ಸಿನಿಮಾ

ಪಾರ್ವತಮ್ಮನ ಮಗಳಾಗಿ ಸಹಜ ಚೆಲುವೆ ಹರಿಪ್ರಿಯಾ

ಸ್ಯಾಂಡಲ್ ವುಡ್ ಚಿತ್ರರಂಗದ ಖ್ಯಾತ ನಿರ್ಮಾಪಕಿ ಆಗಿದ್ದ ದಿವಂಗತ ಪಾರ್ವತಮ್ಮನವರು ನಮ್ಮನ್ನು ದೈಹಿಕವಾಗಿ ಆಗಲಿ ಹಲವು ತಿಂಗಳುಗಳೇ ಕಳೆದುಹೋಗಿವೆ. “ಡಾಟರ್ ಆಫ್ ಪಾರ್ವತಮ್ಮ” ಎಂಬ ಚಿತ್ರ ಕನ್ನಡಲ್ಲಿ ಬರುತ್ತಿದೆ ಆದ್ರೆ ಈ ಸಿನಿಮಾ ಶೀರ್ಷಿಕೆಗೂ ಪಾರ್ವತಮ್ಮ ರಾಜ್‍ಕುಮಾರ್ ಅವರಿಗೂ ಯಾವುದೇ ಸಂಬಂಧವಿಲ್ಲ.

 

 

ಡಾಟರ್ ಆಫ್ ಪಾರ್ವತಮ್ಮ ಚಿತ್ರದಲ್ಲಿ ಪಾರ್ವತಮ್ಮನ ಪಾತ್ರದಲ್ಲಿ ಸುಮಲತಾ ಅಂಬರೀಶ್ ಅಭಿನಯ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಈ ಚಿತ್ರದಲ್ಲಿ ಪಾರ್ವತಮ್ಮನ ಮಗಳಾಗಿ ನಟಿ ಹರಿಪ್ರಿಯಾ ಅಭಿನಯ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದು ಹರಿಪ್ರಿಯಾ ಅಭಿನಯದ 25 ನೇ ಚಿತ್ರವಾಗಿದೆ. ಸುಮಲತಾ ಈ ಚಿತ್ರದಲ್ಲಿ ತಾಯಿಯ ಪಾತ್ರದಲ್ಲಿ ಮಿಂಚಲಿದ್ದಾರೆ. ಸುಮಲತಾ ಅವರು ಅಜಯ್ ರಾವ್ ಚಿತ್ರದಲ್ಲೂ ಕೂಡ ತಾಯಿಯ ಪಾತ್ರದಲ್ಲಿ ಅಭಿನಯ ಮಾಡುತ್ತಿದ್ದಾರೆ.

 

 

ಪ್ರಥಮ ಬಾರಿಗೆ ನಟಿ ಹರಿಪ್ರಿಯಾ ತನಿಖಾಧಿಕಾರಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಸದ್ಯ ಈಗ ಹರಿಪ್ರಿಯಾ ಮತ್ತು ಸುಮಲತಾ ಅಂಬರೀಶ್ ಒಟ್ಟಿಗಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ಚಿತ್ರವನ್ನು ಶಂಕರ್ ನಿರ್ದೇಶನ ಮಾಡುತ್ತಿದ್ದು. ಈ ಸಿನಿಮಾ ಮೊದಲ ಹಂತದ ಶೂಟಿಂಗ್ ಮುಗಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top