ಮನೋರಂಜನೆ

ತೆರೆ ಮೇಲೆ ಕನ್ನಡದ ಈ ಸ್ಟಾರ್ ನಟನ ಜೊತೆ ಕಿಸ್ ಮಾಡೋಕೆ ನಟಿ ರಾಗಿಣಿಗೆ ಇಷ್ಟವಂತೆ!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ವೀರ ಮದಕರಿ ಚಿತ್ರದಲ್ಲಿ ಕಿಚ್ಚಾ ಸುದೀಪ್ ಜೋಡಿಯಾಗಿ ಬಂದ ಘಳಿಗೆಯಲ್ಲಿ ಚಿಗರೆಯಂತಿದ್ದ ನಟಿ ರಾಗಿಣಿ ಸ್ಯಾಂಡಲ್‌ವುಡ್‌ನ ಆಕ್ಷನ್ ಕ್ವೀನ್ ಅಂತಲೇ ಫೇಮಸ್ಸು. ಕೇವಲ ಸಿನಿಮಾ ಮಾತ್ರವಲ್ಲದೆ ಫಿಟ್ನೆಸ್ಸು, ಕಾಂಟ್ರವರ್ಸಿ ಯಂತಹ ನಾನಾ ವಿಚಾರವಾಗಿ ಈ ತುಪ್ಪದ ಹುಡುಗಿ ಸುದ್ದಿಯಾಗಿತ್ತಲೇ ಇರುತ್ತಾರೆ. ಇಂತಿಪ್ಪ ರಾಗಿಣಿ ದ್ವಿವೇದಿಗೆ ತೆರೆ ಮೇಲೆ ಕನ್ನಡದ ಈ ಸ್ಟಾರ್ ನಟನ ಜೊತೆಗೆ ಕಿಸ್ ಮಾಡಬೇಕು ಎಂಬ ಬಯಕೆ ಇದೆಯಂತೆ.. ಆ ಸ್ಟಾರ್ ನಟ ಯಾರು ಅಂತೀರಾ?

 

 

ಅದು ಬೇರೆ ಯಾರು ಅಲ್ಲ ನಮ್ಮ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್. ಈಗಂತ ಖುದ್ದು ರಾಗಿಣಿಯವರೇ ಹೇಳಿಕೊಂಡಿದ್ದಾರೆ. ನಂ 1 ಯಾರಿ ವಿತ್ ಶಿವಣ್ಣ ಕಾರ್ಯಕ್ರಮದ ಮೊನ್ನೆಯ ಸಂಚಿಕೆಯಲ್ಲಿ ನಟಿಯರಾದ ರಕ್ಷಿತಾ ಮತ್ತು ರಾಗಿಣಿ ಅಥಿತಿಗಳಾಗಿ ಬಂದಿದ್ದರು. ಸ್ವಲ್ಪ ಮೋಜು ಮಸ್ತಿ ಹರಟೆಗಳೊಂದಿಗೆ ಮಾತುಕತೆ ನಡೆಸುವ ಈ ಕಾರ್ಯಕ್ರಮದಲ್ಲಿ ಶಿವಣ್ಣ ಕೇಳುವ ಥರಥರ ಪ್ರಶ್ನೆಗಳಿಗೆ ಅಥಿತಿಗಳು ಮುಕ್ತವಾಗಿ ಉತ್ತರ ಕೊಡಬೇಕು ಎನ್ನುವುದು ಕಾರ್ಯಕ್ರಮದ ನಿಯಮ. ಅದರಂತೆ ರಾಗಿಣಿ ಮತ್ತು ರಕ್ಷಿತಾ ಕೂಡ ತಮ್ಮ ಕುರಿತಾತ ಕೆಲವು ಇಂಟರೆಸ್ಟಿಂಗ್ ವಿಚಾರಗಳನ್ನು ಶಿವಣ್ಣನ ಮುಂದೆ ಬಿಚ್ಚಿಟ್ಟಿದ್ದಾರೆ.

 

 

ಕಾರ್ಯಕ್ರಮದ ಮೊದಲನೇ ಸುತ್ತು (ಸತ್ಯ ಅಥವಾ ಧೈರ್ಯ) ನಲ್ಲಿ ಸತ್ಯವನ್ನ ಹೇಳಲು ರಾಗಿಣಿ ಆಯ್ದುಕೊಂಡಾಗ ‘ತೆರೆ ಮೇಲೆ ಯಾವ ನಟನ ಜೊತೆ ಕಿಸ್ ಮಾಡೋಕೆ ಕಾಯ್ತಾ ಇದ್ದೀರಾ?’ ಎಂದು ರಾಗಿಣಿಗೆ ಶಿವಣ್ಣ ಪ್ರಶ್ನಿಸಿದರು. ಅದಕ್ಕೆ ಬುದ್ದಿವಂತೆಯಂತೆ ಉತ್ತರ ಕೊಡಲು ಮುಂದಾದ ರಾಗಿಣಿ ನಗುತ್ತಾ ”ನನಗೆ ಎಲ್ಲ ನಟರ ಜೊತೆಗೂ ಆಸೆ ಇದೆ ” ಎಂದರು.ನಂತರ “ಯಾರಾದರೂ ಒಬ್ಬರನ್ನ ಹೇಳಿ” ಅಂದಾಗ ರಾಗಿಣಿ “ಕಿಚ್ಚ ಸುದೀಪ್” ಅವರ ಹೆಸರನ್ನು ಹೇಳಿದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top