ಅರೋಗ್ಯ

ದಾಸವಾಳ ಹೂವು ಬರಿ ದೇವ್ರ ಪೂಜೆಗೆ ಮಾತ್ರ ಅಲ್ಲ ಇನ್ನು ಬೇರೆ ಕೆಲಸಗಳಿಗೂ ಬಳ್ಸ್ಕೊಳ್ಳಿ 10 ಕ್ಕೂ ಹೆಚ್ಚು ಆರೋಗ್ಯಕರ ಲಾಭಗಳು ಪಡ್ಕೊಳ್ಳಿ..

ದಾಸವಾಳ ಹೂವು ಬರಿ ದೇವ್ರ ಪೂಜೆಗೆ ಮಾತ್ರ ಅಲ್ಲ ಇನ್ನು ಬೇರೆ ಕೆಲಸಗಳಿಗೂ ಬಳ್ಸ್ಕೊಳ್ಳಿ 10 ಕ್ಕೂ ಹೆಚ್ಚು ಆರೋಗ್ಯಕರ ಲಾಭಗಳು ಪಡ್ಕೊಳ್ಳಿ..

 

ದಾಸವಾಳದ ಎಲೆ ಜೊತೆ ಹೂವನ್ನು ಹಾಕಿ ಪೇಸ್ಟ್ ರೀತಿ ಮಾಡಿ ತಲೆಗೆ ಹಚ್ಚಿದರೆ ಕೂದಲು ಸೊಂಪಾಗಿ ಬೆಳೆಯುವುದು, ಅಕಾಲಿಕ ನೆರಿಗೆ ಉಂಟಾಗುವುದನ್ನು ತಪ್ಪಿಸಬಹುದು. ಅಲ್ಲದೆ ಇದು ನೈಸರ್ಗಿಕವಾದ ಕಂಡೀಷನರ್ ಆಗಿದ್ದು ಕೂದಲಿನ ಹೊಳಪನ್ನು ಹೆಚ್ಚಿಸುತ್ತದೆ, ತಲೆಹೊಟ್ಟು ನಿವಾರಿಸಿ, ಇದು ಕೂದಲಿಗೆ ಕಪ್ಪು ಬಣ್ಣ ನೀಡುತ್ತದೆ.

 

 

ಸ್ವಲ್ಪ ತೆಂಗಿನೆಣ್ಣೆಗೆ 7-8 ಬಿಳಿ ದಾಸವಾಳದ ಎಲೆ ಹಾಕಿ ಕಾಯಿಸಿ ತಣಿಸಿ ಕೂದಲಿಗೆ ಹಚ್ಚಿ ನಂತರ ಸ್ನಾನ ಮಾಡಿದರೆ ಕೂದಲಿಗೆ ಹೊಳಪು ಬರುತ್ತದೆ.ಎಣ್ಣೆಯಲ್ಲಿ ದಾಸವಾಳ ಹೂವನ್ನು ಹಾಕಿ ಕಾಯಿಸಿ, ಆ ಎಣ್ಣೆಯನ್ನು ಬಳಸಿದರೆ ಕೂದಲು ಉದುರುವ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು .

 

 

 

ಹತ್ತು ಬಿಳಿ ದಾಸವಾಳದ ಒಂದು ಹಿಡಿ ಹೂವು ಮತ್ತು ಎಲೆಗಳನ್ನು ಚೆನ್ನಾಗಿ ನೀರಿನಲ್ಲಿ ನೆನೆಸಿ ಅರೆದು ಬೆಲ್ಲದ ಜೊತೆ ಅಥವಾ ಕಲ್ಲು ಸಕ್ಕರೆಯ ಜೊತೆ ಸೇರಿಸಿ ದಿನಕ್ಕೆ ಮೂರು ಬಾರಿ ಏಳು ದಿನಗಳು ಕುಡಿಯಬೇಕು . ಬೆಳಗ್ಗೆ ಸೇವಿಸುವಾಗ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು .

 

 

 

ಬಿಳಿ ದಾಸವಾಳದ ಹೂವನ್ನು ( 4 – 6 ) ಸಕ್ಕರೆ ಬೆರೆಸಿ ಅರೆದು ಸೇವಿಸಿದರೆ ಸ್ತ್ರೀಯರ ಬಿಳಿ ಮುಟ್ಟಿನ ಸ್ರಾವ ನಿವಾರಣೆಯಾಗುತ್ತದೆ.

ದಾಸವಾಳದ ಟೀ ಕುಡಿಯುವವವರಿಗೆ ಅಧಿಕ ರಕ್ತದೊತ್ತಡದ ಸಮಸ್ಯೆ ಉಂಟಾಗುವುದಿಲ್ಲ.

