ದೇವರು

ಮನಸ್ಸಲ್ಲಿ ಅಂದುಕೊಂಡ ಕೆಲಸಗಳು ಆಗ್ಬೇಕಂದ್ರೆ ದೇವರ ಹರಕೆ(ದೇವ ಶೇಷ) ಕಟ್ಟುತ್ತಾರೆ ,ಇದನ್ನು ಎಷ್ಟು ವರ್ಷಗಳ ಒಳಗೆ ತೀರಿಸಬೇಕು ಗೊತ್ತೇ

ದೇವರ ಹರಕೆಯ ಬಗ್ಗೆ ನಿಮಗೆಷ್ಟು ಗೊತ್ತು ? ಹರಕೆಯನ್ನು ಎಷ್ಟು ವರ್ಷಗಳ ಒಳಗೆ ತೀರಿಸಬೇಕು ?ಇಲ್ಲವೆಂದರೆ ಏನಾಗುತ್ತದೆ ?

 

ಹರಕೆ ಹೊತ್ತು ದೇವರ ಕಾರ್ಯವನ್ನು ಮಾಡುತ್ತಾರೆ. ಈ ರೀತಿ ಮಾಡಿದರೆ ಯಶಸ್ಸು ಸಿಗುತ್ತದೆ. ಕಾರ್ಯ ಸಿದ್ಧಿಯಾಗುತ್ತದೆ ಎಂದು ಹೇಳುತ್ತಾರೆ. ಹಾಗಾದರೆ ಕಾರ್ಯ ಸಿದ್ದಿಯಾದ ನಂತರ, ಯಶಸ್ಸು ಗಳಿಸಿದ ನಂತರ ಹರಕೆ ತೀರಿಸುವುದನ್ನು ಮರೆತು ಬಿಟ್ಟರೆ. ಏನಾಗುತ್ತದೆ ?ಸಾಕಷ್ಟು ಸಂಕಷ್ಟಗಳು, ಕಷ್ಟಗಳು ಎದುರಾಗುತ್ತವೆ ಎಂದು ಹೇಳುತ್ತಾರೆ. ಹಾಗಾದರೆ ಈ ರೀತಿ ಎದುರಾಗುವ ಸಂಕಷ್ಟಗಳಿಗೆ ಏನು ಮಾಡಬೇಕು ?

 

 

ಸಾಮಾನ್ಯವಾಗಿ ಜನರು ತಮ್ಮ ಜೀವನದಲ್ಲಿ ಕಷ್ಟಗಳು ಬಂದಾಗ ಅವುಗಳನ್ನು ಬಗೆಹರಿಸುವುದಕ್ಕೆ ತಮ್ಮ ಮನೆ ದೇವರಿಗೆ, ಅಥವಾ ಕುಲದೇವರಿಗೆ ಹೋಗಿ ಹರಕೆಯನ್ನು ಹೊತ್ತುಕೊಂಡು ಬರುತ್ತಾರೆ. ನಮ್ಮ ಕಷ್ಟಗಳನ್ನು ಪರಿಹಾರ ಮಾಡಿದರೆ ಹರಕೆ ಸೇವೆಯನ್ನು ಸಲ್ಲಿಸುತ್ತೇವೆ ಎಂದು ಬೇಡಿಕೊಳ್ಳುತ್ತಾರೆ. ಆದರೆ ಕಷ್ಟಗಳು ಪರಿಹಾರವಾದ ನಂತರ ಹರಕೆ ತೀರಿಸುವುದನ್ನು ಮರೆತು ಬಿಡುತ್ತಾರೆ. ಯಾವ ರೀತಿಯ ಕಷ್ಟಗಳು ಇದರಿಂದ ಎದುರಾಗುತ್ತವೆ. ಅವುಗಳನ್ನು ಪರಿಹಾರ ಮಾಡಿಕೊಳ್ಳುವುದು ಹೇಗೆ ಎಂದು ತಿಳಿದುಕೊಳ್ಳೊಣ ಬನ್ನಿ..

ಹರಕೆಯನ್ನು ನಮ್ಮ ಸಂಸ್ಕೃತ ಭಾಷೆಯಲ್ಲಿ “ದೇವ ಶೇಷ” ಎಂದು ಕರೆಯುತ್ತಾರೆ. ಬಹಳಷ್ಟು ಜನ ಪೂರ್ವಕಾಲದಲ್ಲಿ ನಮ್ಮ ಗ್ರಾಮೀಣ ಭಾಗದಲ್ಲಿ ಇರುವವರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ, ತಿರುಪತಿಗೆ ಅಥವಾ ಮನೆ ದೇವರಿಗೆ ,ಇಷ್ಟ ದೇವರಿಗೆ, 101  ಆಥವಾ 11 ರೂಪಾಯಿಯನ್ನು ಹರಕೆ ಮಾಡುತ್ತಿದ್ದರು. ಅಥವಾ ಹರಿಶಿನದ ಬಟ್ಟೆಯಲ್ಲಿ ಇಟ್ಟು ಹರಕೆ ಕಟ್ಟಿ ದೇವರ ಮನೆಯಲ್ಲಿ ಇಟ್ಟು ಬೇಡಿಕೊಳ್ಳುತ್ತಿದ್ದರು.

