ಸಮಾಚಾರ

ಒಂದು ಎರಡಲ್ಲ 14 ಬಾರಿ ಗರ್ಭಾವಸ್ಥೆಯ ಪ್ರಯತ್ನ ವಿಫಲವಾದ ನೋವನ್ನು ತೋಡಿಕೊಂಡ ಈ ಬಾಲಿವುಡ್ ನಟಿ, ಅಸಲಿಗೆ ಆಕೆಗೆ ಏನಾಗಿತ್ತು ಗೊತ್ತಾ

ಬಾಲಿವುಡ್ ನಟಿಯಾದ ಕಾಶ್ಮೀರಾ ಕೆಲವು ವರ್ಷಗಳಿಂದ ಚಿತ್ರಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಯಾಕೆ ಎಂಬ ಪ್ರಶ್ನೆ ಬಾಲಿವುಡ್ ವಲಯದಲ್ಲಿ ಹರಿದಾಡುತ್ತಿತ್ತು. ಈಗ ಬಗ್ಗೆ ಮಾಹಿತಿ ಹೊರಬಿದ್ದಿದೆ ಕೃಷ್ಣ ಅಭಿಷೇಕ್ ಹಾಗು ಪತ್ನಿ ಕಾಶ್ಮೀರಾ ಷಾ ಒಂದು ವರ್ಷದ ಹಿಂದೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇಬ್ಬರೂ ಲಾಸ್ ವೆಗಾಸ್ ನಲ್ಲಿ ವಿವಾಹವಾಗಿದ್ದರು.

 

 

ಈ ಜೋಡಿ 2012 ರಲ್ಲಿ ಮಾಡುವೆ ಆಗಿತ್ತು ಆದರೆ 2015 ರವರೆಗೂ ಇವರು ಈ ಮಾಹಿತಿಯನ್ನು ಗುಟ್ಟಾಗಿಟ್ಟಿದ್ದರು. ಆದರೆ ಇವರಿಬ್ಬರ ದಾಂಪತ್ಯ ಜೀವನದಲ್ಲಿ ಅಡೆತಡೆ ಬಂದಿದ್ದವು. ಕೆಲವು ದಿನಗಳ ಹಿಂದೆ ಈ ಬಗ್ಗೆ ಕಾಶ್ಮೀರಾ ಅವರು ಹೇಳಿಕೊಂಡಿದ್ದಾರೆ.

 

 

ಕಾಶ್ಮೀರಾ ಅವರು ಮಕ್ಕಳನ್ನು ಪಡೆಯಲು ಐವಿಎಫ್ ಆಶ್ರಯ ಪಡೆದಿದ್ದರು. 14 ಸಾರಿ ಗರ್ಭಾವಸ್ಥೆಯ ಪ್ರಯತ್ನ ವಿಫಲ ಆಗಿತ್ತು. ಇದರಿಂದ ಕಾಶ್ಮೀರಾ ತೂಕ ಹೆಚ್ಚಾಗಿತ್ತು. ಇವರಉ ಹೆಚ್ಚು ಮಗುವಿನ ಬಯಕೆಯಲ್ಲಿದ್ದರು ಆದರೆ ಇವರಿಗೆ ಅವಳಿ ಗಂಡು ಮಕ್ಕಳು ಜನಿಸಿದ್ದಾರೆ ಎಂದು ತಿಳಿದು ಬಂದಿದೆ.

 

 

ಕಾಶ್ಮೀರಾ ಈ ಹಿಂದೆ ಮಹೇಶ್ ಮಂಜ್ರೇಕರ್ ಅವರ ಲಾಲ್ಬಾಗ್ ಪರೇಲ್ ಚಿತ್ರದಲ್ಲಿ ಅಭಿನಯ ಮಾಡಿದ್ದರು. ಮುಂಬೈನ ಗಿರಣಿ ಮುಚ್ಚಿದ ಬಳಿಕ ಕಾರ್ಮಿಕರು ಎದುರಿಸುವ ಸಮಸ್ಯೆಗಳನ್ನು ಆಧಾರಿತ ಚಿತ್ರ ಇದಾಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top