ಅರೋಗ್ಯ

ಹೊಲಗಳಲ್ಲಿ ಬೇಕಾಬಿಟ್ಟಿ ಸಿಗೋ ಹೊನಗೊನ್ನೆ ಸೊಪ್ಪು ಕಣ್ಣಿನ ಸಮಸ್ಯೆಗೆ ಮಾತ್ರ ಅಲ್ಲ ಇನ್ನು11 ಕೆಲಸಕ್ಕೆ ಉಪಯೋಗಕ್ಕೆ ಬರುತ್ತೆ

ಸಾಮಾನ್ಯವಾಗಿ ಹೊಲಗಳಲ್ಲಿ ಹೇರಳವಾಗಿ ಸಿಗುವ ಈ ಹೊನಗೊನ್ನೆ ಸೊಪ್ಪು  ಆಯುರ್ವೇದ ಶಾಸ್ತ್ರದಲ್ಲಿ ಸಂಸ್ಕೃತ ದಲ್ಲಿ ಮತ್ಸ್ಯಾಕ್ಷಿ ಎಂದು ಕರೆಯಲ್ಪಡುವ ಈ ಸೊಪ್ಪು  ತನ್ನ ಔಷಧಿ ಗುಣಗಳಿಂದ ಪ್ರಖ್ಯಾತಿ ಹೊಂದಿದೆ .

ಐದು ಶೇ  ಪ್ರೋಟಿನ್ ಹಾಗೂ ಶೇ ಹದಿನಾರು ಮಿಲಿಗ್ರಾಂ ನಷ್ಟು ಕಬ್ಬಿಣಾಂಶ ಹೊಂದಿದೆ ಕಣ್ಣಿನ ಕೂದಲಿನ ಚರ್ಮದ ಸಮಸ್ಯೆಗೆ ಇದು ರಾಮಬಾಣ ಅಷ್ಟೇ ಅಲ್ಲದೆ ಕೆಮ್ಮು ನೆಗಡಿ ಸಕ್ಕರೆ ಕಾಯಿಲೆ ಮೂಲ  ಸಮಸ್ಯೆಗೂ  ಪರಿಹಾರವಾಗಿದೆ

ಹೊನಗೊನ್ನೆ ಸೊಪ್ಪಿನ ಉಪಯೋಗಗಳು 

ಿನಗಳು  ಎರಡು ಚಮಚ ಬೇಯಿಸಿದ ಸೊಪ್ಪಿನ ರಸವನ್ನು ನಲವತ್ತೈದು ದಿನಗಳು ತಪ್ಪದೇ ಸೇವಿಸಿದರೆ ಕಣ್ಣಿನ ದೋಷ ದೂರವಾಗುತ್ತದೆ .

ಈ ಸೊಪ್ಪಿನ ಹೂವುಗಳನ್ನು ಸೇವಿಸಿದರೆ  ಇರುಳು ಕುರುಡುತನ ವಾಸಿಯಾಗುತ್ತದೆ.

ಕಣ್ಣಲ್ಲಿ ನೀರು ಸೋರುವುದು ಕಣ್ಣಿನ ಊತ ,ಕ್ಯಾಟರಾಕ್ಟ್ ಸಮಸ್ಯೆ ವಾಸಿಯಾಗುತ್ತದೆ.

ಈ ಸೊಪ್ಪಿನ ರಸವನ್ನು ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆಯಲ್ಲಿ ಮಿಶ್ರಣ ಮಾಡಿ ತಲೆಗೆ ಹಚ್ಚಿಕೊಂಡರೆ ಕಣ್ಣಿನ ಸಮಸ್ಯೆ ದೂರವಾಗುತ್ತದೆ ಮತ್ತು ನೆನಪಿನ ಶಕ್ತಿ ವೃದ್ಧಿಯಾಗುತ್ತದೆ .

ಈ ಸೊಪ್ಪಿನ ಬೇರುಗಳು ಹುಳಿತೇಗು  ಸಮಸ್ಯೆಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ.

ರಕ್ತದೊತ್ತಡ ಹೆಚ್ಚಿರುವವರು  ಈ ಸೊಪ್ಪನ್ನು ಸೇವಿಸುತ್ತಿದ್ದರೆ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.

ಚರ್ಮದ ಕಜ್ಜಿ ಗುಳ್ಳೆ ಮೊಡವೆ ಸಮಸ್ಯೆಗಳಿಗೆ ಔಷಧಿಯಾಗಿ ಬಳಕೆಯಾಗುತ್ತದೆ.

ಜೀರ್ಣ ಸಮಸ್ಯೆಯನ್ನು ಹೋಗಲಾಡಿಸುತ್ತದೆ ಮತ್ತು ಈ ಸೊಪ್ಪಿನಲ್ಲಿರುವ ನಾರಿನಂಶ ಸಕ್ಕರೆ ಕಾಯಿಲೆಯನ್ನು ದೂರ ತಳ್ಳುತ್ತದೆ .

ಈ ಗಿಡದ ಬೇರನ್ನು ಹಾಲಿನಲ್ಲಿ ಅರೆದು  ಕುಡಿಯುವುದರಿಂದ ಮೂತ್ರ ವಿಸರ್ಜನೆ ಸಮಸ್ಯೆ ನಿವಾರಣೆಯಾಗುತ್ತದೆ .

ಈ ಸೊಪ್ಪಿನ ರಸ ಮತ್ತು ಮೂಲಂಗಿ ಸೊಪ್ಪಿನ ರಸ ಹತ್ತು ಗ್ರಾಂ ಮಿಶ್ರಣ ಮಾಡಿ ಚಿಟಿಕೆ ಸೈಂಧವ ಲವಣ ಸೇರಿಸಿ ಕುಡಿದರೆ ಮೂಲವ್ಯಾಧಿ ಸಮಸ್ಯೆ ನಿವಾರಣೆಯಾಗುತ್ತದೆ .

ಸ್ತ್ರೀಯರ ಮುಟ್ಟಿನ ಸಮಸ್ಯೆ ನಿವಾರಣೆಗೆ ಈ ಗಿಡದ ಬೇರನ್ನು ಅರೆದು ಬೆಲ್ಲವನ್ನು ಮಿಶ್ರಣ ಮಾಡಿ ತಿಂದರೆ ಒಳ್ಳೆಯದು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top