಂ ಪ್ರೊಟೀನ್, ೧೧.೧೫ ಗ್ರಾಂ ಕೊಬ್ಬಿನಂಶ, ೧.೨ ಗ್ರಾಂ ಶರ್ಕರಪಿಷ್ಠ ಮತ್ತು ಉಳಿದ ೭೪.೦೭ ಗ್ರಾಂ.ನಷ್ಟು ನೀರಿನಂಶ ಇರುತ್ತದೆ. ಒಂದು ಮೊಟ್ಟೆಯಲ್ಲಿ ಸುಮಾರು ೬.೩ ಗ್ರಾಂ.ನಷ್ಟು ಪ್ರೊಟೀನ್ ಅಂಶವಿದ್ದು ಸುಲಭವಾಗಿ ಜೀರ್ಣವಾಗಬಲ್ಲದು. ಶರೀರದ ಬೆಳವಣಿಗೆಗೆ ಬೇಕಾದ ಅಮೈನೋ ಆಸಿಡ್‌ಗಳನ್ನು ಹೊಂದಿದ್ದು, ಇದು ಶರಿರದಲ್ಲಿ ಪ್ರತಿನಿತ್ಯ ಆಗುವ ಸವಕಳಿಯನ್ನು ಸರಿಪಡಿಸುತ್ತದೆ.

 

 

ಹಸಿಮೊಟ್ಟೆ ಸೇವಿಸುವಾಗ ಎಚ್ಚರ!

 

ಹಸಿ ಮೊಟ್ಟೆಯನ್ನು ಬಳಸದಿರುವುದು ಉತ್ತಮ. ಏಕೆಂದರೆ ಹಸಿ ಮೊಟ್ಟೆಯಲ್ಲಿರುವ ‘ಅವಿಡಿನ್’ (ಅಜಿಜ್ಞಿ) ಅಂಶವು ದೇಹದಲ್ಲಿನ ‘ಬಯೋಟಿನ್’ (ಆಜಿಟಠಿಜ್ಞಿ) ವಿಟಮಿನ್ ಅಂಶವನ್ನು ಕಡಿಮೆ ಮಾಡುವ ಸಾಧ್ಯತೆಯಿರುತ್ತದೆ. ಹಸಿ ಮೊಟ್ಟೆಯನ್ನು ಸೇವಿಸಿದಾಗ ಇದು ಹೊಟ್ಟೆ ಮತ್ತು ಕರುಳಿನ ಮೇಲೆ ಪದರದ ರೀತಿಯಲ್ಲಿ ಅಂಟಿಕೊಳ್ಳುತ್ತದೆ. ಜಠರದಲ್ಲಿ ದೇಹಕ್ಕೆ ಬೇಕಾಗುವಂಥ ಕೆಲವು ಆಮ್ಲಗಳ ಸ್ರವಿಸುವಿಕೆಗೆ ಇದು ಅಡ್ಡಿಯಾಗುತ್ತದೆ. ಸರಿಯಾಗಿ ತೊಳೆಯದೆ ಹಸಿಮೊಟ್ಟೆ ಬಳಸಿದರೆ ‘ಸಾಲ್ಮೋನೆಲ್ಲಾ’ ಸೂಕ್ಷ್ಮಾಣುಜೀವಿಗಳು ನಮ್ಮ ದೇಹವನ್ನು ಸೇರಬಹುದು. ಇದರಿಂದ ಅತಿಸಾರ, ಇನ್ನಿತರ ಕಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ. ‘ದಿನಕ್ಕೊಂದು ಮೊಟ್ಟೆ ತುಂಬುವುದು ಹೊಟ್ಟೆ’ ಎಂಬ ನಾಣ್ಣುಡಿಯಂತೆ ಎಲ್ಲ ವರ್ಗದ ಜನರಿಗೆ ಇದು ಪರಿಪೂರ್ಣ ಆಹಾರ.

