ಹೆಚ್ಚಿನ

ನೀವು ಹುಟ್ಟಿದ ದಿನದ ಆಧಾರದ ಮೇಲೆ ಈ ವಸ್ತುವನ್ನು ನಿಮ್ಮ ಬಳಿ ಇಟ್ಕೊಳ್ಳಿ ಅದು ನಿಮ್ಮ ಹಣೆಬರಹವನ್ನೇ ಬದಲಾಯಿಸಿ ಬಿಡುತ್ತೆ ಅನುತ್ತೆ ಸಂಖ್ಯಾಶಾಸ್ತ್ರ.

ಸಂಖ್ಯಾಶಾಸ್ತ್ರದ ಪ್ರಕಾರ ನಿಮಗೆ ಅದೃಷ್ಟ ತರುವ ವಸ್ತುಗಳು.

 

ನಿಮ್ಮ ಅದೃಷ್ಟವನ್ನು ಅಕರ್ಷಿಸಿ ನಿಮ್ಮ ಹತ್ತಿರ ಬರುವಂತೆ ಸಹಾಯ ಮಾಡಲು ಈ ಒಂಬತ್ತು ವಸ್ತುಗಳಲ್ಲಿ ಒಂದು ಇಡೀ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ.ಇದನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಂಡರೆ ಸಾಕು.  ಈ ಕೆಳಗಿರುವ ವಸ್ತುಗಳಲ್ಲಿ  ನೀವು   ಹುಟ್ಟಿದ  ದಿನಕ್ಕೆ ಆನುಗುಣವಾಗಿ  ಯಾವುದು ನಿಮಗೆ ಹೊಂದಾಣಿಕೆಯಾಗುತ್ತದೆ ಎಂದು ನೋಡಿ.

ಮೊದಲು ನಿಮ್ಮ ಹುಟ್ಟಿದ ದಿನಾಂಕ ಯಾವುದು ಎಂದು ಸರಿಯಾಗಿ ತಿಳಿದುಕೊಳ್ಳಿ  ಇಲ್ಲವಾದರೆ ನೀವು ಕೆಟ್ಟದನ್ನು ಅನುಭವಿಸುವ ಸಂಭವ ಇರುತ್ತದೆ.ಆದರೆ ಅಷ್ಟೇ ಅಲ್ಲ ಸಂಖ್ಯಾಶಾಸ್ತ್ರ ಮತ್ತು ಜ್ಯೋತಿಶ್ಶಾಸ್ತ್ರಾ ಎರಡೂ ಸೇರಿ  ನಮಗೆ ನಮ್ಮ ವ್ಯಕ್ತಿತ್ವ  ಹಾಗೂ  ಭವಿಷ್ಯವನ್ನು ಸರಿಯಾಗಿ ಅರ್ಥ ಮಾಡಿಸಬಹುದು.

ನಿಮ್ಮ ಜೀವನದಲ್ಲಿ  ಅದೃಷ್ಟವನ್ನು ಅಕರ್ಷಿಸಿ ಹೆಚ್ಚಿಸಲು ಸರಳವಾದ ಮತ್ತು ಪರಿಣಾಮಕಾರಿಯಾದ ವಿಧಾನಗಳು ಇಲ್ಲಿವೆ.ಈಗ ನೀವೇ ನಿಮ್ಮ ಅದೃಷ್ಟವನ್ನು ಲೆಕ್ಕ ಹಾಕಬಹುದು.ಈ ಪ್ರಕಾರವಾಗಿ ಒಳ್ಳೆಯ ಅದೃಷ್ಟ, ಒಳ್ಳೆಯ ನಿರ್ಧಾರವನ್ನು ತೆಗೆದುಕೊಳ್ಳುವುದು  ಮತ್ತು ನಿಮ್ಮ ವೃತ್ತಿ ಜೀವನ,ಬಾಳ ಸಂಗಾತಿಯ ಅಯ್ಕೆಯನ್ನು ಮಾಡಿಕೊಳ್ಳಲು ಇಲ್ಲಿ ಕೊಟ್ಟಿರುವ ಸಲಹೆಗಳನ್ನು ಪಾಲಿಸಿ ನೋಡಿ ಇವು ನಿಮ್ಮ ಸಹಾಯಕ್ಕೆ ಬಂದರೂ ಬರಬಹುದು.ಹೇಳೋಕ್ಕಾಗಲ್ಲ ನೀವು ಒಂದು ಬಾರಿ ಪ್ರಯತ್ನಿಸಿ ನೋಡಿ …

