ಸಮಾಚಾರ

ಕರ್ನಾಟಕದ ಪಾಲಿಟಿಕ್ಸ್ ಡ್ರಾಮಾ ಬಗ್ಗೆ ತೆಲುಗು ನಟ ಪವನ್ ಕಲ್ಯಾಣ್ ಏನ್ ಹೇಳಿದ್ರು ಗೊತ್ತಾ

ಜನಸೇನಾ ಮುಖ್ಯಸ್ಥರಾದ ಪವನ್ ಕಲ್ಯಾಣ್ ಅವರು ಕರ್ನಾಟಕ ರಾಜ್ಯ ಚುನಾವಣಾ ಫಲಿತಾಂಶದ ಕುತೂಹಲಕಾರಿ ಬೆಳವಣಿಗೆಗಳ ಬಗ್ಗೆ ಕಾಮೆಂಟ್ಗಳನ್ನು ಮಾಡಿದ್ದಾರೆ. ಕರ್ನಾಟಕದಲ್ಲಿ ಮತಗಳನ್ನು ಎಣಿಸುವ ಮುಂಚೆಯೇ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆಯೆಂದು ಅವರಿಗೆ ತಿಳಿದಿದ್ದಂತೆ .

 

 

ಇದೆ ವಿಷ್ಯದ ಬಗ್ಗೆ ಮಾತನಾಡುತ್ತಾ ಪ್ರತಿ ಪಕ್ಷಕ್ಕೂ ಅವರದ್ದೇ ಆದ ಅಂಕಿ ಅಂಶಗಳು ಇವೆ ಕರ್ನಾಟಕದ ಕೆಲವು ಅಧಿಕಾರಿಗಳು ಒಂದು ತಿಂಗಳ ಮುಂಚೆಯೇ ಇದೆ ವಿಷ್ಯದ ಬಗ್ಗೆ ತಮಗೆ ತಿಳೀಸಿದ್ದರು ಎಂದು ಹೇಳಿದ್ದಾರೆ , ಬಿಜೆಪಿ 80 ಸ್ಥಾನ ಗೆದ್ದರು ,ಜೆಡಿಎಸ್ 40 ಸ್ಥಾನ ಗೆದ್ದರು ಬಿಜೆಪಿಯೇ ಅಧಿಕಾರಕ್ಕೆ ಬರುತ್ತದೆ ಎಂದು ಅಧಿಕಾರಿಗಳು ಪವನ್ ಅವರಿಗೆ ಹೇಳಿದ್ದರಂತೆ .

 

ಇದು ತಪ್ಪ ಸರಿಯಾ ಎಂಬ ಪ್ರಶ್ನೆಯಲ್ಲ ಇದು ಅವರವರ ವಿವೇಚನೆಗೆ ಬಿಟ್ಟದ್ದು ದಶಕಗಳ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸಿದ್ದಾರೆ , ಅದೇ ಇಂದು ಕರ್ನಾಟಕದಲ್ಲಿ ಸಹ ನಡೆಯುತ್ತಿದೆ, ಬಿಜೆಪಿ ಮಾತ್ರವಲ್ಲ ಟಿಡಿಪಿ, ವೈಸಿಪಿ ಕೂಡ ಹೀಗೆ ನಡೆದುಕೊಳ್ಳುತ್ತಿವೆ ಎಂದು ಪವನ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top