ಮನೋರಂಜನೆ

ಎಣ್ಣೆ, ಕಾಸು ಕೊಡದೇ ಜಗ್ಗೇಶ್ ಸಂಪಾದಿಸಿದ ಮತಗಳೆಷ್ಟು ಗೊತ್ತಾ.

ಭಾರಿ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನ ಸಭಾ ಚುನಾವಣೆಯ ಫಲಿತಾಂಶ ಕೊನೆಗೂ ಪ್ರಕಟವಾಗಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಯಶವಂತಪುರ ಕ್ಷೇತ್ರದ ಫಲಿತಾಂಶ ಕೂಡ ನಿರೀಕ್ಷೆಯಂತೆ ಬಂದಿದೆ. ಇಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದ ನಟ ಜಗ್ಗೇಶ್‌‌ ಹೀನಾಯ ಸೋಲುಕಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಎಸ್.ಟಿ.ಸೋಮಶೇಖರ್ ಗೆಲುವು ಸಾಧಿಸಿದ್ದು ಜಗ್ಗೇಶ್’ಗೆ ಮುಖಭಂಗವಾಗಿದೆ.

 

 

ಯಶವಂತಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಎಸ್.ಟಿ.ಸೋಮಶೇಖರ್ ಜಯಸಾಧಿಸಿದ್ದು ತಮ್ಮ ಹತ್ತಿರದ ಸ್ಪರ್ಧಿ ಜೆಡಿಎಸ್’ನ ನಾರಾಯಣಗೌಡ ವಿರುದ್ಧ 14 ಸಾವಿರ ಮತಗಳ ಅಂತರದಿಂದ ಜಯಸಾಧಿಸಿದ್ದಾರೆ. ಉಳಿದಂತೆ ನಟ ಜಗ್ಗೇಶ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಎಸ್.ಟಿ.ಸೋಮಶೇಖರ್ 92 ಸಾವಿರ ಮತಗಳನ್ನು ಪಡೆದಿದ್ದರೇ ನಾರಾಯಣ ಗೌಡ 88 ಸಾವಿರ ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಆದರೆ ನಟ ಜಗ್ಗೇಶ್ ಕೇವಲ 52 ಸಾವಿರ ಮತಗಳನ್ನ ಪಡೆಯುವ ಮೂಲಕ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.

 

 

ಮೊನ್ನೆ ತಾನೇ ಯಶವಂತಪುರ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನವರು ಹಣ, ಹೆಂಡ ಹಂಚುತ್ತಿದ್ದಾರೆ ಎಂದು ಹೇಳಿಕೊಂಡಿದ್ದ ಜಗ್ಗೇಶ್ ತಾನು ಹಣ ಹೆಂಡ ಹಂಚದೇ ಇಷ್ಟೊಂದು ಮತಗಳನ್ನು ಪಡೆದಿದ್ದೇನೆ ಎಂದು ಹೇಳಿದ್ದಾರೆ. ಈ ಬಗ್ಗೆ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಜಗ್ಗೇಶ್ “ಕಳೆದ ಚುನಾವಣೆಯಲ್ಲಿ 12 ಸಾವಿರ ಮತವಿದ್ದ ಯಶವಂತಪುರ ಭಾ.ಜ.ಪ..ನನ್ನ 10ದಿನದ ಶ್ರಮಕ್ಕೆ.. ಹಾಗು ಹಣಹೆಂಡ ಹಂಚದೆ..ಕಲಾವಿದನೆಂಬ ಅಭಿಮಾನದಿಂದ”52,946 ಮತ ನೀಡಿದ ಯಶವಂತಪುರದ ಮಹನೀಯರಿಗೆ ಧನ್ಯವಾದ.. ನಾನು ಸೋತರು ನನ್ನ ಮೇಲಿನ ಅಭಿಮಾನ ಗೆದ್ದಿದೆ..3ತಿಂಗಳ ಮೊದಲೆ ಅಕಾಡಕ್ಕೆ ಇಳಿಸಿದ್ದರೆ ಚಿತ್ರಣ ಬೇರೆ ಇರುತ್ತಿತ್ತು..ಆದರು ಹೆಮ್ಮೆಯಿದೆ.” ಎಂದು ಬರೆದುಕೊಂಡಿದ್ದರಂತೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top