 

 

 

 

 

 

 

 

 

 

 

 

 

 

 

 

ಅದಕ್ಕೆ ಮೊದಲು  ನಿಮ್ಮ ಹುಟ್ಟಿದ ಸಂಖ್ಯೆಯನ್ನು ಲೆಕ್ಕ ಹಾಕಬೇಕು. ಹೇಗೆ ಎಂದರೆ ಇದು ಕೂಡ ಸಂಖ್ಯಾಶಾಸ್ತ್ರದ ಒಂದು ಭಾಗವೇ ಆಗಿದೆ ಇಲ್ಲಿ ಸರಳವಾಗಿ ತಿಳಿಸಲಾಗಿದೆ.

ನೀವು ಯಾವುದೇ ತಿಂಗಳಿನ 1ನೇ ತಾರೀಖಿನಲ್ಲಿ  ಹುಟ್ಟಿದವರಾಗಿದ್ದರೆ ನಿಮ್ಮ ಹುಟ್ಟಿನ ಸಂಖ್ಯೆ 1.

ಅದೇ ತರಹ ನೀವು ಯಾವುದೇ ತಿಂಗಳು 29ನೇ ತಾರೀಖಿನಲ್ಲಿ ಜನನವಾಗಿದ್ದರೆ ನಿಮ್ಮ ಹುಟ್ಟಿನ ಸಂಖ್ಯೆ 2.

ಅದು ಹೇಗೆಂದರೆ 29 ಈ ಸಂಖ್ಯೆಯನ್ನು ಕೂಡಬೇಕು.

[2+9=11, 1+1=2 ] ಹೀಗೆ ಕೂಡಿದರೆ ನಿಮಗೆ ನಿಮ್ಮ ಹುಟ್ಟಿದ ಸಂಖ್ಯೆ ಸಿಗುತ್ತದೆ.

ಸಂಖ್ಯಾಶಾಸ್ತ್ರದಲ್ಲಿ ಹೇಳುವ ಪ್ರಕಾರ ಸಂಖ್ಯೆಗಳೇ ನಮ್ಮ ಜೀವನವನ್ನು ಆಳುತ್ತವೆ ಮತ್ತು ನಾವು ಹುಟ್ಟಿದ ದಿನಾಂಕಕ್ಕೆ ಅನುಗುಣವಾಗಿ ನಮ್ಮ ವ್ಯಕ್ತಿತ್ವ , ಅದೃಷ್ಟ  ಎಲ್ಲವನ್ನು ತಿಳಿದುಕೊಳ್ಳಬಹುದು.ಹುಟ್ಟಿದ ದಿನಕ್ಕನುಸಾರವಾಗಿ ಈ ಕೆಳಗೆ ನೀಡಿರುವ  ವಸ್ತುಗಳನ್ನು ನಿಮ್ಮ ಮನೆಯಲ್ಲಿ, ಕಚೇರಿಯಲ್ಲಿ ಇಟ್ಟುಕೊಂಡರೆ  ಅದೃಷ್ಟವನ್ನು ತಂದುಕೊಡುತ್ತವೆ ಎಂದು ಹೇಳಲಾಗಿದೆ.ಆ ವಸ್ತುಗಳು ಹೀಗಿವೆ..

ಹುಟ್ಟಿದ ಸಂಖ್ಯೆ -1.

ನೀವು ಯಾವುದೇ ತಿಂಗಳಿನ 1,10,19 ಮತ್ತು 28ನೇ ತಾರೀಖಿನಲ್ಲಿ ಹುಟ್ಟಿದವರಾಗಿದ್ದರೆ ನಿಮ್ಮ ಸಂಖ್ಯೆ 1 ಆಗಿರುತ್ತದೆ.

ಅದೃಷ್ಟದ ವಸ್ತು:ಕೊಳಲು.ನೀವು ನಿಮ್ಮ ಮನೆಯಲ್ಲಿ ಕೊಳಲನ್ನು ಇಟ್ಟುಕೊಳ್ಳಿ.

