ಸಮಾಚಾರ

ಚುನಾವಣಾ ಪ್ರಚಾರಕ್ಕೆ ಹೋದ ಜಯಕ್ಕನಿಗೆ ಕಾಟಕೊಟ್ಟ ಪೋಲಿ ಹುಡುಗರು! ಪೋಲೀಸರ ಮೊರೆಹೋದ ಜಯಲಕ್ಷ್ಮಿ.

ಬಿಗ್ ಬಾಸ್ ಅಂಗಳದಲ್ಲಿ ಮಿಂದೆದ್ದು ಬಂದ ಮೇಲೆ ನರ್ಸ್ ಜಯಲಕ್ಷ್ಮಿ ವರ್ತಮಾನಕ್ಕೆ ಬಂದಿದ್ದೆ ಯಡಿಯೂರಪ್ಪನ ಮಾನಸಿಕ ಪುತ್ರ ಕಮ್ ಬಯಲು ಡಿಸ್ಕೋ ಡಾನ್ಸರ್ ರೇಣುಕಾಚಾರ್ಯನೊಂದಿಗಿನ ರಾಸಲೀಲೆಯ ಮೂಲಕ. ರೇಣು ಕಿಸ್ಸು ಕೊಡುತ್ತಿದ್ದ ಫೋಟೋ ಹಿಡಿದು ಮಾಧ್ಯಮದೆದುರು ಬಂದು ರಂಪ ಎಬ್ಬಿಸಿದ್ದ ಈಕೆ ಈ ಹಿಂದಿನಿಂದಲೂ “ನಾ ಒಂದಿನ ಲೇಡಿ ಸಿಎಂ ಆಗಿ ವಿಧಾನಸೌಧದ ಮೂರನೇ ಮಹಡಿಲಿ ಕೂರ್ತೀನಿ” ಅಂತ ಹೇಳಿಕೊಂಡು ಬಂದಿದ್ದರು. ಲೇಡಿ ಸಿಎಂ ಆಗುವ ಮಹದಾಸೆಯಿಂದಲೋ ಏನೋ ಈಗ ಚುನಾವಣಾ ಅಖಾಡಲ್ಲೂ ಇಳಿದಿದ್ದಾರೆ.

 

 

ಇತ್ತೀಚಿಗೆ ಸುದ್ದಿಯಾಗಿರುವ ನೌಹೀರಾ ಶೇಖ್ ಅವರ MEP ಪಕ್ಷಕ್ಕೆ(ಮಹಿಳಾ ಎಂಪವರ್ ಮೆಂಟ್ ಪಕ್ಷ) ಈಗ ಸೇರ್ಪಡೆಗೊಂಡಿದ್ದ ಜಯಕ್ಕ ಬಿಟಿಎಂ ಲೇಔಟ್‍ನಲ್ಲಿ ಎಂಇಪಿ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಆದರೆ ಅಖಾದಲ್ಲಿರುವ ಜಯಕ್ಕನಿಗೆ ಪೋಲಿ ಹುಡುಗರು ಸಿಕ್ಕಾಪಟ್ಟೆ ಕಾಟ ಕೊಡುತ್ತಿದ್ದರಂತೆ. ಈ ಸಂಭಂದ ಜಯಕ್ಕ ಪೋಲೀಸರ ಮೊರೆ ಹೋಗಿದ್ದು ಪ್ರಚಾರಕ್ಕೆ ಹೋದ್ರೆ ಕೆಲ ಪೋಲಿಹುಡುಗರು ಗುಂಪು ಕಟ್ಟಿಕೊಂಡು ನನ್ನನ್ನು ಹಿಂಬಾಲಿಸಿ ಇಲ್ಲ ಸಲ್ಲದ ಕಾಟ ಕೊಡುತ್ತಿದ್ದಾರೆ ಎಂದು ದೂರು ನೀಡಿದ್ದಾರೆ.

 

 

ಈ ಸಂಭಂದ ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ಜಯಲಕ್ಷ್ಮಿ “ನಾನು ಪ್ರಚಾರಕ್ಕೆ ಬಂದ ದಿನದಿಂದ ಪೋಲಿ ಹೈಕಳ ಗ್ಯಾಂಗೊಂಡು ಬೈಕು ಹಾಗೂ ಕಾರಿನಲ್ಲಿ ಫಾಲೋ ಮಾಡ್ಕೊಂಡು ಬರುತ್ತಿದ್ದಾರೆ. ನನ್ನದೇ ಆದ ಒಬ್ಬ ಫೋಟೋಗ್ರಾಫರ್ ಹಾಗೂ ವಿಡಿಯೋಗ್ರಾಫರ್ ಅದನ್ನು ರೆಕಾರ್ಡ್ ಮಾಡಿದ್ದಾರೆ. ಅದನ್ನು ನಾನು ಡಿಸಿಪಿಗೆ ಕೊಟ್ಟಿದ್ದೇನೆ. ರಾಮಲಿಂಗ ರೆಡ್ಡಿ ಅವರಿಗೆ ತಿಳಿದಿರುವ ಒಬ್ಬ ವ್ಯಕ್ತಿ ನನ್ನ ನಾಮಪತ್ರ ಹಿಂಪಡೆಯಲು ಹೇಳಿದ್ದರು. ಆದರೆ ಅದಕ್ಕೆ ನಾನು ಒಪ್ಪಲಿಲ್ಲ. ಹಾಗಾಗಿ ನನಗೆ ಈ ರೀತಿ ಕಾಟ ಕೊಡುತ್ತಿದ್ದಾರೆ.. ನನಗೆ ಈ ಜಾಗ ಹೊಸದು ಇಲ್ಲಿ ಅಷ್ಟಾಗಿ ನನಗೆ ಯಾರು ತಿಳಿದಿಲ್ಲ., ನನಗೆ ರಕ್ಷಣೆ ಬೇಕಿದೆ.” ಎಂದು ಹೇಳಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top