ಮನೋರಂಜನೆ

ಕನ್ನಡದ ಈ ಸ್ಟಾರ್ ನಟಿಗೆ ಕಿಚ್ಚಾ ಸುದೀಪ್ ರೋಲ್ ಮಾಡೆಲ್ ಅಂತೇ!

ಅಭಿಮಾನಿಗಳಿಂದ ಸ್ಟೈಲಿಶ್ ಕಿಂಗ್ ಎಂದೇ ಕರೆಸಿಕೊಳ್ಳುವ ನಟ ಕಿಚ್ಚ ಸುದೀಪ್ ಕನ್ನಡ ಚಿತ್ರರಂಗದ ಸುರಸುಂದರ ನಟ ಎನ್ನುವುದರಲ್ಲಿ ಎರಡು ಮಾತಿಲ್ಲ.. ತಮ್ಮ ಗಡಸು ಧ್ವನಿ, ಭಿನ್ನವಿಭಿನ್ನವಾದ ಹೇರ್ ಸ್ಟೈಲ್, ಆನ್ ಸ್ಕ್ರೀನ್ ಅಂಡ್ ಆಫ್ ಸ್ಕ್ರೀನ್ ಮ್ಯಾನರಿಸಂನಿಂದಲೇ ಸಾವಿರಾರು ಹುಡುಗಿಯರಿಗೆ ಹುಚ್ಚು ಹಿಡಿಸಿದ್ದಾರೆ ಸುದೀಪ್. ಸ್ಯಾಂಡಲ್ ವುಡ್’ನ ಬಹುತೇಕ ಎಲ್ಲಾ ಯುವ ನಟ ನಟಿಯರಿಗೆ ಕಿಚ್ಚನೇ ಹಾಟ್ ಫೆವರೇಟ್, ಇದು ಸಾಕಷ್ಟು ಭಾರಿ ಸಾಭೀತಾಗುತ್ತಲೇ ಇರುತ್ತದೆ..ಅದು ಮತ್ತೊಮ್ಮೆ ಸಾಭೀತಾಗಿದೆ.

 

 

ಶಿವಣ್ಣ ನಡೆಸಿಕೊಡುತ್ತಿರುವ ಸ್ಟಾರ್ ಸುವರ್ಣ ಚಾನೆಲ್ ನಲ್ಲಿ ಮೂಡಿಬರುತ್ತಿರುವ ನಂ 1 ಯಾರಿ ವಿತ್ ಶಿವಣ್ಣ ಕಾರ್ಯಕ್ರಮದ ನೆನ್ನೆಯ ಸಂಚಿಕೆಯಲ್ಲಿ ನಟಿಯರಾದ ರಕ್ಷಿತಾ ಮತ್ತು ರಾಗಿಣಿ ಅಥಿತಿಗಳಾಗಿ ಬಂದಿದ್ದರು. ಸ್ವಲ್ಪ ಮೋಜು ಮಸ್ತಿ ಹರಟೆಗಳೊಂದಿಗೆ ಮಾತುಕತೆ ನಡೆಸುವ ಈ ಕಾರ್ಯಕ್ರಮದಲ್ಲಿ ಶಿವಣ್ಣ ಕೇಳುವ ಥರಥರ ಪ್ರಶ್ನೆಗಳಿಗೆ ಅಥಿತಿಗಳು ಮುಕ್ತವಾಗಿ ಉತ್ತರ ಕೊಡಬೇಕು ಎನ್ನುವುದು ಕಾರ್ಯಕ್ರಮದ ನಿಯಮ. ಅದರಂತೆ ರಾಗಿಣಿ ಮತ್ತು ರಕ್ಷಿತಾ ಕೂಡ ತಮ್ಮ ಕುರಿತಾತ ಕೆಲವು ಇಂಟರೆಸ್ಟಿಂಗ್ ವಿಚಾರಗಳನ್ನು ಶಿವಣ್ಣನ ಮುಂದೆ ಬಿಚ್ಚಿಟ್ಟಿದ್ದಾರೆ.

 

 

ಕಾರ್ಯಕ್ರಮದ ಮೂರನೇ ಹಂತವಾದ ರ್ಯಾಪಿಡ್ ಫೇರ್ ಸುತ್ತಿನಲ್ಲಿ ರಾಗಿಣಿಯವರಿಗೆ ಶಿವಣ್ಣ “ನಿಮಗೆ ನಟನೆಯಲ್ಲಿ ರೋಲ್ ಮಾಡೆಲ್ ನಟ ಯಾರು?” ಎಂದು ಕೇಳಿದರು ಅದಕ್ಕೆ ರಾಗಿಣಿ “ಕಿಚ್ಚಾ ಸುದೀಪ್ ಅವರೇ ನನಗೆ ರೋಲ್ ಮಾಡೆಲ್. ಅವರು ಒಬ್ಬ ಅಧ್ಭುತ ನಟ” ಎಂದು ಉತ್ತರ ನೀಡಿದರು. ಕಿಚ್ಚನಿಂದಲೇ ಚಿತ್ರರಂಗಕ್ಕೆ ಎಂಟ್ರಿ ಪಡೆದುಕೊಂಡ ರಾಗಿಣಿಗೆ ಕಿಚ್ಚನೆ ಪ್ರೇರಣೆಯಾಗಿದ್ದಾರೆ ಎಂಬ ವಿಚಾರ ಬಹಿರಂಗಗೊಂಡಿತು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top