 

 

ದೇವರೇ ನಮಗೆ ಈ ಕೆಲಸ ಆದರೆ ಸಾಕು ನಾನು ಬಂದು ದರ್ಶನ ಮಾಡುತ್ತೇನೆ ಅಥವಾ ಸೇವೆ ಸಲ್ಲಿಸುತ್ತೇನೆ ಎಂದು ಬೇಡಿಕೊಳ್ಳುತ್ತಿದ್ದರು. ಅಂದಿನ ಕಾಲದಲ್ಲಿ ದೈವ ಭಕ್ತಿಗೆ ಅಷ್ಟೊಂದು ಶಕ್ತಿ ಇತ್ತು. ದೈವ ಭಕ್ತಿ ಜನರಲ್ಲಿ ತುಂಬ ಚೆನ್ನಾಗಿತ್ತು. ದೇವರ ಆಣೆ ಮಾಡಿ ಯಾವುದಾದರೂ ಮಾತು ಕೊಟ್ಟರೆ ಆ ಮಾತಿಗೆ ಸರಿಯಾಗಿ ಅವರು ನಡೆದುಕೊಳ್ಳುತ್ತಿದ್ದರು. ಆದರೆ ಇವತ್ತು ತಂದೆಯ ಮೇಲೆ, ತಾಯಿಯ ಮೇಲೆ ಆಣೆ ಇಟ್ಟರು ಇಲ್ಲ ಇಂಥಹ  ಒಂದು ಪರಿಸ್ಥಿತಿ  ಈಗಿನ ಕಾಲದಲ್ಲಿ ಸೃಷ್ಟಿಯಾಗಿದೆ.

ಇತ್ತೀಚಿನ ಪರಿಸ್ಥಿತಿಯಲ್ಲಿ ಬಹಳಷ್ಟು ಜನ ಸಾರ್ವಜನಿಕ ಕ್ಷೇತ್ರಗಳಲ್ಲಿ ನಾವು ನೋಡಿದಾಗ ಏನು ಮಾಡುತ್ತಾರೆ. ಹರಕೆ ಎನ್ನುವುದು ಯಾವುದೋ ಒಂದು ದೇವಸ್ಥಾನದ ಬಾಗಿಲಿಗೆ ಹೋದ ತಕ್ಷಣ ಇನ್ನು ರಾಜಗೋಪುರ ಪ್ರವೇಶಿಸುತ್ತಲೇ ಕೆಲವರು ಶುರು ಮಾಡುತ್ತಾರೆ. ಅಯ್ಯೋ, ನನಗೆ ಆ ಕೆಲಸ ಆಗಬೇಕು, ಈ ಕಾರ್ಯ ಆಗಬೇಕು, ಕೆಲಸ ಆದರೆ ಹೂಮಾಲೆ ಸೇವೆ ಸಲ್ಲಿಸುತ್ತೇನೆ, ಪ್ರಸಾದ ಮಾಡಿಸುತ್ತೇನೆ, ಅಭಿಷೇಕ ಮಾಡಿಸುತ್ತೇನೆ, ಕಲಶ ಮಾಡಿಸಿಕೊಡುತ್ತೇನೆ ಎಂದು, ಹೀಗೆ ಇಲ್ಲದೇ ಇರುವ ಆಶ್ವಾಸನೆಗಳೆಲ್ಲ ಕೊಟ್ಟುಕೊಂಡು ರಾಜಗೋಪುರದಿಂದಲೂ ಕೂಡ ಅವರ ಹರಕೆಯ ಸುರಿಮಳೆಯನ್ನೇ ಇಟ್ಟುಕೊಂಡು ಹೋಗುತ್ತಾರೆ ದೇವರ ಬಳಿ ಹೋಗುತ್ತಾರೆ.