 

ಹುಟ್ಟಿದ ಸಂಖ್ಯೆ- 2.

ನೀವು ಯಾವುದೇ ತಿಂಗಳಿನ 2,11,20 ಮತ್ತು 29 ನೇ ತಾರೀಖಿನಲ್ಲಿ ಹುಟ್ಟಿದ್ದರೆ ಆಗ ನಿಮ್ಮ ಸಂಖ್ಯೆ 2 ಆಗಿರುತ್ತದೆ.

ಅದೃಷ್ಟದ ವಸ್ತು:-ನಿಮ್ಮ ಮನೆಯಲ್ಲಿ ಅಥವಾ ಕಚೇರಿಯಲ್ಲಿ ಬಿಳಿಯ ಬಣ್ಣ ಹೊಂದಿರುವ  ಪ್ರದರ್ಶನಕ್ಕೆ ಇಡುವ ಯಾವುದಾದರೂ ಒಂದು ವಸ್ತುವನ್ನು ತಂದು  ಉತ್ತರ-ದಕ್ಷಿಣ  ದಿಕ್ಕಿನಲ್ಲಿಡಿ.

 

 

 

 

 

 

 

 

 

 

 

 

 

 

 

 

 

 

ಹುಟ್ಟಿದ ಸಂಖ್ಯೆ-3

ನೀವು ಯಾವುದೇ ತಿಂಗಳಿನಲ್ಲಿ 3,12,21 ಮತ್ತು 30 ನೇ ತಾರೀಖಿನಲ್ಲಿ ಹುಟ್ಟಿದ್ದರೆ ನಿಮ್ಮ ಸಂಖ್ಯೆ 3 ಆಗಿರುತ್ತದೆ.

ಅದೃಷ್ಟದ ವಸ್ತು:-ರುದ್ರಾಕ್ಷಿ ಬೀಜ (ರುದ್ರಾಕ್ಷಿ ಮಾಲೆಯಲ್ಲ)ಅಂದರೆ ಒಂದು ರುದ್ರಾಕ್ಷಿಯನ್ನು  ಉತ್ತರ-ಪೂರ್ವ ದಿಕ್ಕಿನಲ್ಲಿ  ಇಡಿ.

 

 

ಹುಟ್ಟಿದ ಸಂಖ್ಯೆ-4

ನೀವು ಯಾವುದೇ ತಿಂಗಳಿನ 4,13,22, ಮತ್ತು 31 ನೇ ತಾರೀಖಿನಲ್ಲಿ ಹುಟ್ಟಿದವರಾಗಿದ್ದರೆ ನಿಮ್ಮ ಸಂಖ್ಯೆ 4.

ಅದೃಷ್ಟದ ವಸ್ತು:-ಗಾಜಿನ ತುಂಡು ಅದು ಯಾವುದೇ ಕಾರಣಕ್ಕೂ ಹೊಡೆದಿರಬಾರದು.ಅಕಸ್ಮಾತ್ ಆಕಸ್ಮಿಕವಾಗಿ ಹೊಡೆದು ಹೋದರೆ ಕೂಡಲೇ ಬದಲಾಯಿಸಿ  ಗಾಜಿನ ತುಂಡನ್ನು ದಕ್ಷಿಣ-ಪಶ್ಚಿಮ ದಿಕ್ಕಿನಲ್ಲಿಡಬೇಕು.

 

 

 

 

 

 

 

 

 

 

ಹುಟ್ಟಿದ ಸಂಖ್ಯೆ -5.

ನೀವು ಯಾವುದೇ ತಿಂಗಳಿನ 5,14,ಮತ್ತು 23 ನೇ ತಾರೀಖಿನಲ್ಲಿ ಹುಟ್ಟಿದವರಾಗಿದ್ದರೆ ನಿಮ್ಮ ಸಂಖ್ಯೆ 5.

