ಅರೋಗ್ಯ

ಪೈನಾಪಲ್ ಹಣ್ಣನ್ನು ತಿಂದು ಈ ಅದ್ಭುತ ಅರೋಗ್ಯ ಪ್ರಯೋಜನಗಳನ್ನ ಪಡ್ಕೊಳಿ.

ಬಹೋಪಯೋಗಿ ಅನಾನಸ್
ಮುಳ್ಳಿನಂತಹ ಹೊರಹೊದಿಕೆಯುಳ್ಳ ಹಣ್ಣಿದು. ಹಾಗೆಂದೊಡನೆ ತಕ್ಷಣ ಇದು ಹಲಸಿನಹಣ್ಣು ಎಂದುಕೊಳ್ಳಬೇಡಿ. ಇದು ಅನಾನಸ್ ಹಣ್ಣು. ಒಳಗೆ ಸಿಹಿ-ಹುಳಿ ಮಿಶ್ರಿತ ರುಚಿ, ನೋಡಲು ಬಂಗಾರದ ಬಣ್ಣದ ಹಣ್ಣಿನಲ್ಲಿರುವುದೆಲ್ಲ ಬರೀ ಪೌಷ್ಟಿಕಾಂಶವೇ. ಇದರ ಸಿಪ್ಪೆ ಗಟ್ಟಿ ಹಾಗೂ ಒರಟಾಗಿರುವುದ-ರಿಂದ ಬೇರೆ ಹಣ್ಣುಗಳಂತೆ ಸುಲಭವಾಗಿ ಬಿಡಿಸಿ-ತಿನ್ನಲು ಸಾಧ್ಯವಿಲ್ಲ. ಹಾಗೆಂದುಕೊಂಡು ತಿನ್ನದೇ ಇದ್ದರೆ ಇದರಲ್ಲಿರುವ ಪೌಷ್ಟಿಕಾಂಶದಿಂದ ವಂಚಿತರಾಗುವುದು ಖಂಡಿತ. ಆದರೆ ತಿನ್ನುವ ಮುಂಚೆ ಹದವಾದ ಉಪ್ಪುಮಿಶ್ರಿತ ಬಿಸಿ ನೀರಿನಲ್ಲಿ ತೊಳೆದು, ಸಿಪ್ಪೆ ಪೂರಾ ತೆಗೆದು ತಿನ್ನವುದು ಒಳ್ಳೆಯದು. ಹಾಗೆ ಮಾಡದಿದ್ದರೆ ನಾಲಿಗೆ ಕಡಿತ ಬರುತ್ತದೆ.ಅನಾನಸ್ ಪೌಷ್ಟಿಕಾಂಶಭರಿತವಾಗಿದ್ದು ಮಾಂಸಾಹಾರದಲ್ಲಿರುವ ಕಿಣ್ವಗಳಿರುತ್ತವೆ. ಇದು ಹುಳಿ ಮಿಶ್ರಿತವಾಗಿರುವುದರಿಂದ ಯಥೇಚ್ಛವಾದ ವಿಟಮಿನ್ ಸಿ ಹಾಗೂ ನಾರಿನಂಶ ಇದೆ.

Image result for pineapple

ಮೆದುಳಿಗೆ ಅಗತ್ಯವಾದ ಮ್ಯಾಂಗನೀಸ್, ಫ್ರುಟ್ಕೋಸ್ ಹಾಗೂ ಗ್ಲುಕೋಸ್‍ಗಳಂತಹ ನೈಸರ್ಗಿಕ ಸಕ್ಕರೆ ಅಂಶಗಳನ್ನು ಅನಾನಸ್ ಒಳಗೊಂಡಿದೆ. ಇದನ್ನು ಹಾಗೇ ತಿನ್ನಬಹುದು, ಜೊತೆಗೆ ಬೇರೆ ಹಣ್ಣುಗಳೊಂದಿಗೆ ಸೇರಿಸಿ ಫ್ರೂಟ್ ಸಲಾಡ್ ತಯಾರಿಸಿ, ಉಳಿದ ಆಹಾರ ಪದಾರ್ಥಗಳಿಗೆ ಸೇರಿಸಿ ತಿನ್ನಬಹುದು. ಜ್ಯೂಸ್ ಮಾಡಿಯೂ ಕುಡಿಯಬಹುದು. ಹೇಗೆ ಸೇವಿಸಿದರೂ ಅನಾನಸ್‍ನಲ್ಲಿರುವ ಪೌಷ್ಟಿಕಾಂಶಗಳು ಶರೀರಕ್ಕೆ ಸೇರುತ್ತದೆ.

