ಅರೋಗ್ಯ

ಗ್ಯಾಸ್ಟ್ರಿಕ್ ಪ್ರಾಬ್ಲಮ್’ನಿಂದ ಎದೆಉರಿ ಅಂತ ಕೊರಕ್ತಿರೋರು ಮನೆಯಲ್ಲೇ ಇರೋ ಈ ಪರಿಹಾರ ಕಂಡ್ಕೊಳಿ.

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

 ಗ್ಯಾಸ್ಟ್ರಿಕ್ ಪ್ರಾಬ್ಲಮ್ ಯಿಂದ ಎದೆಉರಿ ಅಂತ ಕೊರಕ್ತಿರೋರು ಮನೆಯಲ್ಲೇ ಈ 9 ವಸ್ತುಗಳಿಂದ ಪರಿಹಾರ ಕಂಡ್ಕೊಳಿ.

ಎಲ್ಲರನ್ನು ಕಾಡುವ ಆರೋಗ್ಯ ಸಮಸ್ಯೆಗಳಲ್ಲಿ, ಗ್ಯಾಸ್ಟ್ರಿಕ್‌ ಸಮಸ್ಯೆ ಮೊದಲ ಸ್ಥಾನದಲ್ಲಿದೆ. ಹೊಟ್ಟೆಯಲ್ಲಿ ಯಾವ ಸಮಸ್ಯೆ ಬಂದರೂ ಅದಕ್ಕೆ ‘ಗ್ಯಾಸ್ಟ್ರಿಕ್‌’ ಎಂಬ ಹಣೆಪಟ್ಟಿ ಕಟ್ಟುವುದು ಜನರಲ್ಲಿ ರೂಢಿಯೇ ಆಗಿದೆ.

ಗ್ರಾಸ್ಟ್ರಿಕ್ ಸಮಸ್ಯೆಗೆ ಪ್ರಮುಖ ಕಾರಣಗಳು:

ಆಹಾರದಲ್ಲಿ ಅತಿಯಾಗಿ ಮಸಾಲೆ ಪದಾರ್ಥಗಳನ್ನು ಬಳಸುವುದು.ಅತಿಯಾದ ಮದ್ಯಪಾನ ಮತ್ತು ಧೂಮಪಾನ. ನೋವಿನ ಮಾತ್ರೆಗಳನ್ನು ಅತಿಯಾಗಿ ನುಂಗುವುದು.ಎಣ್ಣೆಯಲ್ಲಿ ಕರೆದ ಕುರುಕಲು ತಿಂಡಿಯನ್ನು ಹೆಚ್ಚಾಗಿ ತಿನ್ನುವುದೂ, ಅಶುಚಿ ಆಹಾರವನ್ನು ಸೇವಿಸುವುದು ಅಲ್ಲದೆ ಇನ್ನು ಅನೇಕ ಕಾರಣಗಳಿಂದ ಈ ಸಮಸ್ಯೆ ಉಂಟಾಗುತ್ತದೆ.

ಗ್ಯಾಸ್ಟ್ರಿಕ್ ಸಮಸ್ಯೆಗೆ ಮನೆಯಲ್ಲೇ ಮಾಡಿಕೊಳ್ಳಬಹುದಾದ ಮನೆಮದ್ದು ಇಲ್ಲಿದೆ:

 

1.ನಿಂಬೆಹಣ್ಣಿನ ರಸಕ್ಕೆ ಸ್ವಲ್ಪ ಪುದೀನಾರಸ, ಶುಂಠಿ ರಸ ಹಾಗೂ ಸ್ವಲ್ಪ ಮೆಣಸುಪುಡಿ ಹಾಕಿ ಕುಡಿಯುವುದರಿಂದ ಹೊಟ್ಟೆನೋವು ಶಮನಗೊಳ್ಳುತ್ತದೆ.