ಅದೃಷ್ಟದ ವಸ್ತು:-ಕುಬೇರ ಅಥವಾ ಕುಬೇರನ ಚಿತ್ರವಿರುವ ಪಠ ಅಥವಾ ಲಕ್ಷ್ಮೀ ಚಿತ್ರವಿರುವ ಫೋಟೋ  ಉತ್ತರ ದಿಕ್ಕಿನಲ್ಲಿಟ್ಟರೆ  ಸಮೃದ್ಧಿಯನ್ನು ವೃದ್ಧಿಸುತ್ತದೆ.

 

 

 

 

 

 

 

 

 

 

ಹುಟ್ಟಿದ ಸಂಖ್ಯೆ-6

ನೀವು ಯಾವುದೇ ತಿಂಗಳಿನ 6,15 ಮತ್ತು 24 ನೇ ತಾರೀಖಿನಲ್ಲಿ ಹುಟ್ಟಿದವರಾಗಿದ್ದರೆ ನಿಮ್ಮ ಸಂಖ್ಯೆ 6 ಆಗಿರುತ್ತದೆ.

ಅದೃಷ್ಟದ ವಸ್ತು:-ನವಿಲುಗರಿ. ನಿಮ್ಮ ಮನೆಯಲ್ಲಿ ನವಿಲುಗರಿಯನ್ನು ದಕ್ಷಿಣ-ಪೂರ್ವ ದಿಕ್ಕಿನಲ್ಲಿಟ್ಟರೆ  ಯಥೇಚ್ಛವಾಗಿ  ಸಮೃದ್ಧಿಯನ್ನು ಹೊಂದುತ್ತದೆ.

 

 

 

 

 

 

 

 

 

 

 

ಹುಟ್ಟಿದ ಸಂಖ್ಯೆ -7

ನೀವು ಯಾವುದೇ ತಿಂಗಳಿನ 7,16, ಮತ್ತು 25 ನೇ ತಾರೀಖಿನಲ್ಲಿ ಹುಟ್ಟಿದ್ದರೆ ನಿಮ್ಮ ಸಂಖ್ಯೆ 7 ಆಗಿರುತ್ತದೆ.

ಅದೃಷ್ಟದ ವಸ್ತು:-ಕಡು ಕಪ್ಪು ಅಥವಾ ಕಡು ಕೆಂಪು ಬಣ್ಣ ಹೊಂದಿರುವ ರುದ್ರಾಕ್ಷಿಯನ್ನು ನಿಮ್ಮ ಮನೆಯಲ್ಲಿ ದಕ್ಷಿಣ-ಪೂರ್ವ ದಿಕ್ಕಿನಲ್ಲಿ ಇಟ್ಟರೆ ಅದೃಷ್ಟ ತಂದುಕೊಡುತ್ತದೆ.

 

 

 

 

 

 

 

 

 

 

ಹುಟ್ಟಿದ ಸಂಖ್ಯೆ-8

ನೀವು ಯಾವುದೇ  ತಿಂಗಳಿನ 8,17, ಮತ್ತು 26 ನೇ ತಾರೀಖಿನಲ್ಲಿ ಹುಟ್ಟಿದವರಾಗಿದ್ದರೆ ನಿಮ್ಮ ಸಂಖ್ಯೆ 8 ಅಗಿರುತ್ತದೆ.

ಅದೃಷ್ಟದ ವಸ್ತು:-ಕಪ್ಪು ಸ್ಪಟಿಕವನ್ನು ದಕ್ಷಿಣ ದಿಕ್ಕಿನಲ್ಲಿಡಿ ಇದು ನಿಮ್ಮ ಜೀವನದಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತದೆ.

 

 

ಹುಟ್ಟಿದ ಸಂಖ್ಯೆ-9

ನೀವು ಯಾವುದೇ ತಿಂಗಳಿನ 9,18,27 ನೇ ತಾರೀಖಿನಲ್ಲಿ ಹುಟ್ಟಿದ್ದರೆ ನಿಮ್ಮ ಸಂಖ್ಯೆ 9.

ಅದೃಷ್ಟದ ವಸ್ತು:-ಪಿರಮಿಡ್ ಇವರ ಅದೃಷ್ಟದ ವಸ್ತುವಾಗಿದೆ.ಪಿರಮಿಡ್ ಅನ್ನು ದಕ್ಷಿಣ ದಿಕ್ಕಿನಲ್ಲಿ ಇಡಬೇಕು.

 

 

 

 

 

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top