ಸಮಾಚಾರ

“ಹೆಲ್ಮೆಟ್ ಇಲ್ದೆ ನಿಜವಾದ ಗಂಡ್ಸಾಗಿ ಸಾಯ್ತಿನಿ” ಅಂದವನಿಗೆ ಸಖತ್ತಾಗಿ ಬುದ್ದಿ ಕಲಿಸಿದ ಪೊಲೀಸರು

ತೆಲಂಗಾಣ ರಾಜ್ಯದ ಹೈದರಾಬಾದ್ ನಲ್ಲಿ ಯುವಕನೊಬ್ಬ ಬೈಕ್ ಹಿಂಭಾದಲ್ಲಿ ‘ಹೆಲ್ಮೆಟ್ ಇಲ್ಲ, ನಾನು ಗಂಡಸಾಗಿ ಸಾಯುತ್ತೇನೆ’ ಎಂದು ಬರೆಸಿದ್ದ ಹಾಗು ಹೆಲ್ಮೆಟ್ ಇಲ್ಲದೆ ಬೈಕ್ ರೈಡ್ ಮಾಡುತ್ತಿದ್ದ ಈ ಚಿತ್ರವನ್ನು ಯಾರೋ ಕ್ಲಿಕ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು ಇದು ಪೋಲೀಸರ ಕೈ ಸೇರಿದಾಗ. ಹೈದರಾಬಾದ್ ಟ್ರಾಫಿಕ್ ಪೊಲೀಸರು ಈ ಚಿತ್ರವನ್ನು ಟ್ವಿಟ್ ಮಾಡಿ ಸಂದೇಶ ನೀಡಿದ್ದಾರೆ ಎಂದು ತಿಳಿದು ಬಂದಿದೆ.

 

‘ಹೆಲ್ಮೆಟ್ ಇಲ್ಲ, ನಾನು ಗಂಡಸಾಗಿ ಸಾಯುತ್ತೇನೆ’ ಎನ್ನುವ ಬರಹ ಇರುವ ಬೈಕ್ ಚಿತ್ರವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ ಅದರ ಜೊತೆಗೆ ನಿಯಮ ಉಲ್ಲಂಘನೆ ಮಾಡಿದಕ್ಕೆ ರಶೀದಿ( ಈ-ಚಾನೆಲ್ ) ಕೂಡ ಲಗತ್ತಿಸಿದೆ ಎಂದು ತಿಳಿದು ಬಂದಿದೆ. ಇದರ ಜೊತೆ ಸ್ವಾರಸ್ಯಕರ ಸ್ಟೇಟಸ್ ಒಂದನ್ನು ಬರೆದಿದ್ದು “ನಮ್ಮನ್ನು ದಯಮಾಡಿ ಕ್ಷಮಿಸಿ ಮಿ. ಕೃಷ್ಣಮೂರ್ತಿ ರೆಡ್ಡಿ ಸರ್. ನಾವು ನಿಮ್ಮನ್ನು ಸಾಯಲು ಬಿಡುವುದಿಲ್ಲ. ನೀವು ನಿಜವಾದ ಗಂಡಸಿನ ರೀತಿ ಬದುಕುವುದನ್ನು ನಾವು ನೋಡಬೇಕು. ದಯವಿಟ್ಟು ಹೆಲ್ಮೆಟ್ ಹಾಕಿ, ವಾಹನ ಚಲಾಯಿಸಿ” ಎಂದು ಟ್ವೀಟ್ ಮಾಡಿದ್ದಾರೆ ಈ ಟ್ವಿಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಇದಕ್ಕೆ ಪ್ರತಿಯಾಗಿ ವ್ಯಕ್ತಿ ಯೊಬ್ಬರು ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಹೆಲ್ಮೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ವಿಡಿಯೋ ಹಾಕಿ ಇವರಿಗೆ ಚಾನಲ್ ಹಾಕಿ ಎಂದು ಚಾಲೆಂಜ್ ಮಾಡಿದ್ದ. ಆಗ ಹೈದರಾಬಾದ್ ಟ್ರಾಫಿಕ್ ಪೊಲೀಸರು ಈ ಟ್ವಿಟ್ ಜೊತೆ ಟ್ರಾಫಿಕ್ ಪೊಲೀಸರು ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ನ ಚಿತ್ರ ಹಾಕಿ ” ನಾವು ನಮ್ಮ ಸಿಬ್ಬಂದಿ ಮೇಲೆ ಕಣ್ಣು ಹೊಡೆಯುವುದಿಲ್ಲ. ನಾವು ಅವರನ್ನು ಕೂಡ ಇ-ಚಲನ್ ನಿಂದ ಶೂಟ್ ಮಾಡ್ತೀವಿ” ಎಂದು ಟ್ವಿಟ್ ಮಾಡಿದ್ದಾರೆ ಎನ್ನಲಾಗಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top