ಸಮಾಚಾರ

ಪವನ್ ಕಲ್ಯಾಣ್’ಗೆ ಮಸಾಜ್ ಮಾಡೋಕೆ ಬೆಂಗಾಲಿ ಹುಡುಗಿಯರೇ ಬೇಕಂತೆ: ಬೆಚ್ಚಿ ಬೀಳಿಸುವ ವಿಚಾರ ಬಹಿರಂಗಪಡಿಸಿದ ನಟಿ.

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಟಾಲಿವುಡ್ ಅಂಗಳದಲ್ಲಿ ಕಳೆದ ಎರಡು ವಾರದಿಂದ ನ್ಯೂಕ್ಲಿಯರ್ ಬಾಂಬಿನಂತೆ ಸ್ಪೋಟವಾಗಿರುವ ಕಾಸ್ಟಿಂಗ್ ಕೌಚ್ ವಿವಾದ ದಿನಕ್ಕೊಂದು ರೀತಿಯ ಸ್ಪೋಟಕ ವಿಚಾರಗಳನ್ನು ಆಚೆ ತರುತ್ತಿದ್ದು. ಮಹಾನ್ ಸಾಚಾಗಳಂತೆ ಪೋಸು ಕೊಡುವ ನಟ, ನಿರ್ದೇಶಕ, ನಿರ್ಮಾಪಕರ ಅಸಲಿ ಮುಖಗಳು ಹೊರಗಡೆ ಬರುತ್ತಿವೆ. ಇತ್ತೀಚಿಗೆ ಪಾತ್ರಕ್ಕಾಗಿ ಪಲ್ಲಂಗಕ್ಕೆ ಕರೆಯುವ ಕಾಮುಕರ ವಿರುದ್ಧ ರೊಚ್ಚಿಗೆದ್ದು ನಡುರಸ್ತೆಯಲ್ಲಿ ಬಟ್ಟೆಗಳನ್ನು ಬಿಚ್ಚಿ ಅರೆ ಬೆತ್ತಲೆ ಪ್ರತಿಭಟನೆ ನಡೆಸಿದೇಟಿಗೆ ತೆಲುಗು ಚಿತ್ರರಂಗದೊಳಗೆ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದ್ದು ಶ್ರೀರೆಡ್ಡಿಯವರ ಕೂಗಿಗೆ ಚಿತ್ರರಂಗದ ಅನೇಕ ನಟಿಯರು ದನಿಗೂಡಿಸಿದ್ದಾರೆ.

 

 

ರಾಣಾ ದಗ್ಗುಬಾಟಿ ಸಹೋದರ ಅಭಿರಾಮ್, ನಿರ್ಮಾಪಕ ವಾಕಡಾ ಅಪ್ಪಾರಾವ್, ನಿರ್ದೇಶಕ ಮಹೇಶ್ ಕತ್ತಿ, ನಟ ರಾಜಶೇಖರ್, ಸ್ಕ್ರಿಪ್ಟ್ ರೈಟರ್ ಕೋನ ವೆಂಕಟ್ ಸೇರಿದಂತೆ ಚಿತ್ರರಂಗದ ಹತ್ತು ಹಲವು ಗಣ್ಯರ ಅಸಲಿ ಬಂಡವಾಳವನ್ನು ಬಯಲು ಮಾಡುತ್ತಿರುವ ಅನ್ಯಾಯಕ್ಕೊಳಗಾದ ನಟಿ ಮಣಿಯರು ಅಂತವರ ವಿರುದ್ಧ ತೊಡೆತಟ್ಟಿ ನಿಂತಿದ್ದಾರೆ. ಈ ನಡುವೆ ಟಾಲಿವುಡ್ಡಿನ ಟಾಪ್ ಸ್ಟಾರ್ ಎಂದೇ ಕರೆಸಿಕೊಳ್ಳುವ ಪವನ್ ಕಲ್ಯಾಣ್ ಕುರಿತಾದ ಸ್ಪೋಟಕ ಮಾಹಿತಿಯನ್ನು ನಟಿ ಶ್ರುತಿ ಹೊರಹಾಕಿದ್ದು ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

 

 

ಎಲ್ಲಾರು ಪವನ್ ಕಲ್ಯಾಣ್, ಪವನ್ ಕಲ್ಯಾಣ್ ಅಂತಾರೆ..ಅಷ್ಟಕ್ಕೂ ಪವನ್ ಕಲ್ಯಾಣ್ ತಮ್ಮ ಅಭಿಮಾನಿಗಳಿಗೋಸ್ಕರ ಏನು ಮಾಡಿದ್ದಾರೆ. ಸಿನಿಮಾ ಆಯ್ತು, ಇದೀಗ ತಮ್ಮ ಅಭಿಮಾನಿಗಳನ್ನು ಬಳಸಿಕೊಂಡು ರಾಜಕೀಯ ಆರಂಭಿಸಿದ್ದಾರೆ. ಬೇಕಾದಷ್ಟು ಆಸ್ತಿಯನ್ನು ಕೊಂಡುಕೊಂಡಿದ್ದಾರೆ, ಅಮರಾವತಿಯ ಇನ್ನೂರು ಕೋತಿ ಬೆಲೆ ಬಾಳುವ ಮನೆಯನ್ನು ಕೊಂಡುಕೊಂಡಿದ್ದಾರೆ. ಇಷ್ಟೊಂದು ದುಡ್ಡನ್ನೆಲ್ಲಾ ಕೇವಲ ಸಿನಿಮಾದಲ್ಲಿ ಮಾತ್ರ ಪವನ್ ಕಲ್ಯಾಣ್ ಸಂಪಾದಿಸಿದ್ದಾರಾ? ಪವನ್ ಕಲ್ಯಾಣ್ ಅವರ ಸಿನಿಮಾಗಳು ಹಿಟ್ ಆಗಿದ್ದೇ ಕೆಲವೇ ಕೆಲವು ಹೀಗಿದ್ದರೂ ಇಷ್ಟೊಂದು ಹಣ ಅವರಿಗೆ ಎಲ್ಲಿಂದ ಬಂತು ಎಂದು ಶ್ರುತಿ ಪ್ರಶ್ನಿಸಿದ್ದಾರೆ.

 

 

“ಪವನ್ ಕಲ್ಯಾಣ್ ಅಂತೀರಲ್ಲ ಅಸಲಿಗೆ ಆತನ ಬಗ್ಗೆ ನಿಮಗೆ ಏನಾದ್ರೂ ಗೊತ್ತಾ? ಆತನಿಗೆ ಮಸಾಜ್ ಮಾಡಲು ಬೆಂಗಾಲಿ ಹುಡುಗಿಯರೇ ಬೇಕಂತೆ. ತೆಲುಗು ಹುಡುಗಿಯರ ಕೈಯಲ್ಲಿ ಮಾಡಿದ್ರೆ ಆಗಲ್ಲವಂತೆ. ಪವನ್ ಕಲ್ಯಾಣ್ ನೀವೆಲ್ಲಾ ತಿಳಿದುಕೊಂಡಿರುವಿಕೆ ರೀತಿ ಇಲ್ಲ, ನನ್ ಜೊತೆ ಬನ್ನಿ ಆತನ ಅಸಲಿ ಮುಖವನ್ನು ತೋರುಸ್ತೀನಿ” ಎಂದು ಪವನ್ ಕಲ್ಯಾಣ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top