ದೇವರು

ಅಂದುಕೊಂಡ ಕೆಲಸಗಳು ಆಗ್ತಿಲ್ಲ ಅಂತಿದ್ರೆ ಬೆಳಗ್ಗೆ ಶ್ರೀ ರಾಮನ 5 ಶಕ್ತಿ ಶಾಲಿಯಾದ ಮಂತ್ರಗಳನ್ನ 108 ಬಾರಿ ಜಪ ಮಾಡಿ

ಶ್ರೀ ರಾಮನ 5 ಶಕ್ತಿ ಶಾಲಿಯಾದ ಪ್ರಾರ್ಥನಾ ಮಂತ್ರಗಳು.

 

ಹಿಂದೂ ಧರ್ಮದಲ್ಲಿ ಅತಿ ಹೆಚ್ಚು ಪೂಜಿಸಲ್ಪಡುವ ದೇವರು ಶ್ರೀರಾಮ. ‘ಮರ್ಯಾದಾ ಪುರುಷೋತ್ತಮ” ಎಂದು ಹೇಳಲ್ಪಡುವ ಶ್ರೀರಾಮನು ಪ್ರತಿಯೊಬ್ಬ ಹಿಂದೂವಿನ ಮನೆ ಮನದಲ್ಲಿ ಆದರ್ಶ ವ್ಯಕ್ತಿಯಾಗಿ ಪೂಜ್ಯ ಸ್ಥಾನ ಪಡೆದಿದ್ದಾನೆ .

 

 

ಅಯೋಧ್ಯೆಯ ರಾಜನಾಗಿ  ಸಕಲ ಕಾಲಕ್ಕೂ ಆದರ್ಶ ರಾಜ ಎನಿಸಿಕೊಂಡಿದ್ದಾನೆ. ಈತನ ಆಳ್ವಿಕೆಯ ಕಾಲವನ್ನು “ಸುವರ್ಣ ಯುಗ” ಎಂದೇ ಕರೆಯಲಾಗಿದೆ. ಭಾರತದಲ್ಲಿ ಉತ್ತಮ ಆಡಳಿತಕ್ಕೆ ರಾಮರಾಜ್ಯ ಎಂದೇ ಕರೆಯುತ್ತಾರೆ .

ಮುಖ್ಯವಾಗಿ ಶ್ರೀರಾಮನು ಮಹಾವಿಷ್ಣುವಿನ ಏಳನೇ ಅವತಾರವಾಗಿ ಜನ್ಮವನ್ನು ಪಡೆದು ಅಸುರ ರಾಜನಾದ ರಾವಣನನ್ನು ಸಂಹರಿಸಿ, ಭೂಮಿಯಲ್ಲಿ ಪುನಃ ಧರ್ಮವನ್ನು ಸ್ಥಾಪಿಸಿದ. ಆದ್ದರಿಂದಲೇ ಇವತ್ತಿಗೂ ಸಹ ಆದರ್ಶ ವ್ಯಕ್ತಿ ಹಾಗೂ ರಾಜನಾಗಿ ಗುರುತಿಸಲ್ಪಡುವನು .

ಶ್ರೀರಾಮನ ಭಕ್ತರು ಆತನ ಕೃಪೆಗಾಗಿ ದೇವಸ್ಥಾನಗಳಿಗೆ ತೆರಳಿ ಅವನ ನಾಮ ಮತ್ತು ಮಂತ್ರಗಳನ್ನು ಜಪಿಸಿ ಪ್ರಾರ್ಥಿಸುತ್ತಾರೆ.

 

 

ಶ್ರೀರಾಮನ 5 ಶಕ್ತಿಶಾಲಿ ಪ್ರಾರ್ಥನಾ ಮಂತ್ರಗಳು ಹೀಗಿವೆ ..

1.ರಾಮ ಮೂಲ ಮಂತ್ರ .

“ಓಂ ಶ್ರೀ ರಾಮಾಯ ನಮಃ”

2.ರಾಮ ತಾರಕ ಮಂತ್ರ.

 “ಶ್ರೀರಾಮ ಜಯ ರಾಮ ಜಯ ಜಯ ರಾಮ”

3.ರಾಮ ಗಾಯತ್ರಿ ಮಂತ್ರ.

“ಓಂ ದಶರಥಾಯ  ವಿದ್ಮಹೇ,

 ಸೀತಾ ವಲ್ಲಭಾಯಿ ಧೀಮಹೀ,

ತನ್ನೋ ರಾಮ  ಪ್ರಚೋದಯಾತ್”

 

4.ರಾಮ ಧ್ಯಾನ ಮಂತ್ರ.

 “ಓಂ ಅಪದಮಾಪಹಾರ್ತರಂ

 ಧಾತರಂ  ಸರ್ವ ಸಂಪದಂ ಲೋಕಾಭಿರಾಮಂ

 ಶ್ರೀ ರಾಮಂ  ಭ್ಯೋ ಭ್ಯೋ ನಮಾಮ್ಯಹಂ”

5.ಕೋದಂಡ ರಾಮ ಮಂತ್ರ.

 “ಶ್ರೀ ರಾಮ ಜಯರಾಮ ಕೋದಂಡ ರಾಮ”

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top