ಸಿನಿಮಾ

ಮಾತಾಡಿ ಮಾತಡಿ ಕೊನೆಗೆ ಡೈರೆಕ್ಟ್ ಕೂಡ ಮಾಡ್ತೀನಿ ಅಂದ್ರು ನಿರೂಪಕಿ ಶೀತಲ್ ಶೆಟ್ಟಿ

ಇಂದು ಕರ್ನಾಟದದ ಮನೆ ಮಾತಾಗಿರುವ ಹೆಸರು. ನೇರ ನುಡಿ, ದಿಟ್ಟ ನಿರ್ಧಾರ, ಸದಾ ಹಸನ್ಮುಖಿ, ಉತ್ಸಾಹಿ ಮತ್ತು ಜೀವನ್ಮುಖಿಯಾಗಿರುವ ಶೀತಲ್ ಶೆಟ್ಟಿ ಸಣ್ಣ ಪಟ್ಟಣಗಳಲ್ಲಿನ ಹುಡುಗಿ ಎಂದ ಮಾತ್ರಕ್ಕೆ ಜೀವನ ಸೀಮಿತವಾಗುವುದಿಲ್ಲ, ಸಾಧನೆಯ ಹಾದಿಯಲ್ಲಿ ಪರಿ ಶ್ರಮವಿದ್ದರೆ ಅದು ನಿಮ್ಮನ್ನು ಉತ್ತುಂಗದಲ್ಲಿ ನಿಲ್ಲಿಸುತ್ತದೆ ಎನ್ನುವುದಕ್ಕೆ ನಿದರ್ಶನ ಶೀತಲ್ ಶೆಟ್ಟಿ ಅವರು. ಮೊದಲು ಸುದ್ದಿ ಮಾಧ್ಯಮದಲ್ಲಿ ನ್ಯೂಸ್ ರೀಡರ್ ಆಗಿದ್ದ ಶೀತಲ್ ನಂತರ ಕನ್ನಡದ ಖ್ಯಾತ ರಿಯಾಲಿಟಿ ಷೋ ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟರು. ಬಿಗ್ ಬಾಸ್ ಮುಗಿದ ಬಳಿಕ ಖಾಸಗಿ ಆವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಜಾಭಾರತ್ ಕಾರ್ಯಕ್ರದಲ್ಲಿ ನಿರೂಪಕಿ ಅಗಿಯು ಕೂಡ ಇವರು ಕೆಲಸ ನಿರ್ವಹಿಸಿದ್ದಾರೆ.

 

 

’ಉಳಿದವರು ಕಂಡಂತೆ’, ‘ ಕೆಂಡ ಸಂಪಿಗೆ’, ‘ಪತಿ ಬೇಕು ಡಾಟ್​ ಕಾಮ್’ ಇನ್ನು ಅನೇಕ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ ಈಗ ಶೀತಲ್ ಶೆಟ್ಟಿ ಒಂದು ಹೆಜ್ಜೆ ಮುಂದೆ ಹೋಗಿ ಶಾರ್ಟ್​ ಮೂವಿ ಒಂದಕ್ಕೆ ನಿರ್ದೇಶನ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

 

 

ಶೀತಲ್ ಶೆಟ್ಟಿ ತಮ್ಮದೇ ಆದ ‘ಮೀಡಿಯಾ ಮನೆ’ ಎಂಬ ಸಂಸ್ಥೆ ಸ್ಥಾಪಿಸಿದ್ದು ಇದರ ಮೂಲಕವೇ ಕಿರು ಚಿತ್ರವ್ವನ್ನು ನಿರ್ದೇಶನ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ನ್ಯೂಸ್ ರೀಡರ್, ನಟಿ ಹಾಗು ನಿರೂಪಕಿಯಾಗಿ ಕಾಣಿಸಿಕೊಂಡಿದ್ದ ಶೀತಲ್ ಶೆಟ್ಟಿ ಈಗ ನಿರ್ದೇಶಕಿಯಾಗಿ ಹೊರಹೊಮ್ಮಲಿದ್ದಾರೆ. ಇವರಿಗೆ ಯಶಸ್ಸು ಸಿಗಲಿ ಎಂದು ಆಶಿಸೋಣ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top