ಸಾಧನೆ

ಈ ಕೆಲಸ ಮಾಡಿ ಡಾ ರಾಜ್ ಕುಮಾರ್ ಮನೆತನದ ಕೀರ್ತಿ ಹೆಚ್ಚಿಸಿದ ಮೊಮ್ಮಗ ಗುರು ಅಲಿಯಾಸ್ ಯುವ ರಾಜ್ ಕುಮಾರ್

ಬಂಗಾರದ ಮನುಷ್ಯ, ಸಂಪತ್ತಿಗೆ ಸವಾಲು, ಭಾಗ್ಯವಂತರು ಹೀಗೆ ಸಾಲು ಸಾಲು ಹಿಟ್ ಚಿತ್ರಗಳಲ್ಲಿ ಅಭಿನಯಿಸಿ ಕರ್ನಾಟಕದ ಜನರ ಹೃದಯದಲ್ಲಿ ಶಾಶ್ವತ ಸ್ಥಾನವನ್ನು ಪಡೆದವರು ಡಾ.ರಾಜ್‌ಕುಮಾರ್. ಇವರ ನೆನಪನ್ನು ಶಾಶ್ವತವಾಗಿ ಹಸಿರು ಉಳಿಯುವಂತೆ ಮಾಡಲು ದೊಡ್ಮನೆ ಯೋಜನೆಯೊಂದನ್ನು ರೂಪಿಸಿಕೊಂಡಿದೆ. ಐ.ಎ.ಐಸ್ ಹಾಗೂ ಐ.ಪಿ.ಎಸ್ ಹುದ್ದೆಯ ಕನಸು ಕಾಣುತ್ತಿರುವ ಕರ್ನಾಟಕ ಪ್ರತಿಭವಂತ ಬಡ ವಿದ್ಯಾರ್ಥಿಗಳಿಗೆ ಅನುಕೂಲಕೊಸ್ಕರ ರಾಜ್ಯದಲ್ಲಿ ಸಿವಿಲ್ ಸರ್ವಿಸ್ ಆಕಾಡೆಮಿಯನ್ನು ಗುರು ರಾಜ್ ಕುಮಾರ ಅವರು ಒಂದು ವರ್ಷದ ಹಿಂದೆ ಪ್ರಾರಂಭ ಮಾಡಿದ್ದಾರೆ.

 

 

 

ಕೆಲವು ದಿನಗಳ ಹಿಂದೆ ಪ್ರಕಟವಾದ ಯು.ಪಿ.ಎಸ.ಸಿ ಫಲಿತಾಂಶದಲ್ಲಿ ರಾಜ್ಯದ 28 ಮಂದಿ ಪಾಸಾಗಿದ್ದಾರೆ ಇದರಲ್ಲಿ 16 ಜನ ಡಾ. ರಾಜ್ ಕುಮಾರ್ ಐಎಎಸ್ ಅಕಾಡೆಮಿಯಲ್ಲಿ ಸಂದರ್ಶನಕ್ಕಾಗಿ ತರಬೇತಿ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

 

 

 

ಡಾ.ರಾಜ್‍ಕುಮಾರ್ ಸಿವಿಲ್ ಸರ್ವಿಸಸ್ ಅಕ್ಯಾಡೆಮಿಯ ವತಿಯಿಂದ ಸಂದರ್ಶನಕ್ಕಾಗಿ ತೆರಳುವವರಿಗೆ ಅಣಕು ಸಂದರ್ಶನ ನಡೆಸಿದ್ದರು. ಇದರಿಂದ ಸಂದರ್ಶನಕ್ಕೆ ತಯಾರಾಗಲು ಅನುಕೂಲ ಆಗಿತ್ತು. ಇಷ್ಟು ದಿನ ಸಿನಿಮಾ ರಂಗದಲ್ಲಿ ಹೆಸರುವಾಸಿ ಆಗಿದ್ದ ರಾಜ ಕುಟುಂಬದವರು ಈಗ ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಮಾಡುತ್ತಿರುವುದು ಸಂತೋಷದ ವಿಚಾರ. ಡಾ.ರಾಜ್‍ಕುಮಾರ್ ಸಿವಿಲ್ ಸರ್ವಿಸಸ್ ಅಕಾಡೆಮಿ ಸೇವೆಯನ್ನು ಇನ್ನು ಹೆಚ್ಚೆಚ್ಚು ಜನ ಸದುಪಯೋಗ ಪಡಿಸಿಕೊಳ್ಳಲಿ ಎಂದು ಹಾರೈಸೋಣ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top