ಸಮಾಚಾರ

ಅಮಿತ್ ಷಾ ಮತ್ತೆ ಮೋದಿ ಹಿಟ್ಲರ್ ನ ಪಳೆಯುಳಿಕೆಗಳು – ಸಿದ್ದರಾಮಯ್ಯ

ರಾಜ್ಯ ರಾಜಕಾರಣದಲ್ಲಿ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ದೊಡ್ಡ ಹೈಡ್ರಾಮಗಳೇ ನಡೆದುಹೋದವು, ಇಂದು ಇದೆ ವಿಷಯವಾಗಿ ಸುಪ್ರೀಂ ಕೋರ್ಟ್ ವಿಚಾರಣೆ ನಡೆದಿದ್ದು. ನಾಳೆಯೇ ವಿಶ್ವಾಸ ಮತ ಯಾಚನೆ ಮಾಡಲು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ವಕೀಲರು ಯಾರು ಮೊದಲು ವಿಶ್ವಾಸಮತ ಸಾಭೀತುಪಡಿಸಬೇಕು ಎಂದು ಕೇಳಿದ್ದಾರೆ. ಯಾರಿಗೂ ಕೋರ್ಟ್ ಸಮಯಾವಕಾಶ ನೀಡಿದಿಲ್ಲ ನಾಳೆಯೇ ವಿಶ್ವಾಸ ಮತ ಯಾಚನೆ ಎಂದು ಹೇಳಿದ್ದಾರೆ. ವಿಧಾಸೌಧದಲ್ಲೇ ನಾಳೆಯೇ ಬಹುಮತ ಸಾಭೀತು ಪಡಿಸಬೇಕು.

 

 

ರಾಜ್ಯಪಾಲರು ಅಮಿತ್ ಷಾ ಹಾಗು ಮೋದಿಯ ಆದೇಶದಂತೆ ನಡೆದುಕೊಳ್ಳುತ್ತಿದ್ದಾರೆ , ದೇಶದ ಇತಿಹಾಸದಲ್ಲಿ ಯಾವುದೇ ರಾಜ್ಯಪಾಲರು ನಡೆದುಕೊಂಡಿಲ್ಲ ,ಸಂವಿಧಾನದ ಉದ್ದೇಶಗಳನ್ನು ರಾಜ್ಯಪಾಲ ವಜುಬಾಯಿ ವಾಲಾ ಧಿಕ್ಕರಿಸಿದ್ದಾರೆ ,ಯಡಿಯೂರಪ್ಪ ಒಂದು ವಾರಗಳ ಕಾಲ ಟೈಮ್ ಕೇಳಿದರೆ ರಾಜ್ಯಪಾಲ ಕುದುರೆ ವ್ಯಾಪಾರ ಸರಿಯಾಗಿ ಮಾಡಿ ಎಂದು 15 ದಿನಗಳ ಕಾಲ ಬಹುಮತ ಸಾಧಿಸಲು ಟೈಮ್ ಕೊಟ್ಟಿದ್ದಾರೆ ಇದು ದೇಶದಲ್ಲಿ ಎಲ್ಲಿಯೂ 15 ದಿನಗಳ ಕಾಲ ಬಲ ಸಾಧಿಸಲು ಅವಕಾಶ ಕೊಟ್ಟ ಉದಾಹರಣೆಯೇ ಇಲ್ಲೇ .ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ .

 

 

ಅಮಿತ್ ಷಾ ಮತ್ತೆ ಮೋದಿ ಹಿಟ್ಲರ್ ನ ಪಳೆಯುಳಿಕೆಗಳು ಎಂಬ ಮಾತನ್ನು ಸಿದ್ದರಾಮಯ್ಯ ಹೇಳಿದ್ದಾರೆ , ಇಬ್ಬರು ಪಕ್ಷೇತರರು ಸೇರಿ 117 ಜನ ನಮ್ಮ ಜೊತೆ ಇದ್ದಾರೆ , ಸುಪ್ರೀಂ ಕೋರ್ಟ್ ಇವರ ಹುನ್ನಾರಕ್ಕೆ ಕಪಾಳ ಮೋಕ್ಷ ಮಾಡಿದ್ದಾರೆ ,ಆನಂದ್ ಸಿಂಗ್ ಡೆಲ್ಲಿಯಲ್ಲಿ ಇದ್ದಾರೆ ನಮ್ಮ ಜೊತೆಗೆ ಬರುತ್ತಾರೆ ನಮ್ಮ ಸಂಪರ್ಕದಲ್ಲಿದ್ದಾರೆ .

ಆನಂದ್ ಸಿಂಗ್ ಅವರನ್ನು ಕಿಡ್ನಾಪ್ ಮಾಡಿದ್ದಾರೆ ಆದರೆ ನಮ್ಮ ಸಂಪರ್ಕದಲ್ಲಿದ್ದಾರೆ ,ಪ್ರತಾಪ್ ಗೌಡ ಪಾಟೀಲ್ ಸಹಿ ಮಾಡಿ ಬೆಂಬಲ ಸೂಚಿಸಿದ್ದಾರೆ ಇವರೆಲ್ಲರಿಗೂ ಬ್ಲಾಕ್ ಮೇಲ್ ಮಾಡಿ ಜೊತೆಗೆ ಇಟ್ಟುಕೊಂಡಿದ್ದಾರೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top