ಮನೋರಂಜನೆ

ಅಮೇರಿಕಾದಲ್ಲಿ ಅಧ್ಯಕ್ಷನಾಗಲು ಹೊರಟ ಕಾಮಿಡಿ ಸ್ಟಾರ್ ಶರಣ್!

ಅಧ್ಯಕ್ಷ ಸಿನಿಮಾ ಮೂಲಕ ಕಮಾಲ್ ಮಾಡಿದವರು ನಟ ಶರಣ್., ಆ ಚಿತ್ರದ ನಂತರ ಭಿನ್ನ ವಿಭಿನ್ನ ರೀತಿಯ ಚಿತ್ರಗಳಲ್ಲಿ ನಟಿಸುವ ಮೂಲಕ ಚಿತ್ರರಸಿಕರನ್ನು ರಂಜಿಸಿಕೊಂಡು ಬರುತ್ತಿರುವ ಶರಣ್ ಇದೀಗ ಅಮೇರಿಕಾದ ಅಧ್ಯಕ್ಷನಾಗಲು ಹೊರಟಿದ್ದಾರೆ. ಅರ್ಥಾತ್ ಅವರ ಮುಂದಿನ ಸಿನಿಮಾದ ಹೆಸರು “ಅಧ್ಯಕ್ಷ ಇನ್ ಅಮೇರಿಕಾ” ಎಂದು ಫಿಕ್ಸ್ ಆಗಿದೆ.

 

 

ಸದ್ಯ ತಮ್ಮ ರ್ಯಾಂಬೋ-2 ಚಿತ್ರದ ಬಿಡುಗಡೆ ಕಾರ್ಯಗಳಲ್ಲಿ ಬ್ಯುಸಿಯಾಗಿರುವ ಶರಣ್ ಆ ಚಿತ್ರದ ನಂತರ ಅಧ್ಯಕ್ಷ ಇನ್ ಅಮೇರಿಕಾ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಇದೇ ಮೇ 15ರಿಂದ ಶೂಟಿಂಗ್ ಶುರುವಾಗುತ್ತಿದ್ದು ಚಿತ್ರದ ಬಹುತೇಕ ಭಾಗ ಅಮೇರಿಕಾದಲ್ಲಿ ನಡೆಯಲಿದೆ. ಸುಮಾರು 35 ದಿನಗಳ ಕಾಲ ಅಮೇರಿಕಾದಲ್ಲಿ ಶೂಟಿಂಗ್ ನಡೆಸುವ ಯೋಜನೆಯಲ್ಲಿ ಚಿತ್ರತಂಡವಿದೆ.

ಅಂದಹಾಗೆ ಈ ಚಿತ್ರ ಮೂಲತಃ ಮಲೆಯಾಳಂನ “ಟೂ ಕಂಟ್ರೀಸ್” ಚಿತ್ರದ ರಿಮೇಕ್ ಆಗಿದ್ದು ಚಿತ್ರದಲ್ಲೇ ಶರಣ್’ಗೆ ನಾಯಕಿಯಾಗಿ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಕಾಣಿಸಿಕೊಳ್ಳಲೊದ್ದಾರೆ.. ಈ ಹಿಂದೆ ಶರಣ್ ಅಭಿನಯದ ವಿಕ್ಟರಿ ಚಿತ್ರದ ಹಾಡೊಂದರಲ್ಲಿ ರಾಗಿಣಿ ಹೆಜ್ಜೆಯಾಗಿದ್ದರು ಆದರೆ ಇದೇ ಮೊದಲ ಭಾರಿ ಶರಣ್ ಜೊತೆ ನಾಯಕಿಯಾಗಿ ನಟಿಸಲಿದ್ದಾರೆ. ಮಲೆಯಾಳಂನಲ್ಲಿ ದಿಲೀಪ್ ಮತ್ತು ಮೋಹನದಾಸ್ ನಿರ್ವಹಿಸಿದ್ದ ಪಾತ್ರಗಳಲ್ಲಿ ಕ್ರಮವಾಗಿ ಶರಣ್ ಮತ್ತು ರಾಗಿಣಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಪೀಪಲ್ ಮೀಡಿಯಾ ಟೆಕ್ ಬಂಡವಾಳವನ್ನು ಹೂಡಲಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top