ಅರೋಗ್ಯ

ಬಿಸಿನೀರಲ್ಲಿ ಕೇವಲ 5 ನಿಮಿಷ ಪಾದ ಅದ್ದಿದರೆ ಯಾವೆಲ್ಲಾ ಪ್ರಯೋಜನ ಆಗುತ್ತೆ ಗೊತ್ತಾ?

ಬಿಸಿನೀರಲ್ಲಿ ಕೇವಲ 5 ನಿಮಿಷ ಪಾದ ಅದ್ದಿದರೆ ಯಾವೆಲ್ಲಾ ಪ್ರಯೋಜನ ಆಗುತ್ತೆ ಗೊತ್ತಾ?

 

 

 

 

 

 

ನಮ್ಮ ಕಾಲುಗಳೇ ನಮ್ಮ ದೇಹಕ್ಕೆ ಆಧಾರಸ್ತಂಭ, ನಮ್ಮ ಇಡೀ ದೇಹ ನಿಂತಿರುವುದೇ ನಮ್ಮ ಪಾದ ಮೇಲೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಆದರೆ ಅದೇ ಪಾದಗಳಿಗೆ ವ್ಯಾಯಾಮ ಮಾಡುವುದರಿಂದ ನಮ್ಮ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂಬ ವಿಷಯ ಎಷ್ಟೋ ಮಂದಿಗೆ ತಿಳಿದೇ ಇಲ್ಲ. ಪ್ರತಿದಿನ ನೀವು ಯಾವಾಗ್ಯಾವಾಗ ಫ್ರೀ ಇರ್ತೇರೋ ಅವಾಗ, ಟಿವಿ ನೋಡ್ತಿರ್ವಾಗ ಅಥವಾ ನ್ಯೂಸ್ ಪೇಪರ್ ಓದುವಾಗ ನಿಮ್ಮ ಪಾದಗಳನ್ನು ಹದಿನೈದು ನಿಮಿಷಗಳ ಕಾಲ ಬಿಸಿನೀರಿಗೆ ಇಟ್ಟು ಅದ್ದುವುದರಿಂದ ನಿಮ್ಮ ಆರೋಗ್ಯವನ್ನು ಇಮ್ಮಡಿಸಿಕೊಳ್ಳಬಹುದು. ಹೀಗೆ ಮಾಡುವುದರಿಂದ ಯಾವೆಲ್ಲಾ ಪ್ರಯೋಜನಗಳನ್ನು ಪಡ್ಕೋಬೋದು ಎಂದು ತಿಳಿದುಕೊಳ್ಳಲು ಮುಂದೆ ಓದಿ

.

 

 

 

 

1.ಹಿಮ್ಮಡಿ ಒಡೆಯುವುದು ತಪ್ಪುತ್ತದೆ:

 

 

 

 

ಚಳಿಗಾಲದಲ್ಲಿ ಚರ್ಮ,ಪಾದದ ಹಿಮ್ಮಡಿ ಒಡೆದು ಅಸಹ್ಯವಾಗಿ ಕಾಣಿಸಿಕೊಳ್ಳುವುದು ಎಲ್ಲರಲ್ಲೂ ಇರುವ ಸಾಮಾನ್ಯ ಸಮಸ್ಯೆಯಾಗಿದೆ.ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಬಿಸಿ ನೀರಿನಲ್ಲಿ ನಿಮ್ಮ ಪಾದವನ್ನು ಸುಮಾರು ಹದಿನೈದು ನಿಮಿಷಗಳಷ್ಟು ಕಾಲ ಅದ್ದಿಕೊಂಡಿದ್ದರೆ ಸಾಕು.

 

 

 

2.ಶೀತ ಮತ್ತು ನೆಗಡಿಯ ಹತೋಟಿ:

 

 

 

ಶೀತ,ನೆಗಡಿ ಮತ್ತು ಕಫ ಸಮಸ್ಯೆಯಿಂದ ನೀವು ಬಳಲುತ್ತಿದ್ದರೆ ನಿಮ್ಮ ಪಾದಗಳನ್ನು ಹದಿನೈದು ನಿಮಿಷಗಳ ಕಾಲ ಬಿಸಿನೀರಿನಲ್ಲಿ ಹಾಕಿ ಹದ್ದಿಕೊಂಡು ಮೂಗಿನ ಮೂಲಕ ಹಬೆಯನ್ನು ತೆಗೆದುಕೊಳ್ಳುವುದರಿಂದ ಬಹು ಬೇಗ ನಿಮ್ಮ ನಿಮ್ಮ ಕಟ್ಟಿದ ಮೂಗು, ಶೀತ,ನೆಗಡಿ ಸಮಸ್ಯೆಗಳು ಹತೋಟಿಗೆ ಬರುತ್ತವೆ. ಕಫ ಸಮಸ್ಯೆಕೂಡ ಕಡಿಮೆಯಾಗುತ್ತದೆ.