ಆಗ ಭಗವಂತ ಅಯ್ಯೋ ಪಾಪ, ಅದು ಇದು ಅಂತ ಎಲ್ಲವನ್ನೂ ಹೇಳುತ್ತಿದ್ದಾರೆ, ಎಂದು ಹೇಳಿ ಅಸ್ತು ಎಂದು ಹೇಳಿಬಿಡುತ್ತಾನೆ ಎಂದು ಇಟ್ಟುಕೊಳ್ಳೋಣ. ಆದರೆ ಆ ಉನ್ನತ ಸ್ಥಾನಕ್ಕೆ ಹೋದ ನಂತರ ಎಷ್ಟೋ ಕುಟುಂಬಗಳಲ್ಲಿ ಇವತ್ತಿಗೂ ಕೂಡ ಹರಕೆಯನ್ನು ಮರೆತಿರುವುದನ್ನು ನಾವು ನೋಡುತ್ತಿರುತ್ತೇವೆ. ಅದರಿಂದ ಸಂಕಷ್ಟಗಳು ಬರುತ್ತವೆ. ಅದಕ್ಕೆ “ದೇವ ಶೇಷ” ಎನ್ನುವುದನ್ನು ಯಾರೂ ಕೂಡ ಇಟ್ಟುಕೊಳ್ಳಬಾರದು.

 

 

“ದೇವ ಶೇಷವನ್ನು” ಇಟ್ಟುಕೊಂಡರೆ ವ್ಯವಸ್ಥಿತವಾಗಿ ಅಭಿವೃದ್ಧಿ ಕುಂಠಿತವಾಗುತ್ತದೆ. ನಾನಾ ರೀತಿಯ ಸಂಕಷ್ಟಗಳು ಎದುರಾಗುತ್ತವೆ. ಇತ್ತೀಚೆಗೆ ನಾವು ನೋಡುತ್ತಿದ್ದೇವೆ, ಚುನಾವಣೆಯ ಸಂದರ್ಭದಲ್ಲಿ ನಾಯಕರುಗಳು ಗೆಲ್ಲುವುದಕ್ಕೆ ಪ್ರತಿಯೊಂದು ದೇವಸ್ಥಾನಕ್ಕೂ ಹೋಗಿ ಹರಕೆಯನ್ನು ಹೊತ್ತಿ  ಬೇಡಿಕೊಳ್ಳುತ್ತಾರೆ. ನನಗೆ ವಿಜಯವನ್ನು ಕೊಡು ಎಂದು ಕೇಳಿಕೊಳ್ಳುತ್ತಾರೆ. ವಿಜಯವನ್ನು ಸಾಧಿಸಿದ ನಂತರ ಅಧಿಕಾರದ ಅಹಂ ನಿಂದ ಈ ಕ್ಷೇತ್ರಗಳಿಗೆ ಕೂಡ ಎಷ್ಟೋ ನಾಯಕರುಗಳು ಹೋಗುವುದಿಲ್ಲ. ಅನೇಕ ನಾಯಕರುಗಳಿಗೆ ನಾನಾ ರೀತಿಯ ಸಂಕಷ್ಟಗಳು ಎದುರಾಗುತ್ತವೆ. ಅವರಿಗೆ ಗೆದ್ದಾಗ ನಾನು ಯಾವ ದೇವಸ್ಥಾನಕ್ಕೆ ಹೋಗಿದ್ದೆ ? ಏನು ಹೇಳಿದ್ದೆ ? ಎನ್ನುವುದು ಸಹ ಗೊತ್ತೇ ಇರುವುದಿಲ್ಲ ? ಜ್ಞಾಪಕವೇ ಇರುವುದಿಲ್ಲ.

ಹರಕೆಯ ಸಮಯ 12 ವರ್ಷ.

ನೀವು ದೇವರಿಗೆ ಪೂಜೆ, ನಮಸ್ಕಾರ ಪ್ರತಿದಿನ ಮಾಡುತ್ತೀರ. ಸಂತೋಷದ ವಿಚಾರ. ಆದರೆ ಹರಕೆಯನ್ನು ಮಾಡಬೇಕಾದರೆ ಮಾತ್ರ ಯೋಚನೆ ಮಾಡಿ ವ್ಯವಸ್ಥಿತವಾಗಿ ಮಾಡಿ . ಇಂಥದ್ದೇ ದಿನವೇ ಮಾಡುತ್ತೇನೆ ಎಂದು ಬೇಡಿಕೊಳ್ಳಬೇಕು. ಹರಕೆ ನಿಮ್ಮನ್ನು ಹನ್ನೆರಡು ವರ್ಷದವರೆಗೆ ಕಾಯುತ್ತದೆ. ಹನ್ನೆರಡು ವರ್ಷದವರೆಗೂ ಯಾವುದೇ ತೊಂದರೆಯನ್ನೂ ಕೊಡುವುದಿಲ್ಲ. ಹನ್ನೆರಡು ವರ್ಷಗಳ ನಂತರ ನಾನಾ ರೀತಿಯ ಸಮಸ್ಯೆಗಳು  ಸೃಷ್ಟಿಯಾಗುತ್ತವೆ.

