ಭವಿಷ್ಯ

ತುಲಾ ರಾಶಿಯಲ್ಲಿ ಹುಟ್ಟಿದವರು ವೀರರಂತೆ,, ಅವರ ಗುಣ ಸ್ವಭಾವಗಳ ಬಗ್ಗೆ ತಿಳ್ಕೊಳಿ.

ತುಲಾ ರಾಶಿಯಲ್ಲಿ ಹುಟ್ಟಿದವರು ವೀರರಂತೆ,, ಅವರ ಗುಣ ಸ್ವಭಾವಗಳ ಬಗ್ಗೆ ತಿಳ್ಕೊಳಿ.

 

 

 

 

ಗುಣ ಸ್ವಭಾವಗಳು.

ತುಲಾ ರಾಶಿಯವರಿಗೆ ಹಿಂಸೆ ಮಾಡುವುದೆಂದರೆ ಆಗುವುದಿಲ್ಲ.ತುಲಾ ರಾಶಿಯವರು ಅಹಿಂಸಾವಾದಿಗಳು.ಅಹಿಂಸೆಯ ಮಾರ್ಗವನ್ನು ಅನುಸರಿಸುವರು.ತ್ಯಾಗ ಇವರ ದೊಡ್ಡ ಧರ್ಮ.ಕಷ್ಟವನ್ನು ಸಹಿಸುವುದಿಲ್ಲ.ಪರರಿಗೆ ಉಪಕಾರ ಮಾಡುವ ಪರೋಪಕಾರಿ ಗುಣ ಇವರದ್ದು.ಹಠ ಪ್ರವೃತ್ತಿ ಇರುವವರು,ಮೃದು ಸ್ವಭಾವಿಗಳು,ಒಳ್ಳೆಯ ಬುದ್ದಿ ಶಕ್ತಿ ಇರುವವರು,ನಿಸ್ವಾರ್ಥಿಗಳು,ಜನಗಳ ಜತೆಯಲ್ಲಿ ಪ್ರೀತಿಯಿಂದ ವ್ಯವಹರಿಸುತ್ತಾರೆ.ಬೇರೆಯವರ ಕಷ್ಟಕ್ಕೆ ಜೊತೆಯಾಗುತ್ತಾರೆ.ತಮ್ಮ ಆರೋಗ್ಯದ ಕಡೆ ಗಮನ ಕೊಡುತ್ತಾರೆ.ಹೆಂಡತಿ ಮಕ್ಕಳ ಗೊಡವೆಗೆ ಹೋಗುವುದು ಕಡಿಮೆ.ಜನರ ಜೊತೆ ಹೆಚ್ಚು ಪ್ರೀತಿ,ವಾತ್ಸಲ್ಯದಿಂದ ,ಗೆಳೆತನದಿಂದ ಹೊಂದಿಕೊಂಡು ಇರುತ್ತಾರೆ.ಆದರೆ ಜನಗಳು ಅದನ್ನು ಉಳಿಸುವುದಿಲ್ಲ.ವೀರರು,ಧೀರರು,ಗೌರವಾನ್ವಿತರು,ತ್ಯಾಗಿಗಳು ಆಗಿರುತ್ತಾರೆ.
ಸಂಸ್ಥೆ ಸ್ಥಾಪಿಸುತ್ತಾರೆ ಆದರೆ ಅಧಿಕಾರ ಪಡೆಯುವುದಿಲ್ಲ.

 

 

Image result for ತುಲಾ ರಾಶಿ

 

 

ತುಲಾ ರಾಶಿಯಲ್ಲಿ ಹುಟ್ಟಿದವರ ಬದುಕಿನ ವಿವರವೇ ಬಹಳ ಕುತೂಹಲ ಬರಿಸುವಂಥದ್ದು.ಇವರಿಗೆ ಯಾವ ಸಂಸ್ಥೆಯಲ್ಲಿಯೂ ಸಹ ಸುಖ ಸಿಗುವುದಿಲ್ಲ.ಇವರು ಎಷ್ಟೇ ಕಷ್ಟಪಟ್ಟು ಒಂದು ಸಂಸ್ಥೆಯನ್ನು ಕಟ್ಟಿದರೂ ಸಹ ಎರಡೇ ವರ್ಷಗಳಲ್ಲಿ ಆ ಸಂಸ್ಥೆಯಿಂದ ಹೊರಗೆ ಬಂದು ಬಿಡುತ್ತಾರೆ.ಇವರು ಯಾವ ಅಧಿಕಾರವನ್ನು ಪಡೆಯಲು ಸಾಧ್ಯವೇ ಇಲ್ಲ.ಇಂತಹ ಒಳ್ಳೆಯ ಕೆಲಸವನ್ನು ಮಾಡಿದರು ಸಹ ಅದನ್ನು ಗುರುತಿಸಲು ಯಾರೂ ಇರುವುದಿಲ್ಲ.

