ಅರೋಗ್ಯ

ಮನೆ ತೋಟದಲ್ಲಿ ಬೆಳೆಯೋ ದೊಡ್ಡಪತ್ರೆ 18 ಖಾಯಿಲೆಗಳಿಗೆ ರಾಮಬಾಣ ಅದಕ್ಕೆ ಸುಮ್ನೆ ದಿನ ಒಂದ್ ಎಲೆ ಬಾಯ್ಗ್ ಹಾಕೊಳ್ಳಿ

ಮನೆ ತೋಟದಲ್ಲಿ ಬೆಳೆಯೋ ದೊಡ್ಡಪತ್ರೆ ಕೆಮ್ಮು ,ನೆಗಡಿ ,ತಲೆನೋವಿಗೆ ರಾಮಬಾಣ ,ಸುಮ್ನೆ ದಿನ ಒಂದ್ ಎಲೆ ಬಾಯ್ಗ್ ಹಾಕೊಳ್ಳಿ !

ಈ ಕರ್ಪೂರವಳ್ಳಿ(ದೊಡ್ಡಪತ್ರೆ ) ಸಸ್ಯದ ಎಲೆ ಕರ್ಪೂರದ ವಾಸನೆ ಹೊಂದಿರುವುದರಿಂದ ಇದಕ್ಕೆ ಕರ್ಪೂರವಳ್ಳಿ ಎಂದು ಕರೆಯುತ್ತಾರೆ ,
ಈ ಸಸ್ಯವನ್ನು ಮಕ್ಕಳು ಮತ್ತು ಶಿಶುಗಳಿಗೆ ಚಿಕಿತ್ಸೆ ನೀಡಲು ಮನೆ ತೋಟದಲ್ಲಿ ಬೆಳೆಯಲಾಗುತ್ತದೆ.

 

ಔಷಧೀಯ ಗುಣಗಳು:

1.ದೊಡ್ಡಪತ್ರೆ ಎಲೆಗಳನ್ನು ನುಜ್ಜುಗುಜ್ಜು ಮಾಡಿ ,ಜೇನುನೊಣದ ಕುಟುಕುಗಳು ಅಥವಾ ಯಾವುದೇ ಕೀಟ ಕಡಿತ ,ಕೆಲವು ಚರ್ಮದ ಉರಿಯೂತ ನೋವು ಮತ್ತು ಗಾಯಗಳನ್ನು ಗುಣಪಡಿಸುತ್ತದೆ.

2.ದೊಡ್ಡಪತ್ರೆ ಎಲೆಗಳನ್ನು ಶುಂಠಿಯರಸದಲ್ಲಿ ಬೆರೆಸಿ ಬೆಚ್ಚಗಿನ ತಾಪಮಾನದಲ್ಲಿ ಸುಟ್ಟು , ತಣ್ಣಗಾದಮೇಲೆ ತಲೆಗೆ ಪಟ್ಟು ಹಾಕಿಕೊಳ್ಳಬೇಕು , ಇದು ಕೆಮ್ಮು ,ತಲೆ ನೋವಿಗೆ ರಾಮಬಾಣ.

3.ಜೇನುತುಪ್ಪ ಹಾಗು ದೊಡ್ಡಪತ್ರೆ ಎಲೆಗಳನ್ನು ತಿಂದರೆ ಗಂಟಲ ಕಿರಿಕಿರಿ ನಿಲ್ಲುತ್ತದೆ.

4.ಕಟ್ಟಿದ ಮೂಗಿಗೆ ದೊಡ್ಡಪತ್ರೆ ಎಲೆಗಳನ್ನು ನುಜ್ಜುಗುಜ್ಜು ಮಾಡಿ ಇದರ ವಾಸನೆ ಸೇವಿಸಿದರೆ ಕಟ್ಟಿದ ಮೂಗು ವಾಸಿಯಾಗುವುದು.

5. 5 ರಿಂದ 10 ನಿಮಿಷಗಳ ಕಾಲ ಬಿಸಿ ನೀರಿನಲ್ಲಿ ಕುದಿಸಿ ತಲೆಗೆ ಶಾಂಪೂ ನಂತರ ಹಾಕಿ ತೊಳೆದರೆ ತಲೆ ಹೊಟ್ಟು ದೂರವಾಗುತ್ತದೆ.

 

 

6.ಶ್ವಾಸಕೋಶದ ಉತ್ತೇಜಕ ಮತ್ತು ಡಯಾಫೋರ್ಟಿಕ್ ಆಗಿದೆ.

7.ತಾಜಾ ಎಲೆಗಳ ಜ್ಯೂಸ್ ಯುರಿಕಟೇರಿಯಾ ಮತ್ತು ಅಲರ್ಜಿ ಸಮಸ್ಯೆಗಳಿಗೆ ಬಳಸಲಾಗುತ್ತದೆ.

8.ಇದು ಗರ್ಭಾಶಯದ ಸ್ನಾಯುಗಳು ಮತ್ತು ಕರುಳುಗಳನ್ನು ತೀಕ್ಷ್ಣಗೊಳಿಸುತ್ತದೆ.

9.ಇದು ಸ್ನಾಯುವಿನ ವಿಶ್ರಾಂತಿಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

10.ಈ ಎಲೆಗಳು ಗ್ಲುಕೋಸೈಡ್ಗಳು, ಲ್ಯೂಟಿಯೋಲಿನ್ ಮತ್ತು ಆಪಿಗೆನಿನ್ ಅಂಶಗಳನ್ನು ಒಳಗೊಂಡಿರುತ್ತವೆ.

 

 

11.ಕೆಮ್ಮು ಮತ್ತು ಶೀತಕ್ಕೆ ಉತ್ತಮವಾದ ಮನೆ ಪರಿಹಾರ.

12.ಇದು ದೇಹದ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಪ್ರೇರೇಪಿಸುತ್ತದೆ.

13.ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ.

14.ಸ್ತ್ರೀ ಮುಟ್ಟಿನ ಚಕ್ರವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

15.ಗ್ಯಾಸ್ಟ್ರಿಕ್ ತಡೆಯುತ್ತದೆ.

16.ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ.

 

 

17.ದೇಹದಲ್ಲಿ ಹೊಸ ಜೀವಕೋಶಗಳು ಮತ್ತು ಅಂಗಾಂಶಗಳನ್ನು ಪುನರುತ್ಪಾದಿಸಲು ಸಹಾಯ ಮಾಡುತ್ತದೆ.

18.ರಕ್ತವನ್ನು ಶುದ್ಧೀಕರಿಸುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top