ಅರೋಗ್ಯ

ಸರ್ಪ ಸುತ್ತಿಗೆ ಮನೆಮದ್ದು

 

ಆಯುರ್ವೇದದಲ್ಲಿ ಅತ್ಯುತ್ತಮ ಚಿಕಿತ್ಸೆ ಇದೆ. ಹಳೆ ಅಕ್ಕಿ ಗಂಜಿ, ಬೇಯಿಸಿದ ನೀರು, ಕೊತ್ತಂಬರಿ ಹಿಮ, ಎಳನೀರು ಸೇವಿಸಬೇಕು. ಇದರ ಜತೆಗೆ ಕೆಲವು ಔಷಧೋಪಚಾರ ಕೂಡ ಅಗತ್ಯ.

ಒಣಗಿದ ನೆಲ್ಲಿ ತುಂಡುಗಳು, ಲಾವಂಚದ ಬೇರು, ಸೊಗದ ಬೇರು ಪ್ರತಿಯೊಂದನ್ನು ಒಂದೊಂದು ಚಮಚದಷ್ಟು ತೆಗೆದು ಕೊಂಡು ಬೇರೆ ಬೇರೆಯಾಗಿ ಕುಟ್ಟಿ ಪುಡಿಮಾಡಿ ಎರಡು ಲೋಟ ನೀರಿನಲ್ಲಿ ಸೇರಿಸಿ ಕುದುಸಿ, ಇದನ್ನು 1 ಅಥವಾ 4 ಲೋಟದಷ್ಟಾದಾಗ ದಿನಕ್ಕೆ ಎರಡುಬಾರಿ ಮೂರು ಚಮಚದಷ್ಟು ಸೇವಿಸಬೇಕು.ಇದನ್ನು ಮೂರು ವಾರಗಳ ಕಾಲ ಮಾಡಿದರೆ ಸರ್ಪಸುತ್ತು ಕಡಿಮಡಯಾಗುತ್ತದೆ.

* ಸರ್ಪ ಸುತ್ತು ಸಮಸ್ಯೆ ಇದ್ದಾಗ ನೆಲ್ಲಿಕಾಯಿ ಚೂರ್ಣ, ಲಾವಂಚ ಬೇರಿನ ಚೂರ್ಣ, ಸೊಗದ ಬೇರಿನ ಚೂರ್ಣ, ಇವನ್ನು ತಲಾ ಒಂಧು ಚಮಚದಷ್ಟು ತೆಗೆದುಕೊಂಡು 8 ಲೋಟ ನೀರಿಹಾಕಿ ನಿಧಾನವಾಗಿ ಕುದಿಸಿ ಅದು ಒಂದು ಲೋಟದಷ್ಟು ಆದಾಗ ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಸೇವಿಸಬೇಕು.

*ಸರ್ಪಸುತ್ತು ಸಮಸ್ಯೆ ಇದ್ದಾಗ ಗೋಟಡಿಕೆಯನ್ನು ಅಕ್ಕಿ ತೊಳೆದ ನೀರಿನಲ್ಲಿ ಅರೆದು ದಿನದಲ್ಲಿ ನಾಲ್ಕು ಅಥವಾ ಐದುಬಾರಿ ಮೈಗೆಲ್ಲ ಲೇಪಿಸಬೇಕು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top