ಆಗ ಜಾತಕ ತೋರಿಸುತ್ತೀರ, ಜಾತಕದಲ್ಲಿ ರಾಜಯೋಗ ಎನ್ನುವುದು ಇರುತ್ತದೆ. ಆದರೂ ಕೂಡ ನಾನಾ ರೀತಿಯ ಸಂಕಷ್ಟಗಳನ್ನು ಅನುಭವಿಸುತ್ತಿರುತ್ತೀರಿ. ಕೆಲವರಿಗೆ ದೈವಾನುಗ್ರಹ ಎನ್ನುವುದು ಇರುತ್ತದೆ. ಜನ್ಮದಲ್ಲಿ ಶನಿ ಇದ್ದರೂ ಸಹ ಅವರು ರಾಜನಾಗಿ ಪಟ್ಟಾಭಿಷೇಕವನ್ನು ಮಾಡಿಕೊಳ್ಳುವ ಸಾಧ್ಯತೆಗಳು ಕೂಡ ಹೆಚ್ಚಾಗಿ ಕಂಡುಬರುತ್ತದೆ.

 

 

ಅದಕ್ಕೆ ಹೇಳುತ್ತಾರೆ ದೈವ ಶಕ್ತಿಯ ಅನುಗ್ರಹ ಬೇಕು ಎಂದು. ಭಗವಂತ ನಮ್ಮನ್ನು ಕಳಿಸಿದ್ದಾನೆ ನಿಜ, ಆ ಭಗವಂತ ಕಳುಹಿಸಿರುವುದಕ್ಕೆ ನಾವು ವಿಧೇಯಕರಾಗಿ ನಡೆದುಕೊಳ್ಳಬೇಕು. ಆದರೆ ಎಷ್ಟು  ಜನ ವಿಧೇಯರಾಗಿ ನಡೆದುಕೊಳ್ಳುತ್ತಾ  ಇದ್ದೀರಾ? ಯೋಚನೆಯನ್ನು ಮಾಡಿ. ನಿಮ್ಮ ನಿಮ್ಮ ಕಾರ್ಯಾನುಕೂಲಕ್ಕೆ ದೈವಶಕ್ತಿಯನ್ನು ಉಪಯೋಗಿಸಿ ಕೊಳ್ಳುವಂತದ್ದು, ನಂತರ ದೈವಶಕ್ತಿಯನ್ನು ಮರೆತು ಬಿಡುವುದು ಅಥವಾ ನಿಮ್ಮ ಸ್ವಾರ್ಥಕ್ಕೋಸ್ಕರ ದೇವರನ್ನು ಉಪಯೋಗಿಸಿಕೊಳ್ಳುವುದು.

ಇದಕ್ಕೆ ಇನ್ನೊಂದು ಉದಾಹರಣೆ –

ಯಾವುದೋ ಒಂದು ದೇವಾಲಯದಲ್ಲಿ ಬಹಳಷ್ಟು ನಾಮ ಫಲಕಗಳನ್ನು ಹಾಕಿರುತ್ತಾರೆ. ನಿಮ್ಮ ಹೆಸರುಗಳನ್ನು ಬೋರ್ಡ್ ಮೇಲೆ ಬರೆಸಿಕೊಳ್ಳುವುದನ್ನು ಇತ್ತೀಚೆಗೆ ಮಾಡುತ್ತಿದ್ದೀರಾ ? ಯಾಕೆ ಭಗವಂತ ಕೊಟ್ಟಿರುವ ಹಣವನ್ನು ಭಗವಂತನಿಗೆ ಕೊಡುವುದಕ್ಕೆ ನಿಮ್ಮ ಹೆಸರು ಯಾಕೆ ಬರೆಯಬೇಕು ? ಭಗವಂತನಿಗೆ ಅರ್ಪಣೆ ಮಾಡುತ್ತಿದ್ದೀರೋ ? ಅಥವಾ ನಿಮ್ಮ ಪ್ರದರ್ಶನವನ್ನು ಮಾಡಿಕೊಳ್ಳುತ್ತಿದ್ದೀರಾ ? ನೀವೇ ಯೋಚನೆ ಮಾಡಿ. ಆದ್ದರಿಂದ ಇಂತಹ ಒಂದು ದೇವ ಶೇಷವನ್ನು ದಯಮಾಡಿ ಇಟ್ಟುಕೊಳ್ಳಬೇಡಿ. ಇದರಿಂದ ನಾನಾ ರೀತಿಯ ಸಮಸ್ಯೆಗಳು ಬರುತ್ತವೆ. ನಿಮಗೆ ಇರುವ ಹರಕೆಗಳನ್ನು ಜ್ಞಾಪಕ ಮಾಡಿಕೊಂಡು ಹರಕೆಯನ್ನು ತೀರಿಸಿ. ನಿಮ್ಮ ಕುಲ ದೇವತೆಯೂ ನಿಮಗೆ ಅಭಿವೃದ್ಧಿ ರಕ್ಷಣೆಯನ್ನು ನೀಡಲಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top