ಸಮಾಚಾರ

ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಹಿನ್ನಲೆ ಆಪರೇಷನ್ ಕಮಲದ ಪಾಲಾದ್ರ 3 ಜೆಡಿಎಸ್ ಅಭ್ಯರ್ಥಿಗಳು

ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು ಈ ಭಾರಿ ಕರ್ನಾಟಕ ಅತಂತ್ರ ವಿಧಾನ ಸಭೆಯನ್ನು ಅನಿವಾರ್ಯವಾಗಿ ಪಡೆದುಕೊಂಡಿದೆ. ಫಲಿತಾಂಶದ ನಂತ್ರ ರಾಜ್ಯ ರಾಜಕಾರಣದಲ್ಲಿ ಕ್ಷಣ ಕ್ಷಣಕ್ಕೂ ತಿರುವು ಪಡೆದುಕೊಳ್ಳುತ್ತಿದ್ದು ಒಂದು ಕಡೆ ಬಿಜೆಪಿಯಾದರೆ ಮತ್ತೊಂದು ಕಡೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರ ರಚಿಸುವ ಬಗ್ಗೆ ನಾನಾ ಸರ್ಕಸ್ ನಡೆಸುತ್ತಿವೆ.

 

 

104 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿಯ ಮುಂದಿನ ನಡೆ ಏನೆಂಬುದರ ಬಗ್ಗೆ ತೀವ್ರ ಕೂತುಹಲವನ್ನು ಹುಟ್ಟುಹಾಕಿದೆ , ಈಗಾಗಲೇ ಯಡಿಯೂರಪ್ಪ ನಾಳೆ ಪ್ರಮಾಣ ವಚನ ಮಾಡುವುದಾಗಿ ಘೋಷಣೆ ಮಾಡಿದ್ದಾರೆ .

ಬಿಜೆಪಿ ಯಿಂದ ಕುದುರೆ ವ್ಯಾಪಾ ಜೋರಾಗಿ ನಡೆಯುತ್ತಿದ್ದು ಮಾಜಿ ಸಂಸದೆ ಈಗಾಗಲೇ ಅಭ್ಯರ್ಥಿಗಳನ್ನು ಬಿಜೆಪಿ ಕೊಂಡು ಕೊಳ್ಳುತ್ತಿದೆ ಎಂದು ಆರೋಪ ಮಾಡಿದ್ದಾರೆ ಹಾಗೆಯೇ ಬೆಳಗ್ಗೆ ಪತ್ರಿಕಾಗೋಷ್ಠಿಯಲ್ಲಿ ಕುಮಾರ ಸ್ವಾಮಿಯವರು ಸಹ 100 ಕೋಟಿಗೆ ಬಿಜೆಪಿ ಬಹುಬಲ ಸಾಧಿಸಲು ತಂತ್ರ ರೂಪಿಸಿದೆ ಎಂದು ತಿಳಿದುಬಂದಿದೆ .

ಬಿಜೆಪಿ ರಾಜ್ಯಪಾಲರನ್ನು ಭೇಟಿ ಮಾಡಿದ ನಂತರ 5 ಗಂಟೆಗೆ ರಾಜ್ಯಪಾಲರನ್ನು ಜೆಡಿಎಸ್ ಹಾಗು ಕಾಂಗ್ರೆಸ್ ಸೇರಿ ಭೇಟಿ ಮಾಡಲಿದ್ದಾರೆ ಎಂದು ಕೇಳಿಬರುತ್ತಿದೆ , ಆದರೆ ಜೆಡಿಎಸ್ ನ 3 ಸಹಿಗಳು ಮಿಸ್ ಆಗಿವೆ ಎಂದು ತಿಳಿದುಬರುತ್ತಿದೆ ಹಾಗೆಯೇ 4 ಕಾಂಗ್ರೆಸ್ ಗೆದ್ದ ಅಭ್ಯರ್ಥಿಗಳು ಕಾಣೆ ಆಗಿದ್ದಾರೆ ಎಂದು ತಿಳಿದುಬರುತ್ತದೆ .

ಮಾಗಡಿ ಮಂಜುನಾಥ್ (ಎ ಮಂಜುನಾಥ್ ) ,ಮೇಲುಕೋಟೆಯ ಸಿ .ಎಸ್ ಪುಟ್ಟ ರಾಜು ಹಾಗೆಯೇ ಇನ್ನೊಬ್ಬರ ಸಹಿಗಳು ಇನ್ನು ಖಾಲಿ ಇವೆ .

ಆದರೆ ಕಾಂಗ್ರೆಸ್ ಮೂಲಗಳಿಂದ ತಿಳಿದುಬಂದ ಮಾಹಿತಿಯೇನೆಂದರೆ ಅಭ್ಯರ್ಥಿಗಳು ಇನ್ನು ಬರುತ್ತಿದ್ದಾರೆ ಅದರಲ್ಲಿ ಸ್ವಲ್ಪ ತಡವಾಗಿದೆ ಅಷ್ಟೇ ಎಂದು ಹೇಳಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top