 

 

 

 

ತುಲಾ ರಾಶಿಯವರು ಪ್ರಯತ್ನ ಪಟ್ಟರೆ ಸಾಕು ಎಲ್ಲ ಕೆಲಸವೂ ಕೈಗೂಡುತ್ತದೆ. ಒಂದು ಸಂಸ್ಥೆ ಒಂದು ಬಳ್ಳೆಯ ಹಂತ ತಲುಪಿದಾಗ.ತಾವಾಗೆ ತಾವೇ ಅಲ್ಲಿಂದ ಆಚೆ ಬಂದು ಬಿಡುತ್ತಾರೆ.ತುಲಾ ರಾಶಿಯವರು ಎಷ್ಟೇ ಕಷ್ಟ ಪಟ್ಟು ಏನೇ ಮಾಡಿದರೂ ಅದೆಲ್ಲವೂ ಬೇರೆಯವರ ಪಾಲಾಗುತ್ತದೆ.

ಶಾಲಾ,ಕಾಲೇಜಿನಂತಹ, ವಿದ್ಯಾ ಸಂಸ್ಥೆಗಳು,ವಿಶ್ವ ವಿದ್ಯಾನಿಲಯಗಳು ಇಂತಹ ಸಂಸ್ಥೆಗಳನ್ನು ನಿರ್ಮಾಣ ಮಾಡಿ ಕಟ್ಟಿ ಬೆಳೆಸುವುದು ಈ ರಾಶಿಯವರಿಗೆ ಕೈಗೂಡುತ್ತವೆ.ತುಲಾ ರಾಶಿಯವರು ವಿಚಾರವಂತರು,ವಾದ ವಿವಾದಗಳಲ್ಲಿ ಪಾಲ್ಗೊಳ್ಳುವ ಸ್ವಭಾವ ಇರುವವರು.

ಮಹಾತ್ಮ ಗಾಂಧೀಜಿ ತುಲಾ ಲಗ್ನದಲ್ಲಿ ಜನಿಸಿದವರು.

 

 

ಮಹಾತ್ಮ ಗಾಂಧೀಜಿಯವರು ಸಹ ತುಲಾ ಲಗ್ನದಲ್ಲಿ ಜನಿಸಿದವರು.ಮಹಾತ್ಮ ಗಾಂಧೀಜಿಯವರು ಸ್ತ್ರೀಯರ ಮತ್ತು ಗ್ರಾಮೀಣ ಭಾರತದ ಅಭಿವೃದ್ಧಿಗೆ ಮತ್ತು ಉದ್ದಾರ ಮಾಡುವುದಕ್ಕಾಗಿ ಅನೇಕ ಸಂಘ ಸಂಸ್ಥೆಗಳನ್ನು ನಿರ್ಮಿಸಿದರು.ಆಶ್ರಮ ಗುಡಿ ಕೈಗಾರಿಕಾ ಸಂಸ್ಥೆ ಇವೆಲ್ಲ ಗಾಂಧೀಜಿಯವರೇ ನಿರ್ಮಾಣ ಮಾಡಿದ್ದರು.ಸಾರ್ವಜನಿಕ ಹಿತಕ್ಕೋಸ್ಕರ ಕಟ್ಟಿದ ಈ ಸಂಸ್ಥೆಗಳು ಇಂದಿಗೂ ಕೂಡ ಸಾರ್ವಜನಿಕ ಸಂಸ್ಥೆಗಳಾಗಿಯೇ ಮುಂದುವರೆದಿವೆ . ಇಡೀ ಪ್ರಪಂಚವನ್ನು ಸಮಾನತೆಯಿಂದ ಕಂಡ ಗಾಂಧೀಜಿ ಜಾತಿ,ಮತ,ಭೇದವನ್ನು ಮಾಡಲಿಲ್ಲ.

ತುಲಾ ರಾಶಿಯ ಸ್ತ್ರೀಯರು ವೀರ ಮಾತೆಯರು.

 

ಈ ರಾಶಿಯ ಸ್ತ್ರೀಯರು ರಾಜಕೀಯ ಪ್ರವೀಣೆಯರು.ತುಲಾ ರಾಶಿಯಲ್ಲಿ ಅನೇಕ ವೀರ ಮಾತೆಯರು ಹುಟ್ಟಿದ್ದಾರೆ.ಅವರುಗಳಾದ ಜಾನ್ಸಿರಾಣಿ ಲಕ್ಷ್ಮೀಬಾಯಿ,ಅಹಲ್ಯಾಬಾಯಿ ಹೊಲ್ಕರ್, ಕಿತ್ತೂರು ರಾಣಿ ಚೆನ್ನಮ್ಮ,ಮಹಾರಾಣಿ ತಾರಭಾಯಿ,ಹೀಗೆ ಇನ್ನೂ ಮುಂತಾದ ವೀರ ತಾಯಿಯರು, ಇನ್ನೂ ಮುಂತಾದವು ವೀರ ಮಾತೆಯರು ಕಾಣ ಸಿಗುವುದು ಇದೇ ತುಲಾ ರಾಶಿಯವರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top