ಮನೋರಂಜನೆ

ಹಂಬಲ್ ಪೊಲಿಟಿಶಿಯನ್ ನಂತರ ಪೊಲೀಸ್ ಇನ್ಸ್‌ಪೆಕ್ಟರ್ ಆದ ಡ್ಯಾನಿಷ್ ಸೇಠ್.

ಹಂಬಲ್ ಪೊಲಿಟಿಷಿಯನ್ ನಾಗರಾಜ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಅಡಿಯಿರಿಸಿರುವ ನಿರೂಪಕ ಡ್ಯಾನಿಶ್ ಸೇಠ್ ಇದೀಗ ತಮ್ಮ ಮುಂದಿನ ಚಿತ್ರದತ್ತ ಗಮನಹರಿಸಿದ್ದಾರೆ. ಇದು ಒಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು ಚಿತ್ರದಲ್ಲಿ ಡ್ಯಾನಿಶ್ ಪೊಲೀಸ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷವೆಂದರೆ ಈ ಪಾತ್ರ ಗಂಭೀರವಾಗಿರಲಿದ್ದು ಹಾಸ್ಯದಿಂದಲೇ ಖ್ಯಾತಿ ಗಳಿಸಿದ್ದ ಡ್ಯಾನಿಶ್ ಮೊದಲ ಬಾರಿಗೆ ಸೀರಿಯಲ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 

 

ಅಂದಹಾಗೆ ಇವರು ಸೀರಿಯಸ್ ಪೊಲೀಸ್‌ ಪಾತ್ರವನ್ನು ಮಾಡುತ್ತಿರುವುದು ಯುವತಂಡವೊಂದು ಸೇರಿ ಮಾಡುತ್ತಿರುವ ‘ಸೋಲ್ಡ್‌’ ಎಂಬ ಹೆಸರಿನ ಸಿನಿಮಾದಲ್ಲಿ. ಈ ಚಿತ್ರವನ್ನು ಪ್ರೇರಣಾ ಎಂಬುವವರು ನಿರ್ದೇಶನ ಮಾಡುತ್ತಿದ್ದು. ಕಾವ್ಯ ಶೆಟ್ಟಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದು ಪಕ್ಕಾ ಸಸ್ಪೆನ್ಸ್‌ ಮತ್ತು ಥ್ರಿಲ್ಲರ್‌ ಮಾದರಿಯ ಕಥಾಹಂದರವನ್ನು ಹೊಂದಿರುವ ಸಿನಿಮಾವಾಗಿದೆಯಂತೆ.

ಈಗಾಗಲೇ ಚಿತ್ರದ ಶೂಟಿಂಗ್ ನಲ್ಲಿ ಭಾಗಿಯಾಗಿರುವ ಡ್ಯಾನಿಶ್ ಸೇಠ್ ಫೋಟೋವೊಂದನ್ನು ಕ್ಲಿಕ್ಕಿಸಿಕೊಂಡು ತಮ್ಮ ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ. ಇಷ್ಟು ದಿನ ತಮ್ಮ ಕಾಮಿಡಿ ಶೋಗಳ ಮುಖಾಂತರವೇ ನಕ್ಕುನಲಿಸುತ್ತಿದ್ದ ಡ್ಯಾನಿಶ್ ಸೀರಿಯಸ್ ಪೊಲೀಸ್ ಅಧಿಕಾರಿಯಾಗಿ ಅದೇಗೆ ಮೋಡಿ ಮಾಡಲಿದ್ದಾರೆ ಎಂದು ಕಾದುನೋಡಬೇಕಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top