ಮನೋರಂಜನೆ

ಸುದೀಪ್ ಪತ್ನಿಗೆ ಬಂದಿದೆಯಂತೆ ಹೊಸ ಕ್ರೇಜ್- ಏನದು ಗೊತ್ತಾ.

ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಒಂದೊಂದು ರೀತಿಯ ಹುಚ್ಚುಗಳಿರುತ್ತವೆ ಅದರಲ್ಲೂ ಸಿನಿಮಾ ಮಂದಿಗೆ ಮಾತ್ರ ಚಿತ್ರ ವಿಚಿತ್ರವಾದ ಗೀಳುಗಳಿರುತ್ತವೆ. ಸಾಮಾನ್ಯವಾಗಿ ಐಷಾರಾಮಿ ಕಾರು, ಬೈಕು, ಮೋಜು ಮಸ್ತಿಗಳ ಕ್ರೇಜ್ ಹೊಂದಿರುವ ಸಿನಿಮಾ ನಟರ ಪತ್ನಿಯರು ಕೆಲವು ವಿಶೇಷವಾದ ಹವ್ಯಾಸಗಳನ್ನು ಕೂಡ ಹೊಂದಿರುತ್ತಾರೆ. ಅದರಂತೆ ನಟ ಕಿಚ್ಚ ಸುದೀಪ್ ಅವರ ಪತ್ನಿ ಪ್ರಿಯಾ ಸುದೀಪ್ ಅವರಿಗೂ ಹೊಸದಾಗಿ ಕ್ರೇಜ್ ಒಂದು ಆವರಿಸಿಕೊಂಡಿದೆಯಂತೆ.

 

 

ಪ್ರಿಯಾ ಸುದೀಪ್ ಅವರಿಗೆ ಊರು ಸುತ್ತೋದು ಅಂದ್ರೆ ಸಕತ್ ಇಷ್ಟವಂತೆ, ಅದರಲ್ಲೂ ಟ್ರಕ್ಕಿಂಗ್ ಅಂದ್ರೆ ಜಾಸ್ತಿ ಇಷ್ಟ ಅಂತೇ. ಅವರು ಇತ್ತೀಚಿಗೆ ಮೇಘಾಲಯದ ಕಾಡಿಗೆ ಟ್ರಕ್ಕಿಂಗ್ ಹೋಗಿದ್ದು ಸಕತ್ ಎಂಜಾಯ್ ಮಾಡಿಕೊಂಡು ಬಂದಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಚಿತ್ರಗಳ ಸಮೇತ ಪೋಸ್ಟ್ ಮಾಡಿರುವ ಪ್ರಿಯ ಸುದೀಪ್ ““Mistical”,Magical Meghalaya!!ಮೋಡಗಳ ಮಧ್ಯೆ ಜೀವಿಸಿ ಮತ್ತು ಪೈನ್ ಕಾಡುಗಳು ಹಾಗು ನೀರಿನ ಜಲಪಾತದ ಉದ್ದಕ್ಕೂ ಟ್ರೆಕಿಂಗ್ ಮಾಡಿ, ತೊರೆಗಳಿಂದ ನೈಸರ್ಗಿಕ ಖನಿಜಯುಕ್ತ ನೀರನ್ನು ಸೇವಿಸಿದ್ದೇವೆ ” ಎಂದು ಬರೆದುಕೊಂಡಿದ್ದಾರೆ.. ಪ್ರಿಯಾ ಸುದೀಪ್ ಅವರ ಟ್ರಕ್ಕಿಂಗ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 

 

ಇತ್ತೀಚೆಗೆ ನಟ ಕಿಚ್ಚ ಸುದೀಪ್ ತಮ್ಮ ಪತ್ನಿ ಪ್ರಿಯಾ ಸುದೀಪ್ ಮತ್ತು ಮಗಳು ಸಾನ್ವಿ ಜೊತೆ ಬಿಡುವು ಮಾಡಿಕೊಂಡು ಮಲೇಷಿಯಾದಲ್ಲಿ ಹಾಲಿಡೇ ಎಂಜಾಯ್ ಮಾಡಿಕೊಂಡು ಬಂದಿದ್ದರು ಈ ನಡುವೆಯೇ ಮೇಘಾಲಯದ ಕಾಡಿನಲ್ಲಿ ಟ್ರಕ್ಕಿಂಗ್ ಹೋಗಿರುವುದು ಪ್ರಿಯಾ ಅವರಿಗೆ ಪ್ರವಾಸದ ಮೇಲೆ ಸಿಕ್ಕಾಪಟ್ಟೆ ಕ್ರೇಜ್ ಇದೆ ಎನ್ನುವುದು ತಿಳಿಯುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top