ಮನೋರಂಜನೆ

ಸೈರಾ ರೆಡ್ಡಿ ನಂತರ ತೆಲುಗಿನ ಮತ್ತೊಂದು ದೊಡ್ಡ ಸಿನಿಮಾದಲ್ಲಿ ನಟಿಸಲಿದ್ದಾರೆ ಕಿಚ್ಚ ಸುದೀಪ್?

ಸುದೀಪ್! ಕನ್ನಡ ಚಿತ್ರರಂಗದ ಈ ತಲೆಮಾರಿನ ನಾಯಕನಟರನ್ನು ಪ್ರತಿನಿಧಿಸುವ ಮುಂಚೂಣಿಯ ನಟ. ತಮ್ಮ ವಿಭಿನ್ನ ಕಂಠ ಮತ್ತು ಅದ್ಭುತ ನಟನೆಯಿಂದಲೇ ಸ್ಟಾರ್ ಅನ್ನಿಸಿಕೊಂಡಿರುವ ಕಿಚ್ಚಾ ಸುದೀಪ್ ಈಗಂತೂ ದೇಶ ವಿದೇಶಗಳಲ್ಲಿಯೂ ಸಖತ್ ಫೇಮಸ್. ಕೇವಲ ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಗಳಲ್ಲಿಯೂ ಬಹು ಬೇಡಿಕೆಯ ನಟ. ಇಂಥ ಸುದೀಪ್’ಗೆ ಮಾರಿ ಹೋಗಿರುವ ತೆಲುಗು ಜನ ತಮ್ಮ ಭಾಷೆಯಲ್ಲಿ ನಟಿಸಿವಂತೆ ಸುದೀಪ್ ಅವರನ್ನು ಮನವಿಮಾಡಿಕೊಳ್ಳುತ್ತಿದ್ದಾರೆ.

 

 

ರಾಜಮೌಳಿ ನಿರ್ದೇಶನದ ಈಗ ಚಿತ್ರದ ಮೂಲಕ ಸುದೀಪ್ ತೆಲುಗಿನಲ್ಲಿಯೂ ಅಗಾಧವಾದ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿರುವ ಸುದೀಪ್ ಇನ್ನೇನು ಶೂಟಿಂಗ್ ಶುರುವಾಗಬೇಕಾಗಿರುವ ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ, ಅಮಿತಾಬ್ ಬಚ್ಚನ್ ಜೊತೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ. ಈ ಎಲ್ಲಾ ಸಮಾಚಾರಗಳ ನಡುವೆ ಮತ್ತೊಂದು ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದು ಸೈರಾ ರೆಡ್ಡಿ ಚಿತ್ರದ ನಂತರ ತೆಲುಗಿನ ಮತ್ತೊಂದು ಬಿಗ್ ಬಜೆಟ್ ಚಿತ್ರದಲ್ಲಿ ಸುದೀಪ್ ನಟಿಸಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

 

 

ಸದ್ಯ ‘ರಂಗಸ್ಥಳಂ’ ಚಿತ್ರದ ಸಕ್ಸಸ್ ನಲ್ಲಿರುವ ನಟ ರಾಮ್ ಚರಣ್ ಶೀಘ್ರದಲ್ಲಿ ತಮ್ಮ ಹೊಸ ಸಿನಿಮಾ ಶುರುಮಾಡಲಿದ್ದು ಸೈರಾ ರೆಡ್ಡಿಯಂತೆಯೇ ಈ ಚಿತ್ರವೂ ಕೂಡ ಭಾರತೀಯ ಚಿತ್ರರಂಗದ ಪ್ರಮುಖ ನಟರುಗಳನ್ನು ಹೊಂದಿರಲಿದೆಯಂತೆ. ಹಾಗೆಯೇ ಕಿಚ್ಚ ಸುದೀಪ್ ಅವರಿಗೂ ಕೂಡ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿಸಲು ಕೇಳಿಕೊಳ್ಳಲಾಗಿದೆಯಂತೆ. ಆದರೆ ಸುದೀಪ್ ಮಾತ್ರ ಇನ್ನೂ ಈ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲವಂತೆ. ಇನ್ನೂ ಹೆಸರಿಡದ ಚಿತ್ರವನ್ನು ಬೋಯಪಟಿ ಶ್ರೀನು ನಿರ್ದೇಶನ ಮಾಡುತ್ತಿದ್ದಾರೆ.

ಸದ್ಯ ದಿ ವಿಲನ್, ಪೈಲ್ವಾನ್, ಕೋಟಿಗೊಬ್ಬ3, ಅಂಬಿ ನಿಂಗ್ ವಯಸ್ಸಾಯ್ತೋ, ಹಾಲಿವುಡ್ ನ ರೈಸನ್, ತೆಲುಗಿನ ಉಯ್ಯಾಲವಾಡ ನರಸಿಂಹ ರೆಡ್ಡಿ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಬ್ಯುಸಿಯಾಗಲಿರುವ ಕಿಚ್ಚ ರಾಮ್ ಚರಣ್ ಅವರ ಮಲ್ಟಿ ಸ್ಟಾರರ್ ಚಿತ್ರದಲ್ಲಿ ನಟಿಸಲಿದ್ದಾರೆಯೇ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿ ಮೂಡಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top