2. ಒಂದು ಚಮಚ ಸೋಂಪು, ನಿಂಬೆ ರಸ ಹಾಗೂ ಸ್ವಲ್ಪ ಉಪ್ಪು ಮತ್ತು ಕರಿಮೆಣಸಿನಪುಡಿಯನ್ನು ಬೆಚ್ಚಗಿನ ನೀರಿಗೆ ಹಾಕಿ ಕುಡಿಯುವುದರಿಂದ ಹೊಟ್ಟೆನೋವು ಶೀಘ್ರದಲ್ಲಿಯೇ ಶಮನಗೊಳ್ಳುತ್ತದೆ.

3.7-8 ಚಮಚ ನೀರಿಗೆ ಉಪ್ಪು ಮಿಶ್ರಿತ ಬೆಳ್ಳುಳ್ಳಿ ರಸವನ್ನು ಮಿಶ್ರಣ ಮಾಡಿ ದಿನಕ್ಕೆರಡು ಬಾರಿ ಸೇವಿಸುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಶಮನಗೊಳ್ಳುತ್ತದೆ.

4.ಕೊತ್ತಂಬರಿ (ದನಿಯಾ)ಬೀಜ ಮತ್ತು ಒಣಶುಂಠಿಯನ್ನು ಚೆನ್ನಾಗಿ ಜಜ್ಜಿಕೊಂಡು ಕುದಿಯುವ ನೀರಿಗೆ ಹಾಕಿ ಸ್ವಲ್ಪ ಹೊತ್ತಿನ ನಂತರ ಇದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಶೋಧಿಸಿ ಕುಡಿದರೆ ಗ್ಯಾಸ್ಟ್ರಿಕ್ ಸಮಸ್ಯೆ ಮಾಯವಾಗುತ್ತದೆ

 

5.ತುಳಸಿ ರಸ, ಬೆಳ್ಳುಳ್ಳಿ ರಸ ಹಾಗೂ ಜೇನುತಪ್ಪವನ್ನು ಸಮಭಾಗ ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿ ಸೇವಿಸಿದರೆ ಹೊಟ್ಟೆಯಲ್ಲಿನ ಉರಿ ಕಡಿಮೆಯಾಗುತ್ತದೆ.

6.ರಾತ್ರಿ ಕೊತ್ತಂಬರಿ ಮತ್ತು ಮೆಂತ್ಯವನ್ನು ನೀರಲ್ಲಿ ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಎದೆಯುರಿ, ಹುಳಿ ತೇಗು, ಗ್ಯಾಸ್ ಟ್ರಬಲ್ ಶಮನವಾಗುತ್ತದೆ.

7.ಹಸಿ ಈರುಳ್ಳಿಯನ್ನು ಜಗಿದು ತಿನ್ನುವುದರಿಂದ ಈ ಸಮಸ್ಯೆ ಬಹು ಬೇಗ ನಿವಾರಣೆ ಯಾಗುತ್ತದೆ.

8.ಹುಳಿಯಿಲ್ಲದ ಮಜ್ಜಿಗೆಯನ್ನು ಹೆಚ್ಚು ಹೆಚ್ಚಾಗಿ ಕುಡಿಯೋದ್ರಿಂದ ಗ್ಯಾಸ್ಟ್ರಿಕ್ ಸಮಸ್ಯೆಯು ನಿವಾರಣೆಯಾಗುತ್ತದೆ.

9.ಕೆಲವರಿಗೆ ಬೇಗನೆ ತಿನ್ನುವ ಅಭ್ಯಾಸವಿರುತ್ತದೆ. ಮೆಲ್ಲನೆ ಅಗಿದು ತಿಂದರೆ ಆಹಾರ ಜೀರ್ಣಕ್ರಿಯೆಗೆ ಒಳ್ಳೆಯದು. ಊಟವನ್ನು ಸರಿಯಾದ ಸಮಯಕ್ಕೆ ಮಾಡುವುದು ಕೂಡ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ತಡೆಯಲು ಒಂದು ಮಾರ್ಗ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top