 

 

 

 

ಇದರ ಹೂವಿನಿಂದ ಟೀ ಮಾಡಿ ಕುಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕಿಡ್ನಿ ಸಮಸ್ಯೆ ಬರದಂತೆ ತಡೆಯಲು, ಕಿಡ್ನಿಯಲ್ಲಿ ಕಲ್ಲು ಉಂಟಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ. ಖಿನ್ನತೆಯನ್ನು ಹೋಗಲಾಡಿಸುವಲ್ಲಿಯೂ ಸಹಕಾರಿ.

 

 

 

ಬಿಳಿ ದಾಸವಾಳದ ಎಲೆಗಳನ್ನು ನೀರಿನಲ್ಲಿ ಹಾಕಿ ಕಿವುಚಿ ಬರುವ ರಸಕ್ಕೆ ಬೆಲ್ಲ ,ಹಾಲು ಹಾಕಿ ಕುಡಿದರೆ ದೇಹದ ಉಷ್ಣ ಕಡಿಮೆ ಆಗುತ್ತದೆ.

ಬಿಳಿ ದಾಸವಾಳ ಎಲ್ಲಕ್ಕಿಂತ ಹೆಚ್ಚು ಔಷಧೀಯ ಗುಣಗಳನ್ನು ಹೊಂದಿದೆ. ಹೂವುಗಳನ್ನು ಬೇವಿನ ಮರದ ಅಡಿಯಲ್ಲಿ (ನೆರಳಿನಲ್ಲಿ) ಒಣಗಿಸಬೇಕು. ನಂತರ ಇದನ್ನು ಪುಡಿ ಮಾಡಿ ಸೇವಿಸಿದರೆ ಎಲ್ಲ ಬಗೆಯ ಕ್ಯಾನ್ಸರ್‌ಗಳಿಗೆ ಉಪಶಮನಕಾರಿ.

 

 

 

 

ಶೀತ, ಕೆಮ್ಮು, ತಲೆನೋವು ಕಾಣಿಸಿದಾಗ ದಾಸವಾಳ ಹೂವನ್ನು ತಿಂದರೆ ಅಥವಾ ಅದರಿಂದ ಟೀ ಮಾಡಿ ಕುಡಿದರೆ ಈ ಸಣ್ಣ-ಪುಟ್ಟ ಸಮಸ್ಯೆಗಳಿಂದ ಪಾರಾಗಬಹುದು.

 

 

ಹೂವು ಹಾಗೂ ಎಲೆಗಳನ್ನು ಒಣಗಿಸಿ, ಸುಟ್ಟ ಬಳಿಕ ಸಿಗುವ ಬೂದಿಯನ್ನು ಹಚ್ಚಿದರೆ, ಕಣ್ಣಹುಬ್ಬುಗಳು ಹೊಳಪು ಪಡೆಯುತ್ತವೆ

ಸನ್ ಸ್ಕ್ರೀನ್ ಕ್ರೀಂಗಳಲ್ಲೂ ಮತ್ತು ಇತರ ಸೌಂದರ್ಯವರ್ಧಕಗಳಲ್ಲೂ ಬಳಸಬಹುದು, ವಯಸ್ಸಾಗುತ್ತಿದ್ದಂತೆ ನೆರಿಗೆ ಬೀಳುವುದು ಸಹಜ, ಆದರೆ ಕೆಲವರು ಚಿಕ್ಕ ಪ್ರಾಯದಲ್ಲಿಯೇ ವಯಸ್ಸಾದವರಂತೆ ಕಾಣುತ್ತಾರೆ. ದಾಸವಾಳದ ಟೀ ಕುಡಿದರೆ ಈ ರೀತಿಯ ಅಕಾಲಿಕ ಮುಪ್ಪು ಉಂಟಾಗುವುದನ್ನು ತಡೆಯಬಹುದು, ಮೊಡವೆ ಕಡಿಮೆ ಮಾಡಲು ದಾಸವಾಳ ಸಿದ್ದ ಮದ್ದು .

 

 

 

 

ದಾಸವಾಳದ ಟೀ ಕುಡಿಯುವುದರಿಂದ ಮೈಯ ಬೊಜ್ಜು ಕೂಡ ಕಮ್ಮಿಯಾಗುವುದು. ಅಲ್ಲದೆ ಜೀರ್ಣಕ್ರಿಯೆ ಸರಿಯಾಗಿ ನಡೆಯಲು ಸಹಾಯ ಮಾಡುತ್ತದೆ, ಅಧಿಕ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಆದ್ದರಿಂದ ಹೃದಯಾಘಾತದ ಅಪಾಯವನ್ನು ತಪ್ಪಿಸುತ್ತದೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top