ಸಿನಿಮಾ

ನಟಿ ಸಂಜನಾಳನ್ನು ಮಂಚಕ್ಕೆ ಕರೆದಿದ್ದನಂತೆ ಆ ನಿರ್ಮಾಪಕ ,ಯಾರವನು ಸತ್ಯ ಬಾಯ್ಬಿಟ್ಟ ನಟಿ

ಸಿನಿಮಾಗಳಲ್ಲಿ ನಟಿಸಲು ಅವಕಾಶ ಕೊಡುವ ಆಮಿಷವೊಡ್ಡಿ ಯುವನಟಿಯರನ್ನು ಮಂಚಕ್ಕೆ ಕರೆಯುವ ಕಾಯಿಲೆ ಎಲ್ಲ ಚಿತ್ರರಂಗಗಳಿಗೂ ಸಾಂಕ್ರಾಮಿಕವಾಗಿ ಹರಡಿಕೊಂಡಂತಿದೆ. ಇತ್ತೀಚೆಗೆ ದಕ್ಷಿಣ ಭಾರತ ಚಿತ್ರರಂಗದ ಎಲ್ಲಾ ಭಾಷೆಯ ಪ್ರಸಿದ್ಧ ಯುವ ನಟಿಯರನೇಕರು ತಾವು ಅನುಭವಿಸಿದ್ದ ಕಾಸ್ಟಿಂಗ್ ಕೌಚ್ ಮನೋ ವ್ಯಾಕುಲವನ್ನು ಸಾಂದರ್ಭಿಕವಾಗಿ ಬಿಚ್ಚಿಡುತ್ತಿದ್ದಾರೆ. ಸದ್ಯ ತೆಲುಗು ಚಿತ್ರರಂಗದಲ್ಲಿರುವ ಇಂಥಾ ಕಾಮ ಕಾಯಿಲೆಯ ವಿರುದ್ಧ ಏಕಾಂಗಿಯಾಗಿ ಪ್ರತಿಭಟನೆ ಆರಂಭಿಸಿರುವ ನಟಿ ಕಂ ಟಿವಿ ಆಂಕರ್ ಶ್ರೀ ರೆಡ್ಡಿ ಕಳೆದ ಕೆಲವು ದಿನಗಳಿಂದ ಸಂಚಲನವನ್ನೇ ಸೃಷ್ಟಿಸಿದ್ದಾಳೆ.

 

 

ಎಲ್ಲರು ಕಾಸ್ಟಿಂಗ್ ಕೌಚ್ ವಿರುದ್ಧ ಧ್ವನಿ ಎತ್ತಿದ್ದಾರೆ ಆದರೆ ಬಾಲಿವುಡ್ ನಟಿ ಸರೋಜ್ ಖಾನ್ ಪರವಾಗಿ ದನಿ ಎತ್ತಿದ್ದರು ಇದರಿಂದ ಅವರು ಅನೇಕರ ಆಕ್ರೋಶಕ್ಕೆ ಗುರಿಯಾಗಿದ್ದರು. ಇದರ ಬಗ್ಗೆ ಇಂದು ಸರಿಯೋ ತಪ್ಪೋ ಎಂಬುದರ ಬಗ್ಗೆ ರಿಪಬ್ಲಿಕ್ ಸುದ್ದಿ ವಾಹಿನಿಯಲ್ಲಿ ಚರ್ಚಾ ಕಾರ್ಯಕ್ರಮ ನಡೆದಿತ್ತು. ಈ ವೇಳೆ ಅರ್ನಬ್ ಗೋಸ್ವಾಮಿ ಎದುರು ತಾವು ಅನುಭವಿಸಿದ ಕಾಸ್ಟಿಂಗ್ ಕೌಚ್ ಬಗ್ಗೆ ನಟಿ ಸಂಜನಾ ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ.

 

 

ಈ ಬಗ್ಗೆ ಮಾತನಾಡಿದ ಸಂಜನಾ “ನಾನು 45 ಸಿನಿಮಾದಲ್ಲಿ ಅಭಿನಯ ಮಾಡಿದ್ದೂ ಅದರಲ್ಲಿ ಒಂದು ಚಿತ್ರದಲ್ಲಿ ‘ಕಾಸ್ಟಿಂಗ್ ಕೌಚ್’ ಅನುಭವ ಆಗಿದೆ. ಈ ನಿರ್ಮಾಪಕನನ್ನು ಸರಿಯಾಗಿ ಒಡ್ದಿದ್ದೇನೆ” ಎಂದು ಸಂಜನಾ ಹೇಳಿದ್ದಾರೆ. ಇನ್ನು ಕಾಸ್ಟಿಂಗ್ ಕೌಚ್ ಪರವಾಗಿ ಧ್ವನಿ ಎತ್ತಿರುವ ಸರೋಜ್ ಖಾನ್ ನಿಲುವನ್ನು ನಟಿ ಸಂಜನಾ ಖಂಡಿಸಿದ್ದಾರೆ ಎಂದು ತಿಳಿದು ಬಂದಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top