ಸಿನಿಮಾ

ಸುಮಲತಾಗೆ ಸರ್ಪ್ರೈಸ್ ಕೊಟ್ರು ಅಂಬರೀಷ್

ನಟ ಅಂಬರೀಶ್​ ರಾಜಕೀಯ, ಸಿನಿಮಾ ಅಂತಾ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದರು. ಆದರೆ ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡುತ್ತಿಲ್ಲ. ಅಂಬಿ ನಿಂಗೆ ವಯಸಾಯ್ತೋ ಚಿತ್ರದಲ್ಲಿ ಅಭಿನಯ ಮಾಡುತ್ತಿರುವ ನಟ ಮೊನ್ನೆ ಸುಮಲತಾ ಅವರಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ಇವರು ಏನು ಸರ್ಪ್ರೈಸ್ ಕೊಟ್ರು ಎಂದು ಯೋಚನೆ ಮಾಡುತ್ತಿದ್ದಿರಾ ಹಾಗಾದ್ರೆ ಮುಂದೆ ಓದಿ.

 

 

ಅಂಬರೀಶ್ ಪತ್ನಿ ನಟಿ ಸುಮಲತಾ ಅವರು ’ ತಾಯಿಗೆ ತಕ್ಕ ಮಗ’ ಚಿತ್ರದ ಚಿತ್ರೀಕರಣ ದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಅಂಬರೀಷ್ ಅಲ್ಲಿಗೆ ಭೇಟಿ ನೀಡಿ ಪತ್ನಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಅಂಬರೀಷ್ ಆಗಮನದಿಂದ ಚಿತ್ರತಂಡ ಕೂಡ ತುಂಬಾ ಸಂತೋಷವಾಗಿತ್ತು. ಈ ಸಂಧರ್ಭದಲ್ಲಿ ಅಂಬರೀಷ್ ಚಿತ್ರತಂಡದವರ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಡಿದ್ದಾರೆ.

 

 

ಚಿತ್ರದ ನಟ ಅಜಯ್ ರಾವ್ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದೂ ” ಧಿಡೀರ್ ಅಂತ ನಮ್ಮ “ತಾಯಿಗೆ ತಕ್ಕ ಮಗ” ಶೂಟಿಂಗ್ ಸೆಟ್ಗೆ ಭೇಟಿ ನೀಡಿದ ರೆಬೆಲ್ ಸ್ಟಾರ್ !!! ತಂದೆ ತಾಯಿ ತರಹ ಇರುವ ಸುಮಾ ಅಮ್ಮ ಹಾಗೂ ಅಂಬರೀಶ್ ಅಣ್ಣನ ಪ್ರೀತಿ ಪಡೆದ ನಾನು ಧನ್ಯ ” ಎಂದು ಬರೆದಿದ್ದಾರೆ.

 

’ತಾಯಿಗೆ ತಕ್ಕ ಮಗ ಚಿತ್ರಕ್ಕೆ ಶೇಖರ್ ಚಂದ್ರ ಛಾಯಗ್ರಹಣ, ಡಾ. ಕೆ. ರವಿವರ್ಮ ಸಾಹಸ ಸಂಯೋಜನೆ, ಜೂಡಾ ಸ್ಯಾಂಡಿ ಸಂಗೀತ ಹಾಗು ಗಿರಿ ಮಹೇಶ್ ಅವರ ಸಂಕಲನವಿರುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top