ದೇವರು

ಭಗವದ್ಗೀತೆಯ ಹದಿನೆಂಟು ಅಧ್ಯಾಯಗಳಿಂದ ಈ 18 ಸಂದೇಶಗಳನ್ನ ಕಲಿತ್ಕೊಂಡ್ರೆ ಜೀವನದಲ್ಲಿ ಏನೇ ಬಂದ್ರು ಆರಾಮಾಗಿ ಎದರಿಸಬಹುದು

ಭಗವದ್ಗೀತೆಯ ಹದಿನೆಂಟು ಅಮರ ಸಂದೇಶಗಳು ಹದಿನೆಂಟು ಅಧ್ಯಾಯಗಳನ್ನು ತಿಳಿಸಿಕೊಡುವ ಸಂದೇಶಗಳು ಮತ್ತು ನೀತಿಗಳು ಹೀಗಿವೆ .

 

 

ಅಧ್ಯಾಯ ಒಂದು – ತಪ್ಪು ಚಿಂತನೆಗಳು ಜೀವನದ ಬಹುದೊಡ್ಡ ಶತ್ರುಗಳು .

ಅಧ್ಯಾಯ ಎರಡು – ಉತ್ತಮ ಜ್ಞಾನಕ್ಕೆ ನಮ್ಮ ಎಲ್ಲ ಸಮಸ್ಯೆಗಳನ್ನು ಪರಿಹರಿಸುವ ಮತ್ತು ತೊಡೆದು ಹಾಕುವ ಶಕ್ತಿ ಇರುತ್ತದೆ.

ಅಧ್ಯಾಯ ಮೂರು – ನಿಸ್ವಾರ್ಥ ಮನೋಭಾವವೇ ಅಭಿವೃದ್ಧಿ ಮತ್ತು ಉನ್ನತಿಗೆ ಸೂಕ್ತ ಮಾರ್ಗ.

ಅಧ್ಯಾಯ ನಾಲ್ಕು – ಪ್ರತಿಯೊಂದು ಕಾರ್ಯದಲ್ಲೂ ಪ್ರಾರ್ಥನೆಯ ಭಾವ ತುಂಬಿರಲಿ.

 

 

ಅಧ್ಯಾಯ ಐದು – ವೈಯಕ್ತಿಕ ಅಹಂ ಭಾವನೆಯನ್ನು ಮನಃಪೂರ್ವಕವಾಗಿ ತೊರೆದಾಗ ಮಾತ್ರ ಪರಮಾನಂದದ ಅನುಭವವಾಗುತ್ತದೆ

ಅಧ್ಯಾಯ ಆರು – ಉನ್ನತ ಚಿಂತನೆಗಳು ಅನುದಿನ ನಿಮ್ಮನ್ನು ಆವರಿಸಲಿ.

ಅಧ್ಯಾಯ ಏಳು – ನಿಮ್ಮ ಕಲಿಕೆ ನಿಮ್ಮ ಬದುಕಾಗಲಿ.

ಅಧ್ಯಾಯ ಎಂಟು- ಸೋಲು ಎಂದು ನಿಮ್ಮ ಆಹ್ವಾನ ಪಡೆಯಬಾರದು.

 

 

ಅಧ್ಯಾಯ ಒಂಬತ್ತು – ಇದ್ದುದ್ದರಲ್ಲೇ ಸಂತೃಪ್ತಿ ಅನುಭವಿಸಿ, ಖುಷಿಯ ಮೂಲ  ನಮ್ಮದೇ  ಅಂತರಾತ್ಮ .

ಅಧ್ಯಾಯ ಹತ್ತು – ನಿಮ್ಮ ಒಳಗೆ ಹೊರಗೆ ಸದಾ ದೈವಿಕ ಮನೋಭಾವನೆ ಅನುಸರಣಿಸಲಿ.

ಅಧ್ಯಾಯ ಹನ್ನೊಂದು – ಶರಣಾಗತ ಭಾವವೇ ಸತ್ಯ ದರ್ಶನಕ್ಕೆ ಇಡಬೇಕಾದ ಮೊದಲ ಹೆಜ್ಜೆ .

ಅಧ್ಯಾಯ ಹನ್ನೆರಡು – ನಿಮ್ಮ  ಬುದ್ಧಿ ಮತ್ತು ಹೃದಯವನ್ನು ಸದಾ ಭಗವಂತನಲ್ಲಿ ಕೇಂದ್ರೀಕರಿಸಿ .

ಅಧ್ಯಯನ ಹದಿಮೂರು – ದೈವಿಕ ಭಾವಕ್ಕೆ ಹತ್ತಿರವಾದರೆ ಮಾತ್ರ ಮಾಯೆಯಿಂದ ಮುಕ್ತಿ ಸಾಧ್ಯ.

 

 

ಅಧ್ಯಾಯ ಹದಿನಾಲ್ಕು – ನಿಮ್ಮ  ದೃಷ್ಟಿಕೋನದಂತೆ ನಿಮ್ಮ ಬದುಕು ರೂಪುಗೊಳ್ಳುವುದು.

ಅಧ್ಯಾಯ ಹದಿನೈದು – ದೈವಿಕ ಭಾವನೆ ಸದಾ ನಿಮ್ಮ ಜತೆಗೇ ಇರಲಿ .

ಅಧ್ಯಾಯ ಹದಿನಾರು – ಉತ್ತಮ ನಡವಳಿಕೆಯೇ  ನಿಮಗೆ ದೊರೆತ ಅನುಗ್ರಹ .

ಅಧ್ಯಾಯ ಹದಿನೇಳು – “ಋಜುಮಾರ್ಗ” ಆಥವಾ  “ಅನುಕೂಲ ಸಿಂಧೂ” ನಿಮ್ಮ ಆಯ್ಕೆ ಆತ್ಮಶಕ್ತಿಯ ಲಕ್ಷಣ.

ಅಧ್ಯಾಯ ಹದಿನೆಂಟು – ನಿಮ್ಮಲ್ಲಿ ಅಡಗಿರುವ ದೈವೀ  ಪ್ರಜ್ಞೆಯನ್ನು ಜಾಗೃತಗೊಳಿಸಿ, ಉನ್ನತಿ ಗಳಿಸಿ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top