ಮನೋರಂಜನೆ

ಗಾಯದ ನಡುವೆಯೂ ಯಜಮಾನ ಶೂಟಿಂಗ್’ನಲ್ಲಿ ಭಾಗಿಯಾದ ದರ್ಶನ್.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಐವತ್ತೊಂದನೇ ಸಿನಿಮಾ `ಯಜಮಾನ’ದ ಕೆಲಸ ಕಾರ್ಯಗಳು ಹೇಗೆ ನಡೆಯುತ್ತಿವೆ ಅಂತ ಅಭಿಮಾನಿಗಳೆಲ್ಲ ತಲೆ ಕೆಡಿಸಿಕೊಂಡು ಕಾಯುತ್ತಿದ್ದಾರೆ. ಆದರೆ ಚಿತ್ರ ತಂಡ ಮಾತ್ರ ಈ ಬಗ್ಗೆ ಒಂದೇ ಒಂದು ವಿಚಾರ, ಯಾವುದೇ ಫೋಟೋಗಳೂ ಲೀಕ್ ಆಗದಂತೆ ಜಾಗರೂಕತೆಯಿಂದ ಮುಂದುವರೆಯುತ್ತಿದೆ. ಈಗಾಗಲೆ ಮೊದಲ ಶೇಕಡಾ.40ರಷ್ಟು ಶೂಟಿಂಗ್ ಮುಗಿಸಿರುವ ಯಜಮಾನ ಚಿತ್ರತಂಡ ಬಿರುಸಿನಿಂದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ.

 

 

ಚಿತ್ರದ ಸಾಹಸ ದೃಶ್ಯವೊಂದರ ಚಿತ್ರೀಕರಣದ ವೇಳೆ ದರ್ಶನ್ ಅವರ ಎಡಗೈಗೆ ಗಾಯಾವಾಗಿತ್ತು ಹಾಗಾಗಿ ಕೆಲವು ದಿನಗಳಿಂದ ಶೂಟಿಂಗ್ ನಿಂದ ಹೊರ ಉಳಿದಿದ್ದರು ಆದರೆ ಇದೀಗ ದರ್ಶನ್ ಅವರು ತಮ್ಮ ಗಾಯದ ಹೊರತಾಗಿಯೂ ಚಿತ್ರೀಕರಣಕ್ಕೆ ಮರಳಿದ್ದಾರೆ. ದರ್ಶನ್ ಅವರ ಕೈಗೆ ಗಾಯವಾಗಿತ್ತು ಎಂದು ಹೇಳಲಾಗುತ್ತಿತ್ತು. ಹೀಗಾಗಿ ಚಿತ್ರೀಕರಣದಿಂದ ದರ್ಶನ್ ದೂರ ಉಳಿದಿದ್ದರು. ಗಾಯದ ಹೊರತಾಗಿಯು ಮೇ.18 ರಿಂದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆಂದು ಹೇಳಲಾಗುತ್ತಿದೆ.

 

 

ಬಿ ಸುರೇಶ್ ಮತ್ತು ಶೈಲಜಾ ನಾಗ್ ಅವರು ತಮ್ಮ ಮೀಡಿಯಾ ಹೌಸ್ ಕಡೆಯಿಂದ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಪೊನ್ನು ಕುಮಾರ್ ಯಜಮಾನ ಚಿತ್ರದ ನಿರ್ದೇಶನದ ಹೊಣೆ ಹೊತ್ತಿದ್ದಾರೆ.. ವಿ ಹರಿಕೃಷ್ಣ ಅವರು ಸಂಗೀತ ನಿರ್ದೇಶನ ಮಾಡುತಿದ್ದರೆ ಭರ್ಜರಿ ಚೇತನ್ ಸಂಭಾಷಣೆ ಬರೆಯುತ್ತಿದ್ದಾರೆ..ನಟ ದರ್ಶನ್ ಸೇರಿದಂತೆ ರಶ್ಮಿಕಾ ಮಂದಣ್ಣ, ತನ್ಯಾ ಹೋಪ್, ಡಾಲಿ ಧನಂಜಯ್, ಠಾಕೂರ್ ಅನೂಪ್ ಸಿಂಗ್, ದೇವರಾಜ್ ಒಳಗೊಂಡಂತೆ ಸಾಕಷ್ಟು ಕಲಾವಿದರು ಚಿತ್ರದಲ್ಲಿ ನಟಿಸುತ್ತಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top