ಊಟದ ನಂತರ ಅನಾನಸ್‍ಗೆ ಸ್ವಲ್ಪ ಉಪ್ಪು, ಕರಿಮೆಣಸಿನ ಪುಡಿ ಉದುರಿಸಿ ಸೇವಿಸುವುದರಿಂದ ಅಜೀರ್ಣ ಸಮಸ್ಯೆ ಇಲ್ಲವಾಗುತ್ತದೆ. ಕಾಳುಮೆಣಸಿನ ಪುಡಿ ಹಚ್ಚಿ ಅನಾನಸ್ ಸೇವಿಸುವುದರಿಂದ ಆಮ್ಲಪಿತ್ತ ನಿವಾರಣೆಯಾಗುತ್ತದೆ. ಹಣ್ಣಿನ ನಿಯಮಿತ ಸೇವನೆಯು ಗಂಟಲು ಬೇನೆಯಿಂದ ಬಿಡುಗಡೆ ಮಾಡುತ್ತದೆ. ಹೃದಯ ದೌರ್ಬಲ್ಯ ದೂರವಾಗಬೇಕೆಂದರೆ ನಿತ್ಯ ಅನಾನಸ್ ಹಣ್ಣು ಸೇವಿಸುವುದು ಉತ್ತಮ.ಪಿತ್ತಕೋಶ ಊತ, ಮೂತ್ರಕಟ್ಟುವಿಕೆ, ಕಣ್ಣಿನ ಸುತ್ತ ಊದಿಕೊಳ್ಳುವಿಕೆ ಮುಂತಾದ ಸಮಸ್ಯೆಗಳನ್ನು ಅನಾನಸ್ ಸೇವಿಸುವಿಕೆ ಇಲ್ಲವಾಗಿಸುತ್ತದೆ.

Image result for pineapple

ಅನಾನಸ್ ತಿಂದು ಹಾಲು ಕುಡಿಯಬೇಕು. ಇದರ ಹೊರತಾಗಿ ಬೇರೇನನ್ನೂ ಸೇವಿಸಬಾರದು. ಈ ರೀತಿ ಮಾಡುವುದರಿಂದ ಇವೆಲ್ಲ ಸಮಸ್ಯೆಗಳ ನಿವಾರಣೆಯಾಗುತ್ತದೆ. ಧೂಮಪಾನದಿಂದ ಉಂಟಾಗುವ ದುಷ್ಪರಿಣಾಮಗಳನ್ನು ಕಡಿಮೆ ಮಾಡುವ ಶಕ್ತಿ ಅನಾನಸ್‍ಗಿದೆ. ಕಾಳುಮೆಣಸಿನ ಪುಡಿ ಹಾಕಿ ಅನಾನಸ್ ಸೇವಿಸುವುದರಿಂದ ಕೆಮ್ಮು, ಕಫ ಕಡಿಮೆಯಾಗುತ್ತದೆ. ಜೇನಿನೊಂದಿಗೆ ಅನಾನಸ್ ಸೇವಿಸುವದರಿಂದ ಯಕೃತ್ತಿನ ದೋಷ, ಕಾಮಾಲೆ ಗುಣವಾಗುತ್ತದೆ. ಕಜ್ಜಿ, ತುರಿಕೆ ಇದ್ದ ಜಾಗಕ್ಕೆ ಹಣ್ಣಿನ ರಸ ಹಚ್ಚುವುದರಿಂದ ವಾಸಿಯಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top