ಮನೋರಂಜನೆ

ಮಹಾನಟಿಯಂತೆ ತೆರೆ ಮೇಲೆ ಬರಲಿದೆ ಸೌಂದರ್ಯ ಸಾವಿನ ರಹಸ್ಯ.

ಚಿತ್ರರಂಗ ಕಂಡ ಅಪರೂಪದ ನಟಿ ಸೌಂದರ್ಯ. ಇವತ್ತಿಗೂ ಅಪಾರ ಅಭಿಮಾನಿಗಳು ಇದ್ದಾರೆ. ಕನ್ನಡದಲ್ಲಿಯೂ ಹಲವಾರು ಚಿತ್ರಗಳಲ್ಲಿ ನಟಿಸಿ ಮನೆ ಮಾತಾಗಿದ್ದ ದಿವಂಗತ ನಟಿಯ ಕುರಿತು ಚಿತ್ರವೊಂದು ತಯಾರಾಗಲು ವೇದಿಕೆ ಸಜ್ಜಾಗಿದೆ.

ತೆಲುಗಿನಲ್ಲಿ ಕಳೆದ ವಾರ ತೆರೆಕಂಡು ಸೂಪರ್​ ಸಕ್ಸಸ್ ಕಂಡಿರುವ ಮಹಾನಟಿ ಚಿತ್ರದಲ್ಲಿ ಹಿರಿಯ ನಟಿ ಸಾವಿತ್ರಿಯ ಜೀವನವನ್ನು ತೆರೆದಿಟ್ಟಿತ್ತು, ಅದರಂತೆಯೇ ವಿಮಾನ ಅಪಘಾತದಲ್ಲಿ ತೀರಿಕೊಂಡ ಸೌಂದರ್ಯ ಅವರ ಕಥೆಯನ್ನು ತೆರೆ ಮೇಲೆ ತಂದರೆ ಜನ ಇಷ್ಟ ಪಡುತ್ತಾರೆ ಎನ್ನುವ ಲೆಕ್ಕಾಚಾರವನ್ನ ನಿರ್ಮಾಪಕರು ಹಾಕುತ್ತಿದ್ದಾರೆ.. ತೆಲುಗಿನ ಪೆಳ್ಳಿಚೂಪುಲು, ಮೆಂಟಲ್ ಮಧಿಲೋ ಮುಂತಾದ ಚಿತ್ರಗಳನ್ನು ನಿರ್ಮಾಣ ಮಾಡಿದ್ದ ನಿರ್ಮಾಪಕ ರಾಜ್, ಸೌಂದರ್ಯ ಜೇವನಾಧಾರಿತ ಚಿತ್ರವನ್ನು ತಯಾರಿಸಲು ಉತ್ಸಾಹ ತೋರಿಸಿದ್ದಾರೆ

 

 

ಅಂದಹಾಗೆ ಸೌಂದರ್ಯ ಜೇವನದಾರಿತ ಚಿತ್ರವನ್ನು ಮಹನಟಿ ಚಿತ್ರವನ್ನು ನಿರ್ದೇಶಿಸಿದ ಅಶ್ವಿನ್ ಅವರೇ ನಿರ್ದೇಶನ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದ್ದು ಈಗಾಗ್ಲೆ ಸಿನಿಮಾದ ಸ್ಕ್ರಿಪ್ಟ್​ ಕೆಲಸ ಶುರುವಾಗಿದೆ. ಸೌಂದರ್ಯ ಅವರ ಕುಟುಂಬದವರ ಅನುಮತಿ ಪಡೆದುಕೊಂಡ ಬಳಿಕ ಚಿತ್ರವನ್ನತೆರೆಗೆ ತರುವ ತಯಾರಿ ಮಾಡಿಕೊಳ್ಳಲಿದ್ದಾರೆ ನಿರ್ಮಾಪಕ. ಸೌಂದರ್ಯ ಪಾತ್ರಕ್ಕಾಗಿ ನಾಯಕಿಯ ಹುಡುಕಾಟವೂ ಶುರುವಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top