 

ತಪ್ಪುಕಲ್ಪನೆ ಬಿಡಿ

 

ಮೊಟ್ಟೆಗಳಿಂದ ನೂರಾರು ಬಗೆಯ ವೈವಿಧ್ಯಮಯ ಖಾದ್ಯಗಳನ್ನು ತಯಾರಿಸಬಹದು. ಹೆಚ್ಚು ಮೊಟ್ಟೆ ಸೇವನೆಯಿಂದ ಶರೀರಕ್ಕೆ ಉಷ್ಣವಾಗುತ್ತದೆಂಬ ತಪ್ಪುಕಲ್ಪನೆಯಿದೆ. ಆದರೆ ಮೊಟ್ಟೆಯಲ್ಲಿ ಕೇವಲ ೭೭ ಕ್ಯಾಲರಿ ಶಕ್ತಿಯಿದ್ದು, ಇದರಿಂದ ದೇಹಕ್ಕೆ ಯಾವುದೇ ಉಷ್ಣವಾಗುವುದಿಲ್ಲ. ಮೊಟ್ಟೆಯ ಹಳದಿಯಲ್ಲಿ ಅಧಿಕ ಕೊಲೆಸ್ಟೆರಾಲ್ ಇದೆ ಎಂಬ ತಪ್ಪು ಬಾವನೆ ಇದೆ. ಮೊಟ್ಟೆಯ ಹಳದಿಯಲ್ಲಿ ಅತ್ಯುತ್ತಮ ಪೌಷ್ಟಿಕಾಂಶಗಳಿಂದ ಕೂಡಿದ್ದು ಶರೀರಕ್ಕೆ ಅವಶ್ಯಕವಾಗಿ ಬೇಕಾಗಿರುವ ಉತ್ತಮ ಕೊಲೆಸ್ಟೆರಾಲ್ ಲಭ್ಯವಿರುವುದರಿಂದ ಈ ಹಳದಿಯನ್ನು ನಿಸ್ಸಂಶಯವಾಗಿ ಸೇವಿಸಬಹುದು.

 

 

ಮೊಟ್ಟೆಯ 9 ಗುಟ್ಟು

 

– ಮೊಟ್ಟೆಯ ಅಮೈನೋ ಆ್ಯಸಿಡ್‌ನಲ್ಲಿ ಟೈರೋಸಿನ್ ಮತ್ತು ಟ್ರೈಪ್ಟೋಫನ್ ಅಂಶಗಳಿದ್ದು, ಇವು ಕ್ಯಾನ್ಸರ್ ವಿರುದ್ಧ ಹೋರಾಡುತ್ತವೆ.
– ಗರ್ಭಿಣಿಯರು ಆರೋಗ್ಯವಂತ ಭ್ರೂಣ ಹೊಂದಲು ನಿತ್ಯ ಬೇಯಿಸಿದ ಎರಡು ಮೊಟ್ಟೆಗಳನ್ನು ಸೇವಿಸಬೇಕು.
– ಇದರಲ್ಲಿನ ಒಮೆಗಾ ೩ ಫ್ಯಾಟಿ ಆ್ಯಸಿಡ್ ಮೆದುಳಿನ ಆರೋಗ್ಯಕ್ಕೆ ನೆರವಾಗುತ್ತದೆ. ನೆನಪಿನ ಶಕ್ತಿಯನ್ನೂ ಹೆಚ್ಚಿಸುತ್ತದೆ.
– ತೂಕ ಕಳೆದುಕೊಳ್ಳುವವರಿಗೆ ಮೊಟ್ಟೆ ಸೇವನೆ ಅತ್ಯುತ್ತಮ ಮಾರ್ಗ.
– ಮೊಟ್ಟೆಯಲ್ಲಿ ಲುಟೀನ್ ಅಂಶವಿದ್ದು, ಕಣ್ಣಿನ ದೃಷ್ಟಿಗೆ ಬಲ ತುಂಬುತ್ತದೆ.

– ನಮ್ಮ ಮೂಡ್ ಅನ್ನು ಸದಾ ಹಸಿರಾಗಿಡುತ್ತದೆ.
– ಆರೋಗ್ಯವಂತ ಕೂದಲು ಮತ್ತು ಉಗುರನ್ನು ಹೊಂದಲು ನಿತ್ಯ ಮೊಟ್ಟೆ ಸೇವಿಸುವುದು ಉತ್ತಮ.
– ಮೊಟ್ಟೆಯಲ್ಲಿನ ಫಾಸ್ಫರಸ್ ಮತ್ತು ವಿಟಮಿನ್ ಡಿ ಅಂಶಗಳು ಮೂಳೆಯನ್ನು ಗಟ್ಟಿಗೊಳಿಸುತ್ತವೆ.
– ಎಣ್ಣೆ ಚರ್ಮ ಇದ್ದವರಿಗೆ ಕಾಡುವ ಮೊಡವೆ ಸಮಸ್ಯೆಯು ಮೊಟ್ಟೆ ಸೇವನೆಯಿಂದ ನಿವಾರಣೆಯಾಗುತ್ತದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top