ಸಿನಿಮಾ

‘ನಾನು ಹಿಂದೂ ಎಂದು ಹೇಳಿಕೊಳ್ಳಲು ನೋವಾಗುತ್ತೆ’ ಅಂದ್ರು ನಟಿ ಜಯಮಾಲ ಯಾಕೆ ಗೊತ್ತಾ

ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಬೆಳಕಿಗೆ ಬಂದಿರುವ ಅತ್ಯಾಚಾರ ಪ್ರಕರಣಗಳ ಬಗ್ಗೆ ನಟಿ ಜಯಮಾಲ ಕಳವಳವನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ತುಮಕೂರಿರಲ್ಲಿ ಮಾತನಾಡಿದ ನಟಿ ಜಯಮಾಲ ಈ ಸಂಧರ್ಭದಲ್ಲಿ ಹಿಂದೂ ಎಂದು ಹೇಳಿಕೊಳ್ಳಲು ತುಂಬಾ ನೋವಾಗುತ್ತಿದೆ ಎಂದು ಹೇಳಿದ್ದಾರೆ. ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಘಟನೆಗಳೇ ಇದಕ್ಕೆ ನೇರ ಕಾರಣ. ದೇಶದಲ್ಲಿ ಜಾತೀಯತೆ, ಕೋಮುವಾದ ಎನ್ನುವುದು ಹೆಚ್ಚಾಗಿ ತಾಂಡವಾಡುತ್ತಿದೆ. ಉತ್ತರ ಪ್ರದೇಶ ಅಂತಹ ರಾಜ್ಯದಲ್ಲಿ ಹಸುಳೆಗಳ‌ ಮೇಲೆ ಅಮಾನುಷವಾಗಿ ಅತ್ಯಾಚಾರ ನಡೆಯುತ್ತಿದೆ.

 

 

ಉತ್ತರ ಪ್ರದೇಶ ರಾಜ್ಯದಲ್ಲಿ ಹಿಂದೂ ಸಹೋದರರೇ ದೇವಸ್ಥಾನದ ಎದುರು ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದಾರೆ. ಹಾಗಾಗಿ ನಾನು ಹಿಂದೂ ಎಂದು ಹೇಳಿಕೊಳ್ಳಲು ನೋವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

 

 

ಈ ಅತ್ಯಾಚಾರಗಳಿಗೆ ಕೇಂದ್ರ ಸರ್ಕಾರ ಮತ್ತು ಉತ್ತರ ಪ್ರದೇಶ ಸರ್ಕಾರವೇ ಕಾರಣ. ಹಿಂದೂತ್ವ ಹಾಗು ಕೋಮುವಾದದ ಹೆಸರಿನಲ್ಲಿ ಇಂತಹ ಕೆಲಸ ಮಾಡುತ್ತಿದ್ದಾರೆಂದು ನಟಿ ಜಯಮಾಲ ಆರೋಪ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top