ಸಮಾಚಾರ

ಈಗ ನಡೆಯೋದು ‘ಆಪರೇಷನ್ ಕಮಲ’ ಅಲ್ಲ ‘ಆಪರೇಷನ್ ಪ್ಲವರ್’-10 ಶಾಸಕರನ್ನು ಕರೆತಂದವರಿಗೆ ಡಿಸಿಎಂ ಪಟ್ಟ

ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು ಈ ಭಾರಿ ಕರ್ನಾಟಕ ಅತಂತ್ರ ವಿಧಾನ ಸಭೆಯನ್ನು ಅನಿವಾರ್ಯವಾಗಿ ಪಡೆದುಕೊಂಡಿದೆ. ಫಲಿತಾಂಶದ ನಂತ್ರ ರಾಜ್ಯ ರಾಜಕಾರಣದಲ್ಲಿ ಕ್ಷಣ ಕ್ಷಣಕ್ಕೂ ತಿರುವು ಪಡೆದುಕೊಳ್ಳುತ್ತಿದ್ದು ಒಂದುಕಡೆ ಬಿಜೆಪಿಯಾದರೆ ಮತ್ತೊಂದು ಕಡೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರ ರಚಿಸುವ ಬಗ್ಗೆ ನಾನಾ ಸರ್ಕಸ್ ನಡೆಸುತ್ತಿವೆ.

 

 

ಅತಂತ್ರ ವಿಧಾನಸಭೆ ನಿರ್ಮಾಣವಾಗಿರುವ ಕಾರಣ ಜೆಡಿಎಸ್​​ಗೆ ಸರ್ಕಾರ ರಚಿಸಲು ಕಾಂಗ್ರೆಸ್ ಬೇಷರತ್ ಬೆಂಬಲ ನೀಡಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷವು ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ ರಚನೆಗೆ ಮುಂದಾಗಿದ್ದು ಈಗಾಗಲೇ ಮೊದಲನೇ ಹಂತವಾಗಿ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡಬೇಕೆಂದು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ರಾಜ್ಯಪಾಲರನ್ನು ಭೇಟಿಮಾಡಿ ಅನುಮತಿ ಕೋರಿದ್ದಾರೆ. ಆದರೆ ಅತ್ತ 104 ಸ್ಥಾನಗಳನ್ನ ಪಡೆದು ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವ ಬಿಜೆಪಿ ಕೂಡ ಶತಾಯಗತಾಯ ಸರ್ಕಾರ ರಚನೆ ಮಾಡಬೇಕು ಎಂದು ನಿರ್ಧರಿಸಿದ್ದು ಅದಕ್ಕಾಗಿ ನಾನಾ ಕಸರತ್ತಿನ ಮೊರೆ ಹೋಗಿದ್ದಾರೆ.. ಬಿಜೆಪಿಗೆ ಬಹುಮತ ಸಾಭೀತುಪಡಿಸಲು ಅವಶ್ಯಗಿ ಬೇಕಾಗಿರೋದು ಇನ್ನು 7 ಸ್ಥಾನಗಳು ಮಾತ್ರ ಈ ನಿಟ್ಟಿನಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಶಕರನ್ನು ತನ್ನತ್ತ ಸೆಳೆದುಕೊಳ್ಳಲು ಬಿಜೆಪಿ ಈ ಭಾರಿ ‘ಆಪರೇಷನ್ ಪ್ಲವರ್’ ಎಂಬ ಹೆಸರಿನಲ್ಲಿ ಸ್ಟೇಟರ್ಜಿ ರೂಪಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಕಮಲ ನಾಯಕರು ಆಪರೇಷನ್ ಪ್ಲವರ್ ಗೆ ಇಳಿದಿರುವುದರಿಂದ ಸಹಜವಾಗಿ ಕೈ ಮತ್ತು ಜೆಡಿಎಸ್ ನಾಯಕರಿಗೆ ಆಪರೇಷನ್ ಕಮಲದ ಭೀತಿ ಕಾಡುತ್ತಿದ್ದು ತಮ್ಮ ಶಾಸಕರು ಪಕ್ಷ ಬಿಟ್ಟು ಹೋಗದಂತೆ ಹೈ ಅಲರ್ಟ್ ಎಚ್ಚರಿಕೆ ವಹಿಸಿಕೊಂಡಿದ್ದಾರೆ.

 

 

. ಈ ಭಾರಿ ‘ಆಪರೇಷನ್ ಕಮಲ’ ಬದಲು ‘ಆಪರೇಷನ್ ಪ್ಲವರ್’ ಹೆಸರಿನಲ್ಲಿ ಕಣಕ್ಕಿಳಿದಿರುವ ಬಿಜೆಪಿ ನಾಯಕರುಗಳು ಈಗಾಗಲೇ ಆಪರೇಷನ್ ಫ್ಲವರ್ ಮಾಡಲು ನಾಲ್ಕು ತಂಡಗಳಾಗಿ ರಚನೆಯಾಗಿದ್ದು, ಈ ಮೂಲಕ ಬಿಗ್ ಆಪರೇಷನ್ ಫ್ಲವರ್ ನಡೆಯಲಿದೆ ಎಂದು ವರದಿಯಾಗಿದೆ. ಬಿಎಸ್ ವೈ ನೇತೃತ್ವದಲ್ಲಿ ಒಂದು ತಂಡ, ಶ್ರೀರಾಮುಲು ನೇತೃತ್ವದಲ್ಲಿ ಒಂದು ತಂಡ, ಸಿ.ಪಿ.ಯೋಗೇಶ್ವರ್ ನೇತೃತ್ವದಲ್ಲಿ ಒಂದು ತಂಡ ಹಾಗೂ ಜೆ.ಪಿ.ನಡ್ಡಾ ನೇತೃತ್ವದಲ್ಲಿ ಒಂದು ತಂಡ ರಚನೆಯಾಗಿದ್ದು ನಾಲ್ಕು ತಂಡಗಳಲ್ಲಿ ಆಪರೇಷನ್ ಫ್ಲವರ್ ಗೆ ಬಿಜೆಪಿ ಕೈ ಹಾಕಿದೆ ಎಂದು ಹೇಳಲಾಗುತ್ತಿದೆ.. ಯಾವ ವ್ಯಕ್ತಿ ಹತ್ತಕ್ಕಿಂತ ಹೆಚ್ಚು ಶಾಸಕರನ್ನು ಬಿಜೆಪಿಗೆ ಕರೆದುಕೊಂಡು ಬರುತ್ತಾರೋ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಭರವಸೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಈ ರಾಜಕೀಯ ದೊಂಬರಾಟಗಳು ಮುಂದೆ ಯಾವೆಲ್ಲಾ ತಿರುವುಗಳನ್ನ ಪಡೆದುಕೊಳ್ಳುತ್ತದೆ ಎಂದು ಕಾದುನೋಡಬೇಕಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top