ಅರೋಗ್ಯ

ಮನೆ ಬಳಿ ಸೀಗೋ ಎಕ್ಕದ ಎಲೆಗಳಿಂದ ಹೀಗೆ ಮಾಡಿ ಸಾಕು ಬರೀ ಒಂದೇ ಒಂದು ವಾರದಲ್ಲಿ ನಿಮ್ಮ ಮಂಡಿ ನೋವು , ಕೀಲು ನೋವು ಮಂಗಮಾಯವಾಗುತ್ತೆ

ಎಕ್ಕದ ಎಲೆಗಳಿಂದ ಮಂಡಿ ನೋವು , ಕೀಲು ನೋವು ಮಾಯ

 

 

ಎಕ್ಕವನ್ನು ಅರ್ಕವೆಂದೇ ಕರೆಯುವುದು, ನಮ್ಮಗಳ ಆಡುಭಾಷೆಯಲ್ಲಿ ಎಕ್ಕ ಎಂದು ಕರೆಯುತ್ತೇವೆ.ಅರ್ಕ ಎಂದರೆ, ಪೂಜನೀಯವೆಂದರ್ಥ.ಹಿಂದೂ ಸಂಸ್ಕೃತಿ ಪ್ರಕಾರ ಕೆಲವು ಮರ ಗಿಡಗಳಿಗೆ ಪವಿತ್ರ ಸ್ಥಾನವಿದೆ.ಈ ಎಕ್ಕ ಗಿಡಕ್ಕೆ ದೇವ ವೃಕ್ಷ ಎಂಬ ಭಾವನೆ ಇರುವುದರಿಂದ ಭಾರತದಲ್ಲಿ ಇದನ್ನು ಪೂಜಿಸಲಾಗುತ್ತದೆ.ಎಕ್ಕದಲ್ಲಿ ಎರಡು ವಿಧ ಬಿಳಿ ಹಾಗೂ ಕಪ್ಪು ಎಕ್ಕ. ಬಿಳಿ ಎಕ್ಕ ಬಹಳ ಶ್ರೇಷ್ಠವೆಂದು ಪ್ರತೀತಿ. ಎಕ್ಕವನ್ನು ಪೂಜಿಸಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ ಹಿಂದಿನಿಂದಲೂ ಇದೆ. ದೇವರ ಪೂಜೆಗೆ ಶ್ರೇಷ್ಠವಾದ ಈ ಎಕ್ಕದ ಗಿಡದ ಬೇರು, ತೊಗಟೆ, ಎಲೆ, ಹೂ ಔಷಧಿಗಳಿಗೆ ಬಳಸುತ್ತಾರೆ: ಇದರಿಂದಾಗುವ ಪ್ರಯೋಜನಗಳನ್ನ ಈ ಕೆಳಗೆ ಓದಿ ತಿಳಿದುಕೊಳ್ಳಿ.

ಎಕ್ಕದ ಹೂವಿಗೆ ಪೂಜನೀಯ ಭಾವನೆಯಿದೆ. ರಥಸಪ್ತಮಿಯಂದು ಎಕ್ಕದ ಎಲೆಗಳನ್ನು ಭುಜದಮೇಲೆ ಇಟ್ಟು ಗಂಡಸರು ಮಂತ್ರ ಪಟಣೆಯ ಮೂಲಕ ಸ್ನಾನ ಮಾಡುತ್ತಾರೆ
ಅಷ್ಟೇ ಅಲ್ಲ ಎಕ್ಕದ ಎಲೆಯನ್ನು ದೇಹದ ಸರ್ವಾಂಗಗಳಿಗೆ ಸ್ಪರ್ಶಿಸಿ, ಸ್ನಾನ ಮಾಡಿದರೆ ಮೂಳೆ ನೋವು ನಿವಾರಣೆ ಆಗುವುದು. ಈ ಕಾರಣಕ್ಕಾಗಿಯೇ ರಥಸಪ್ತಮಿ ದಿನ ಎಕ್ಕದ ಎಲೆಯ ಸ್ನಾನ ಮಾಡುವುದು.

ಬಿಳಿಯ ಎಕ್ಕದ ಬುಡದಲ್ಲಿ ’ಗಣೇಶ’ ನೆಲೆಸಿರುತ್ತಾನೆ ಆದ್ದರಿಂದಲೇ ಗಿಡದಿಂದ ಬೀಳುವ ಹೂಗಳೆಲ್ಲವೂ ಅದರ ಬುಡಕ್ಕೆ ಬೀಳುತ್ತವೆ ಎಂದು ನಂಬುತ್ತಾರೆ.ಚರ್ಮದ ಕಾಯಿಲೆ ಇದ್ದರೆ ಬಿಳಿ ಎಕ್ಕದ ಹಾಲು ಹಾಗೂ ಜೇನು ತುಪ್ಪವನ್ನು ಬೆರೆಸಿ ಹಚ್ಚಬೇಕು.

ಈ ಗಿಡದ ಎಲೆಗಳನ್ನು ಬೆಂಕಿ ಕೆಂಡದ ಮೇಲೆ ಸೋಕಿಸಿ ಬೆನ್ನು ನೋವು, ಮಂಡಿನೋವು ಇರುವ ಕಡೆ ಶಾಖ ಕೊಟ್ಟರೆ ಕೆಲವೇ ದಿನದಲ್ಲಿ ನೋವು ಶಮನವಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top