 

3.ಕುತ್ತಿಗೆ ನೋವಿನ ಶಮನ:

 

 

 

ಈಗ ಕುತ್ತಿಗೆ ನೋವು ಹಲವರಲ್ಲಿ ಕಂಡುಬರುತ್ತಿದೆ. ನರಮಂಡಲದ ಮೂಲ ನರಗಳು ಪಾದ ಮತ್ತು ಅಂಗೈನಲ್ಲೂ ಸಹ ಇರುವುದರಿಂದ ಪಾದವನ್ನು ಹದಿನೈದು ನಿಮಿಷಗಳ ಕಾಲ ಬಿಸಿನೀರಿನಲ್ಲಿ ಅದ್ದಿಕೊಂಡರೆ ಕುತ್ತಿಗೆ ನೋವು ಮತ್ತು ಕುತ್ತಿಗೆಯ ಸೆಳೆತಗಳು ಮಾಯವಾಗುತ್ತದೆ.

 

4.ಒತ್ತಡದ ನಿವಾರಣೆ:

 

 

 

 

ಬಿಸಿ ನೀರಿನಲ್ಲಿ ನಮ್ಮ ಪಾದಗಳನ್ನು ಸುಮಾರು ಹದಿನೈದು ನಿಮಿಷಗಳ ಹೊತ್ತು ಅದ್ದಿಕೊಂಡು ಕುಳಿತುಕೊಳ್ಳುವುದರಿಂದ ದೇಹದಲ್ಲಿ ರಕ್ತ ಪರಿಚಲನೆ ಚುರುಕುಗೊಂಡು ಮಾನಸಿಕ ಮತ್ತು ದೈಹಿಕ ಒತ್ತಡವು ಕಡಿಮೆಯಾಗುತ್ತದೆ.

 

5.ತಲೆನೋವು ಕಡಿಮೆಯಾಗುತ್ತದೆ:

 

 

 

 

ಪಾದಗಳನ್ನ ಬಿಸಿ ನೀರಿನಲ್ಲಿ ಸುಮಾರು ಹದಿನೈದು ನಿಮಿಷಗಳ ಕಾಲ ಅದ್ದಿದಾಗ ಪಾದಕ್ಕೆ ರಕ್ತ ಸಂಚಾರ ಹೆಚ್ಚಾಗುವುದರಿಂದ ಕತ್ತಿನ ಮತ್ತು ಬೆನ್ನಿನ ಸ್ನಾಯುಗಳು ಸಡಿಲವಾಗುತ್ತದೆ. ಹಾಗಾಗಿ ಒತ್ತಡದಿಂದ ಉಂಟಾದ ತಲೆನೋವು ದೂರವಾಗುತ್ತದೆ.

 

6.ನಿದ್ರಾಹೀನತೆಯನ್ನು ಹೋಗಲಾಡಿಸುತ್ತದೆ:

 

 

 

 

ರಾತ್ರಿ ನೀವು ಮಲಗುವ ಮುಂಚೆ ಹದಿನೈದು ನಿಮಿಷಗಳ ಕಾಲ ನಿಮ್ಮ ಪಾದವನ್ನು ಬಿಸಿನೀರಿನಲ್ಲಿ ಅದ್ದಿಕೊಂಡು ಕುಳಿತುಕೊಳ್ಳುವುದರಿಂದ ನಿಮ್ಮ ಒತ್ತಡ ಕಡಿಮೆಯಾಗಿ ನಿಮ್ಮ ನಿದ್ರಾ ಹೀನತೆಯ ಸಮಸ್ಯೆಗೆ ಪರಿಹಾರ ತಂದುಕೊಟ್ಟು ಮತ್ತು ನಿದ್ರೆಯು ಚನ್ನಾಗಿ ಬರುತ್ತದೆ

 

7.ಹಿಮ್ಮಡಿ ನೋವಿಗೆ ಪರಿಹಾರ:

 

 

 

 

ನೀವು ಹೆಚ್ಚು ಕೆಲಸಮಾಡಿದಾಗ ನಿಮಗೆ ಹಿಮ್ಮಡಿ ನೋವು ಬರುವುದು ಸಾಮಾನ್ಯ. ಈ ರೀತಿ ಹಿಮ್ಮಡಿ ನೋವು ಬಂದಾಗ ನಿಮ್ಮ ಎರಡು ಪಾದಗಳನ್ನು ಬಿಸಿನೀರಿನಲ್ಲಿ ಅದ್ದಿಕೊಳ್ಳುವುದರಿಂದ ಹಿಮ್ಮ ನೋವು ಬಹು ಬೇಗ ಮಾಯವಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top