ಸಿನಿಮಾ

ಕನ್ನಡ ಫಿಲಂ ಇಂಡಸ್ಟ್ರಿಗೆ ಗ್ರಾಂಡ್ ಎಂಟ್ರಿ ಕೊಡ್ತಿದ್ದಾರೆ ಜೂನಿಯರ್ ಆರುಮುಘ ರವಿಶಂಕರ್

ಖ್ಯಾತ ನಟ ಸಾಯಿ ಕುಮಾರ್ ಅವರ ಸಹೋದರ ರವಿ ಶಂಕರ್ ಕನ್ನಡ ಚಿತ್ರರಂಗದಲ್ಲಿ ಆರುಮುಘ ಎಂದೇ ಖ್ಯಾತಿಗಳಿಸಿದ್ದಾರೆ , ಅವರು ಕೆಂಪೇಗೌಡ ಚಿತ್ರದಲ್ಲಿ ನಟನೆ ಮಾಡಿದ ರೀತಿಗೆ ಸೋಲದವರಿಲ್ಲ ಇದೀಗ ರವಿ ಶಂಕರ್ ಪುತ್ರ ಅದ್ವೆಯ್ ಪುದಿಪೆಡ್ಡಿ ಕೂಡಾ ಕನ್ನಡ ಚಿತ್ರರಂಗದಲ್ಲಿ ಲಾಂಚ್ ಆಗಲು ಕಾಯುತ್ತಿದ್ದಾರೆ.

 

 

ಈ ಹಿಂದೆ ವಾಯ್ಸ್ ಡಬ್ಬಿಂಗ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದ ರವಿಶಂಕರ್ ಕನ್ನಡ ಚಿತ್ರದಲ್ಲಿ ತಮ್ಮ ಅಭಿನಯದ ಅವರ ಮೂಲಕ ಹೆಸರುವಾಸಿ ಹೊಂದಿದವರು ಆದರಿಂದ ಅವರಿಗೆ ತೆಲುಗು ಚಿತ್ರರಂಗಕ್ಕಿಂತ ಕನ್ನಡ ಚಿತ್ರರಂಗದ ಮೇಲಿನ ಒಲವು ಬಹಳ ಹೆಚ್ಚಾಗಿದೆ .

ಇದೀಗಾ ನ್ಯೂಯಾರ್ಕ್ ನ ‘ಲೀ ಸ್ಟ್ರಾಸ್ಬರ್ಗ್ ಥಿಯೇಟರ್ ಅಂಡ್ ಫಿಲ್ಮ್ ಇನ್ಸ್ಟ್ ಟ್ಯೂಟ್’ ನಲ್ಲಿ ಒಂದು ವರ್ಷದ ಅಭಿನಯ ತರಬೇತಿಯ ಕೋರ್ಸ್ ಮುಗಿಸಿಕೊಂಡು ಬಂದಿದ್ದಾರೆ ರವಿಶಂಕರ್ ಪುತ್ರ.

 

 

ಖಳನಟ ರವಿಶಂಕರ್ ತಮ್ಮ ಅಭಿನಯದ ಜೊತೆ ಜೊತೆಗೆ ತಮ್ಮ ಮಗನ ಸಿನಿಮಾಗಾಗಿ ಕಥೆಯೊಂದನ್ನು ಅಣಿಗೊಳಿಸುತ್ತಿದ್ದಾರೆ ಆದಷ್ಟು ಬೇಗ ಮಗನ ಸಿನಿಮಾವನ್ನು ಸೆಟ್ ಏರಿಸಲು ರವಿಶಂಕರ್ ತುದಿಗಾಲಲ್ಲಿ ನಿಂತಿದ್ದಾರೆ.

ಸಾಯಿ ಕುಮಾರ್ ಹಾಗು ರವಿ ಶಂಕರ್ ರಂತೆ ಅದ್ವೆಯ್ ಕೂಡ ಕನ್ನಡ ಚಿತ್ರರಂಗದಲ್ಲಿ ತಮ್ಮ ಛಾಪನ್ನು ಮೂಡಿಸುತ್ತಾರಾ ಕಾದು ನೋಡೋಣ ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top