ಸಮಾಚಾರ

ಕುದುರೆ ಖರೀದಿ ಮಾಡಿದ್ದು ನಾನಲ್ಲ, ಎಂದ ಶ್ರೀರಾಮುಲು

ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು ಈ ಭಾರಿ ಕರ್ನಾಟಕ ಅತಂತ್ರ ವಿಧಾನ ಸಭೆಯನ್ನು ಅನಿವಾರ್ಯವಾಗಿ ಪಡೆದುಕೊಂಡಿದೆ. ಫಲಿತಾಂಶದ ನಂತ್ರ ರಾಜ್ಯ ರಾಜಕಾರಣದಲ್ಲಿ ಕ್ಷಣ ಕ್ಷಣಕ್ಕೂ ತಿರುವು ಪಡೆದುಕೊಳ್ಳುತ್ತಿದ್ದು ಒಂದು ಕಡೆ ಬಿಜೆಪಿಯಾದರೆ ಮತ್ತೊಂದು ಕಡೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರ ರಚಿಸುವ ಬಗ್ಗೆ ನಾನಾ ಸರ್ಕಸ್ ನಡೆಸುತ್ತಿವೆ.

 

 

104 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿಯ ಮುಂದಿನ ನಡೆ ಏನೆಂಬುದರ ಬಗ್ಗೆ ತೀವ್ರ ಕೂತುಹಲವನ್ನು ಹುಟ್ಟುಹಾಕಿದೆ , ಈಗಾಗಲೇ ಯಡಿಯೂರಪ್ಪ ನಾಳೆ ಪ್ರಮಾಣ ವಚನ ಮಾಡುವುದಾಗಿ ಘೋಷಣೆ ಮಾಡಿದ್ದಾರೆ .

ಈಗ ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಹಾಗು ಬಿಜೆಪಿ ಯಿಂದ ಕುದುರೆ ವ್ಯಾಪಾ ಜೋರಾಗಿ ನಡೆಯುತ್ತಿದ್ದು , ಆದರೆ ಜೆಡಿಎಸ್ ಪಕ್ಷದ ರಾಜ ವೆಂಕಟಪ್ಪ ನಾಯಕ್ ಮತ್ತು ವೆಂಕಟ ರಾವ್ ನಾಡಗೌಡ ಅವರು ಶಾಸಕಾಂಗ ಸಭೆಯಿಂದ ದೂರ ಉಳಿದದ್ದು, ಅನೇಕ ಊಹಾಪೋಹಗಳಿಗೆ ಕಾರಣ ಆಗಿದೆ ಎನ್ನಲಾಗುತ್ತಿದೆ.

ಈಗಾಗಲೇ ನಾಲ್ಕು ತಂಡಗಳಾಗಿ ಪಕ್ಷೇತರರು ಹಾಗು ಜೆಡಿಎಸ್ ,ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೆಳೆಯಲು ನಾನಾ ಕಸರತ್ತುಗಳನ್ನು ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು ಹಾಗೆಯೇ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಶ್ರೀ ರಾಮುಲು ಅವರಿಗೂ ಜವಾಬ್ದಾರಿ ವಹಿಸಿಕೊಟ್ಟಿದ್ದಾರೆ ಎಂಬ ಮಾತು ಸಹ ಇತ್ತು

.

 

ಹೀಗಿರುವಾಗ ‘ಆಪರೇಷನ್ ಫ್ಲವರ್ ‘ ಹೆಸರಿನಲ್ಲಿ ಒಬ್ಬರು ಶಾಸಕರನ್ನು ಸೆಳೆಯಲು ಪ್ರಯತ್ನ ಪಟ್ಟರೆ ನಾವು ಬಿಜೆಪಿಯಿಂದ ಇಬ್ಬರನ್ನು ಸೆಳೆಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ .

ಹಾಗೆಯೇ ಶ್ರೀ ರಾಮುಲು ಹೇಳಿಕೆಯೊಂದನ್ನು ನೀಡಿದ್ದು ಸಂಖ್ಯಾಬಲ ನಮ್ಮ ಬಳಿ ಇದೆ ಬಿಜೆಪಿ ಸರ್ಕಾರ ರಚನೆ ಮಾಡುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ , ಹಾಗೆಯೇ ಶಾಸಕರನ್ನು ಸೆಳೆಯುವಲ್ಲಿ ನನ್ನ ಪಾತ್ರ ಇಲ್ಲ , ಪಕ್ಷೇತರರು ಹಾಗೆ ಬಿಜೆಪಿ ,ಜೆಡಿಎಸ್ ನ ಅನೇಕ ಶಾಸಕರು ಬಿಜೆಪಿ ಬೆಂಬಲಕ್ಕೆ ನಿಂತಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top