ಸಮಾಚಾರ

ನಾವು ಸೋತಿದ್ದೆಲ್ಲಿ ಎಂಬುದನ್ನು ತಿಳಿಸಿದ ವಿರಾಟ್ ಕೊಹ್ಲಿ

ಬೆಂಗಳೂರಿನಲ್ಲಿ ನಿನ್ನೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ತಂಡ ವಿರುದ್ಧ ನಡೆದ ಪಂದ್ಯದಲ್ಲಿ ಪಿಚ್ ಕುರಿತು ತಪ್ಪಾಗಿ ಗ್ರಹಿಸಿದ್ದೆ ನಾವು ಸೋಲಲು ಕಾರಣವಾಯ್ತು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

 

 

ಪಂದ್ಯ ಸೋತ ಬಳಿಕ ಮಾತನಾಡಿದ ಕೊಹ್ಲಿ. ಚಿನ್ನಸ್ವಾಮಿ ಪಿಚ್ ಸ್ಲೋ ಟರ್ನ್ ಮುಖೇನ ಮೂಲಕ ಬೌಲರ್ ಗಳಿಗೆ ಸಹಕಾರಿಯಾಗಲಿದೆ ಎಂದು ಗ್ರಹಿಸಿದ್ದೆವು. ಆದರೆ ಬ್ಯಾಟ್ಸ್ ಮನ್ ಗಳಿಗೆ ಸ್ವರ್ಗವಾಯಿತು. ಪ್ರಥಮ ಇನ್ನಿಂಗ್ಸ್ ನಲ್ಲಿ ಬಾಲ್ ನೇರವಾಗಿ ಬ್ಯಾಟ್ ಸಂಪರ್ಕಕ್ಕೆ ಸಿಗುತ್ತಿತ್ತು. ಅಲ್ಲದೇ ನಾವು 200 ಪ್ಲಸ್ ರನ್ ಗುರಿ ಪಡೆಯುವ ಕುರಿತು ಯೋಚನೆ ಮಾಡಿರಲಿಲ್ಲ ಎಂದು ತಿಳಿಸಿದ್ದಾರೆ.

 

 

ಇದೇ ವೇಳೆ ಹೆಚ್ಚಿನ ರನ್ ನೀಡಿದ ತಮ್ಮ ತಂಡದ ಬೌಲರ್ ಗಳ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಉಮೇಶ್ ಯಾದವ್ 4 ಓವರ್ ಬೌಲ್ ಮಾಡಿ 59 ರನ್ ನೀಡಿದ್ದಾರೆ. ಆದರೆ ಪಿಚ್ ನಲ್ಲಿ ಈ ಹಿಂದೆ 400 ರನ್ ಗಳಿಸಿದ ಉದಾಹರಣೆ ಇದೆ. ಈ ಪಂದ್ಯದಲ್ಲಿ ಬೌಲರ್ ಗಳು ಹೆಚ್ಚು ಪರಿಣಾಮಕಾರಿಯಾಗಿ ಇರಬೇಕಿತ್ತು ಎಂದು ನಾನು ಹೇಳುವುದಿಲ್ಲ ಎಂದು ಕೊಹ್ಲಿ ಮಾಹಿತಿ ನೀಡಿದರು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top