ಸಮಾಚಾರ

ನಾಳೆಯೇ ವಿಶ್ವಾಸ ಮತ ಯಾಚನೆ ಮಾಡಲು ಸುಪ್ರೀಂ ಕೋರ್ಟ್ ಅಭಿಪ್ರಾಯ

ರಾಜ್ಯ ರಾಜಕಾರಣದಲ್ಲಿ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ದೊಡ್ಡ ಹೈಡ್ರಾಮಗಳೇ ನಡೆದುಹೋದವು. ಇದರ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ದೇವರು ಮತ್ತು ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಗುರುವಾರ ಬೆಳಗ್ಗೆ 9ಕ್ಕೆ ರಾಜಭವನದಲ್ಲಿ ರಾಜ್ಯಪಾಲ ವಿ.ಆರ್​. ವಾಲಾ ಅವರು ಬಿಎಸ್​ವೈ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

 

 

ಇಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಯುತ್ತಿದ್ದು. ನಾಳೆಯೇ ವಿಶ್ವಾಸ ಮತ ಯಾಚನೆ ಮಾಡಲು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ವಕೀಲರು ಯಾರು ಮೊದಲು ವಿಶ್ವಾಸಮತ ಸಾಭೀತುಪಡಿಸಬೇಕು ಎಂದು ಕೇಳಿದ್ದಾರೆ. ಯಾರಿಗೂ ಕೋರ್ಟ್ ಸಮಯಾವಕಾಶ ನೀಡಿದಿಲ್ಲ ನಾಳೆಯೇ ವಿಶ್ವಾಸ ಮತ ಯಾಚನೆ ಎಂದು ಹೇಳಿದ್ದಾರೆ. ವಿಧಾಸೌಧದಲ್ಲೇ ನಾಳೆಯೇ ಬಹುಮತ ಸಾಭೀತು ಪಡಿಸಬೇಕು.

 

ಇದು ನಂಬರ್‌ ಗೇಮ್‌ ಆಗಿದ್ದು, ಯಾರ ಬಳಿ ಸಂಖ್ಯಾ ಬಲ ಇದೆ ಎಂಬುವುದನ್ನು ರಾಜ್ಯಪಾಲರು ನೋಡಬೇಕಾಗುತ್ತಿದೆ. ಈ ವಿಷಯದಲ್ಲಿ ರಾಜ್ಯಪಾಲರಿಗೆ ತೃಪ್ತಿ ಆಗಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ.

 

ಇನ್ನು ಬಿಜೆಪಿ, ಜೆಡಿಎಸ್ ಹಾಗು ಕಾಂಗ್ರೆಸ್ ಕೋರ್ಟ್ ಗೆ ಪತ್ರ ಸಲ್ಲಿಸಿದ್ದಾರೆ. ನ್ಯಾಯಾಲಯ ಬಿಜೆಪಿ ವಕೀಲರಿಗೆ ಇನ್ನುಳಿದ ಶಾಸಕರು ಯಾರೆಂದು ಪ್ರಶ್ನಿಸಿದ್ದಾರೆ. ಆದ್ರೆ ಅವರ ಹೆಸರನ್ನು ಬಹಿರಂಗ ಪಡಿಸುವುದಿಲ್ಲ ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top