ಸಮಾಚಾರ

ಮನೆ ಬಾಡಿಗೆ ವಿವಾದ: ಮನೆ ಖಾಲಿ ಮಾಡುವಂತೆ ನಟ ಯಶ್ ಗೆ ಕೋರ್ಟ್ ಆದೇಶ!

ಸಮಯಕ್ಕೆ ಸರಿಯಾಗಿ ಬಾಡಿಗೆ ಕಟ್ಟದೆ ಬೆದರಿಕೆ ಹಾಕಿದ ಆರೋಪದ ಮೇಲೆ ಮನೆ ಮಾಲೀಕರು ಕೊಟ್ಟ ದೂರಿನ ಆಧಾರದಲ್ಲಿ ನಟ ಯಶ್ ಅವರಿಗೆ ಇನ್ನು ಮೂರು ತಿಂಗಳಲ್ಲಿ ಮನೆ ಖಾಲಿ ಮಾಡುವಂತೆ 42ಸಿಟಿ ಸಿವಿಲ್ ಕೋರ್ಟ್ ಮಂಗಳವಾರ ಆದೇಶಿಸಿದೆ.

 

 

ಬನಶಂಕರಿ 3ನೇ ಹಂತದಲ್ಲಿನ ಗಿರಿನಗರದಲ್ಲಿರುವ ತೆಲಂಗಾಣ ಮೂಲದ ಮುನಿಪ್ರಸಾದ್ ಮನೆಯಲ್ಲಿ 2010ರ ಅಕ್ಟೋಬರ್ 16 ರಿಂದ ವಾಸವಿರುವ ಯಶ್ ಕುಟುಂಬ 2013ರಿಂದ ಬಾಡಿಗೆ ಕೊಟ್ಟಿಲ್ಲ. ಕೇಳಿದರೆ ಬೆದರಿಕೆ ಹಾಕುತ್ತಿದ್ದಾರೆ, ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಎಂದು ಆರೋಪಿಸಿ ಮುನಿಪ್ರಸಾದ್ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣ ಸಂಭಂದ ವಿಚಾರಣೆ ನಡೆಸಿದ ನಗರ ಸಿವಿಲ್ ಕೋರ್ಟ್, ನಟ ಯಶ್ ಅವರ ತಾಯಿ ಪುಷ್ಪಾ ಅವರಿಗೆ ಮೂರು ತಿಂಗಳಲ್ಲಿ ಮನೆ ಖಾಲಿ ಮಾಡುವಂತೆ ಮತ್ತು ಮನೆ ಬಾಡಿಗೆ ಬಾಕಿ ಹಣವನ್ನು ಮನೆ ಮಾಲೀಕರಿಗೆ ಪಾವತಿಸುವಂತೆ ಕೋರ್ಟ್ ಆದೇಶಿಸಿದೆ.

 

 

2010ರ ಅಕ್ಟೋಬರ್‌ನಲ್ಲಿ ಯಶ್ ಅವರ ಕುಟುಂಬಕ್ಕೆ ಮನೆಯನ್ನು 11 ತಿಂಗಳ ಅವಧಿಗೆಂದು ಭೋಗ್ಯಕ್ಕೆ ನೀಡಲಾಗಿತ್ತು. 2011ರಲ್ಲಿ ಭೋಗ್ಯದ ಅವಧಿ ಮುಗಿದ ನಂತರ ಬಾಡಿಗೆ ನೀಡಬೇಕಿತ್ತು ಆದರೆ ಬಾಡಿಗೆಯನ್ನೂ ನೀಡದೆ ಮನೆಯನ್ನೂ ಖಾಲಿ ಮಾಡದೆ ಸುಮಾರು 21.37 ಲಕ್ಷ ರೂ. ಬಾಡಿಗೆ ಉಳಿಸಿಕೊಂಡಿದ್ದಾರೆ. ಬಾಡಿಗೆ ಕೊಡಿ ಎಂದು ಕೇಳಿದರೆ ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ ಎಂದು ಮುನಿಪ್ರಸಾದ್ ಆರೋಪಿಸಿದ್ದರು.

ಆ ವೇಳೆ “ಬಾಡಿಗೆ ಕೊಡುವುದಿಲ್ಲ ಎಂದು ನಾವು ಯಾವತ್ತೂ ಹೇಳಿಲ್ಲ. ಮನೆ ಮಾಲೀಕರೇ ಬಾಡಿಗೆ ಪಡೆಯಲು ಬಂದಿಲ್ಲ. ಬಾಡಿಗೆ ಕಟ್ಟಲು ನಾವು ಸಿದ್ಧರಿದ್ದೇವೆ. ಮನೆ ಖಾಲಿ ಮಾಡಲು ಕಾಲಾವಕಾಶ ಕೇಳಿದ್ದೆವು ಅಷ್ಟೇ, ಬೆದರಿಕೆ ಹಾಕಿಲ್ಲ.” ಎಂದು ಯಶ್ ತಾಯಿ ಕೋರ್ಟ್ ನಲ್ಲಿ ಹೇಳಿಕೆ ಕೊಟ್ಟಿದ್ದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top