ರಾಜಕೀಯ

ಹ್ಯಾರಿಸ್ ಭವಿಷ್ಯ ಸಿದ್ದರಾಮಯ್ಯ ಕೈಯಲ್ಲಿ: ಸಿದ್ದರಾಮಯ್ಯ ಕನ್ನಡಿಗರ ಪರವೋ ಅಥವಾ ಹ್ಯಾರಿಸ್ ಪರವೋ

ನಿನ್ನೆ ರಾತ್ರಿ ಅಳೆದು ತೂಗಿ ಕೊನೆಗೂ ಕಾಂಗ್ರೆಸ್ ಕೊನೆಗೂ ವಿಧಾನಸಭೆ ಚುನಾವಣೆಗೆ ತನ್ನ ಅಭ್ಯರ್ಥಿಗಳ ಪ್ರಥಮ ಪಟ್ಟಿ ಬಿಡುಗಡೆ ಮಾಡಿದೆ. ಆದರೆ ಅದರ ಕೆಲವೆಡೆ ಬಂಡಾಯವು ಶುರುವಾಗಿದೆ. ಇನ್ನು ಶಾಂತಿನಗರ ಶಾಸಕ ಹ್ಯಾರಿಸ್ ಹೆಸರು ಪಟ್ಟಿಯಲ್ಲಿ ಇಲ್ಲ. ಹ್ಯಾರಿಸ್ ಭವಿಷ್ಯ ಈಗ ಸಿದ್ದರಾಮಯ್ಯ ಕೈಯಲ್ಲಿದೆ ಕಾಂಗ್ರೆಸ್ ಹೈ ಕಮಾಂಡ್ ಟಿಕೆಟ್ ಹ್ಯಾರಿಸ್ ಗೆ ಟಿಕೆಟ್ ಕೊಡಬೇಕೋ ಅಥವಾ ಬೇಡವೋ ಎಂಬ ನಿರ್ಧಾರವನ್ನು ಸಿದ್ದರಾಮಯ್ಯನವರ ಮೇಲೆ ಬಿಟ್ಟಿದೆ ಎನ್ನಲಾಗಿದೆ.

 

 

ಮಗ ಮೊಹಮ್ಮದ್ ನಲಪಾಡ್ ಮಾಡಿರುವ ಹಲ್ಲೆ ಪ್ರಕರಣದಿಂದಾಗಿ ಈ ಬಾರಿ ಹ್ಯಾರಿಸ್ ಗೆ ಟಿಕೆಟ್ ನೀಡಬೇಡಿ ಎಂದು ಕಾಂಗ್ರೆಸ್ ಪಕ್ಷದ ಕೆಲವು ನಾಯಕರೇ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಹ್ಯಾರಿಸ್ ಗೆ ಇನ್ನು ಟಿಕೆಟ್ ಘೋಷಣೆ ಆಗಿಲ್ಲ. ಶಾಂತಿ ನಗರ ಕ್ಷೇತ್ರದಲ್ಲಿ ಯಾವುದೇ ಅಭ್ಯರ್ಥಿಯನ್ನು ಇನ್ನು ಘೋಷಣೆ ಮಾಡಿಲ್ಲ. ಸಿದ್ದರಾಮಯ್ಯ ಕೊನೆ ಕ್ಷಣದಲ್ಲಿ ಹ್ಯಾರಿಸ್ ಗೆ ಟಿಕೆಟ್ ನೀಡುತ್ತಾರಾ ಅಥವಾ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.

 

ಮೊದಲ ಪಟ್ಟಿಯಿಂದ ಹ್ಯಾರಿಸ್ ಹೆಸರು ಕೈ ಬಿಟ್ಟಿರುವುದರಿಂದ ಕಳವಳಗೊಂಡಿರುವ ಹ್ಯಾರಿಸ್ ಸಿದ್ದರಾಮಯ್ಯನವರ ಮನೆಗೆ ಮೊನ್ನೆ ರಾತ್ರಿ ಭೇಟಿ ನೀಡಿ ಸುದೀರ್ಘ ಮಾತುಕತೆ ಮಾಡಿದ್ದಾರೆ.

 

 

ಒಂದು ವೇಳೆ ಸಿದ್ದರಾಮಯ್ಯ ಹ್ಯಾರಿಸ್ ಗೆ ಟಿಕೆಟ್ ನೀಡಿದರೆ,  ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಬಹುದು ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top