ಸಮಾಚಾರ

ಕರ್ನಾಟಕ ರಾಜಕಾರಣದಲ್ಲಿ ಕುದುರೆ ವ್ಯಾಪಾರ ಈ ಬಗ್ಗೆ ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಜೆಡಿಎಸ್ ನಾಯಕರ ಪುತ್ರ

ಕ್ಷಣದಿಂದ ಕ್ಷಣದಕ್ಕೆ ಚಿತ್ರ ವಿಚಿತ್ರ ತಿರುವುಗಳನ್ನ ಪಡೆದುಕೊಳ್ಳುತ್ತಿರುವ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಸದ್ಯ ಮುಂದಿನ ಸರ್ಕಾರ ಯಾರು ರಚಿಸುತ್ತಾರೆ? ಹಾಗೂ ಯಾರು ಮುಖ್ಯಮಂತ್ರಿಯಾಗುತ್ತಾರೆ ಎನ್ನುವುದೇ ಕುತೂಹಲ. ಕಾಂಗ್ರೆಸ್ ಮತ್ತು ಜೆಡಿಎಸ್‌ ಮೈತ್ರಿಕೂಟ ನೂತನ ಸರ್ಕಾರ ರಚನೆಗಾಗಿ ಸಾಹಸ ಪಡುತ್ತಿದ್ದಾರೆ .

 

 

ಚುನಾವಣಾ ಫಲಿತಾಂಶದಲ್ಲಿ ಭಾರತೀಯ ಜನತಾ ಪಕ್ಷವು 104 ಸ್ಥಾನಗಳನ್ನು ಪಡೆದುಕೊಂಡು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆಯಾದರೂ ಬಹುಮತ ಬರಬೇಕೆಂದರೆ 113ಸ್ಥಾನಗಳ ಅವಶ್ಯಕತೆಯಿದೆ. ಈ ಹಿನ್ನಲೆಯಲ್ಲಿ ಬಿಜೆಪಿಗೆ ಇನ್ನೂ 9 ಸ್ಥಾನಗಳ ಅವಶ್ಯಕತೆಯಿದ್ದು ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರನ್ನು ತಮ್ಮತ್ತ ಸೆಳೆದುಕೊಳ್ಳಲು ಕುದುರೆ ವ್ಯಾಪಾರ ನಡೆಯಬಹುದು ಎಂಬ ಭೀತಿಯಿಂದ ಈಗಾಗಲೇ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಹೋಟೆಲ್ ರಾಜಕಾರಣಕ್ಕೆ ಮೊರೆಹೋಗಿದ್ದಾರೆ.

ಗುಜರಾತಿ ವ್ಯಾಪಾರ ಕರ್ನಾಟಕದಲ್ಲಿ ಮಾಡ್ತಿದ್ದಾರೆ ಇವರಿಗೆ ಸರಿಯಾಗಿ ಬುದ್ದಿ ಕಲಿಸುತ್ತೇವೆ , 15 ದಿನಗಳ ಕಾಲ ಬಿಜೆಪಿಗೆ ಅವಕಾಶ ನೀಡಿರುವುದು ಬಿಜೆಪಿ ಕಡೆ ರಾಜ್ಯಪಾಲರು ಸಹಾಯ ಮಾಡುತ್ತಿರುವುದನ್ನು ತೋರಿಸುತ್ತಿದೆ ಎಂದು ಕುಮಾರಸ್ವಾಮಿ ಎರಡು ದಿನಗಳ ಹಿಂದೆ ಮಾತಾಡಿದ್ದರು .

ಇದಕ್ಕೆ ಪೂರಕ ಎಂಬಂತೆ ಗಣಿಧಣಿ ಜನಾರ್ಧನ ರೆಡ್ಡಿ ಆಪ್ತ ಎಂದು ಹೇಳಿಕೊಳ್ಳುವ ವ್ಯಕ್ತಿ ಜೆಡಿಎಸ್ -ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬಲೆ ಬೀಸಿದ್ದಾರೆ ಎನ್ನುವ ಫೋನ್ ಕಾಲ್ ಆಡಿಯೋ ಗಳು ಸಹ ಬಿಡುಗಡೆಯಾಗಿತ್ತು ಇದಕ್ಕೆ ಪೂರಕ ಎಂಬಂತೆ ಜೆಡಿಎಸ್ ನ ವಿಶ್ವನಾಥ್ ಅವರ ಪುತ್ರ ಪೂರ್ವಜ್ ವಿಶ್ವನಾಥ್ ಅವರು ಗಂಭೀರ ಆರೋಪವೊಂದನ್ನು ಮಾಡಿದ್ದಾರೆ .

 

 

ಈ ವಿಷ್ಯ ಸದ್ಯಕ್ಕೆ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದ್ದು ಆಪರೇಷನ್ ಫ್ಲವರ್ ನ ಘಮಲು ಬಹಳ ಜೋರಾಗಿದೆ ಎನಿಸುತ್ತಿದೆ ,

“ಕುದುರೆ ವ್ಯಾಪಾರ ಅಥವಾ ಕುದುರೆ ಕೊಂಡುಕೊಳ್ಳೋದು ಎ.ಎಚ್ ವಿಶ್ವನಾಥ್ ಅವರ ಬಳಿ ನಡೆಯೋದಿಲ್ಲ ,ನಾವು ಅವಕಾಶವಾದಿಗಳ ಜೊತೆ ಕೆಲಸ ಮಾಡಲು ಇಷ್ಟ ಪಡುವುದಿಲ್ಲ , ನಮ್ಮ ತಂದೆ ಮಾತ್ರ ಅಲ್ಲ ನನಗು ನಮ್ಮ ತಂದೆಯ ಮನವೊಲಿಸುವಂತೆ ಅನೇಕ ಕರೆಗಳು ಬರುತ್ತಿವೆ , ಈ ರೀತಿ ಮಾಡಲು ಹೇಳಿದವರಲ್ಲಿ ಕ್ಷಮೆ ಕೇಳುತ್ತೇನೆ , ಅಧಿಕಾರದಲ್ಲಿ ಇಲ್ಲದೆ ಎಂ .ಎಲ್ .ಎ ಆಗಿ ಜನರಿಂದ ಆಯ್ಕೆಯಾಗಿ ಅವರನ್ನು ಬೆಂಬಲಿಸುವ ಅಧಿಕಾರ ಇರುತ್ತದೆ .” ಎಂದು ವಿಶ್ವನಾಥ್ ಪುತ್ರ ಪುರ್ವಜ್ ಹೇಳಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top